ಪುಟ:ಕರ್ನಾಟಕ ಗತವೈಭವ.djvu/೧೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೦೭
೧೩ನೆಯ ಪ್ರಕರಣ - ಕರ್ನಾಟಕದ ಕಟ್ಟಡಗಳು

ವರು ಇದನ್ನು ವರ್ಣಿಸಿರುವುದೇನೆಂದರೆ – “It shows the extreme limit in florid magnificence to which the style advanced. The building is wholly in granite and carved with a boldness and expression of power nowhere surpassed in the buildings of its class.

ಸಾರಾಂಶ:- ಈ ತರದ ಕಟ್ಟಿನ ಗುಡಿಗಳಲ್ಲಿ ಹೂಬಳ್ಳಿಗಳ ಸುಳುವುಗಳನ್ನು ಕೆತ್ತುವ ಕೆಲಸವು ಎಷ್ಟು ಪರಿಣತಾವಸ್ಥೆಯನ್ನು ಹೊಂದಿತ್ತೆಂಬುದಕ್ಕೆ ಈ ಗುಡಿಯು ಉತ್ಕೃಷ್ಟವಾದ ಉದಾಹರಣೆಯಾಗಿದೆ. ಗುಡಿಯು ಅಚ್ಚ ಕರೆಕಲ್ಲಿನದು. ಈ ತರದ ಗುಡಿಗಳಲ್ಲಿ, ಇಷ್ಟು ಗಂಭೀರವಾಗಿ ಎದ್ದು ಕಾಣಿಸುವ ಗುಡಿಯು ಬೇರೆಲ್ಲಿಯೂ ಕಾಣಬರುವುದಿಲ್ಲ.
ಮೇಲೆ ವರ್ಣಿಸಿದ ಗುಡಿಗಳಲ್ಲದೆ ಕರ್ನಾಟಕ ರಾಜರೂ ಮತ್ತು ಧನವಂತರೂ ಕಟ್ಟಿಸಿದ ಎಷ್ಟೋ ಗುಡಿಗಳು ನೋಡತಕ್ಕವಾಗಿವೆ. ಕಾರ್ಲೆ, ಕಾನ್ಹೇರಿ, ಲಕ್ಕುಂಡಿ, ಐಹೊಳೆ, ಪಟ್ಟದಕಲ್ಲು ಮುಂತಾದ ಸ್ಥಳಗಳನ್ನು ಕರ್ನಾಟಕಸ್ಥರು ನೋಡಿ ಆನಂದಪಡಬೇಕು. ನಾವು ಮೇಲೆ ವರ್ಣಿಸಿದ ಗುಡಿಗಳನ್ನು ನೋಡದಿದ್ದರೆ - 'ಕರ್ನಾಟಕ'ರೆಂಬ ನಾಮವನ್ನು ಧರಿಸುವುದಕ್ಕೂ ನಾವು ಅರ್ಹರಿರುವುದಿಲ್ಲ. ಆ ಪ್ರತಿಯೊಂದು ಗುಡಿಗೂ, ಆ ಪದ್ಧತಿಯಿಂದ ಕಟ್ಟಿದ ಗುಡಿಗಳಲ್ಲಿ ಎಲ್ಲಕ್ಕೂ ಶ್ರೇಷ್ಟವೆಂದೇ ತಜ್ಞರು ಮಾನ್ಯತಾ ಪತ್ರವನ್ನು ಕೊಟ್ಟಿರುವರು. ಮತ್ತು ತಮ್ಮ ಲೆಕ್ಕಣಿಕೆಯಲ್ಲಿದ್ದಷ್ಟು ಸಾಮರ್ಥ್ಯದಿಂದ ಅದನ್ನು ವರ್ಣಿಸಿರುವರು.
ವಾಚಕರೇ, ನಮ್ಮ ಕರ್ನಾಟಕದ ಶಿಲ್ಪಶಾಸ್ತ್ರವು ಎಷ್ಟು ಪರಿಣತಾವಸ್ಥೆಗೆ ಮುಟ್ಟಿತ್ತೆಂಬುದಕ್ಕೆ ಇಷ್ಟು ವರ್ಣನೆಯು ಸಾಲದೇ?
ನ್ನು ಕೊನೆಗೆ ಶಿಲ್ಪಶಾಸ್ವಾಚಾರ್ಯರಾದ ಜಕಣಾಚಾರ್ಯರ ಕಥೆಯನ್ನು ಹೇಳಿ ಈ ಬೆಳೆದ ಪ್ರಕರಣವನ್ನು ಮುಗಿಸುವೆವು.
ಕಣಾಚಾರ್ಯರು ತುಮಕೂರ ಜಿಲ್ಲೆಯಲ್ಲಿಯ ಕೈದಾಳವೆಂಬ ಗ್ರಾಮದವರು. ಅವರು ಪ್ರಸಿದ್ಧ ಜ್ಯೋತಿಷ್ಯರು. ಅವರಿಗೆ ಮಗನು ಹುಟ್ಟಿದಾಗ ಅವರು ಅವನ ಕುಂಡಲಿಯನ್ನು ಪರೀಕ್ಷಿಸಲು ಆತನು ವ್ಯಭಿಚಾರಕ್ಕೆ ಹುಟ್ಟಿದವನೆಂದು ಅವರಿಗೆ ತಿಳಿಯಬಂದಿತು. ಕೂಡಲೆ, ಅವರು ವೈರಾಗ್ಯವನ್ನು ತಾಳಿ