ವೆಲ್ಲವೂ ತಮ್ಮ ಗಂಟಲಲ್ಲಿ ಇಳಿಯಿತೆಂಬ ಗರ್ವದಿಂದ ದಕ್ಷಿಣ ಹಿಂದುಸ್ಥಾನವನ್ನು ಕೂಡ ನುಂಗಿ ನೀರು ಕುಡಿಯಬೇಕೆಂದು ಮುಸಲ್ಮಾನರು ಹವಣಿಸಿದ ಸಮಯದಲ್ಲಿ ಆರ್ಯ ಧರ್ಮವನ್ನೂ, ಆರ್ಯ ಸುಧಾರಣೆಯನ್ನೂ, ಆರ್ಯ ವೈಭವವನ್ನೂ ಅವರ ಬಾಯಿಯೊಳಗಿಂದ ಬದುಕಿಸಿದ ಬಂಟರು ಇವರೇ ಅಲ್ಲವೇ? ಚದರಿ ಹೋದ ಕದಂಬ, ಹೊಯ್ಸಳ, ಗಂಗ ಇವರೇ ಮೊದಲಾದ ಅರಸರೆಲ್ಲರನ್ನೂ ಒಟ್ಟುಗೂಡಿಸಿ ದಕ್ಷಿಣ ಹಿಂದೂಮಾತೆಯ ಮರ್ಯಾದೆಯನ್ನು ಕಾಯ್ದವರಾರು! ಅಷ್ಟದಿಗ್ಗಜಗಳೆಂದು ಕರೆಯಲ್ಪಡುವ ವಿಖ್ಯಾತರಾದ ಪಂಡಿತ ಜನರಿಗೆ ಆಶ್ರಯಕೊಟ್ಟ ಆ ವೈಭವ ಶಾಲಿಯಾದ ವಿಜಯನಗರದ ಕೃಷ್ಣರಾಯನು ನಮ್ಮ ಅರಸನೆಂಬುದು ಕರ್ನಾಟಕರಿಗೆ ಗೊತ್ತಾಗಬಾರದೇ? ಸಾರಾಂಶ:- ಗಂಗ, ಕದಂಬ, ಚಾಲುಕ್ಯ, ರಾಷ್ಟ ಕೂಟ, ಹೊಯ್ಸಳ, ಯಾದವ, ವಿಜಯನಗರ ಮುಂತಾದ ಅರಸರು ಭಿನ್ನ ಭಿನ್ನ ಕಾಲಕ್ಕೆ ಬೇರೆ ಬೇರೆ ಹೆಸರುಗಳನ್ನು ಧರಿಸಿಕೊಂಡಿದ್ದರೂ, ಅವರೆಲ್ಲರೂ ಶುದ್ಧ ಕನ್ನಡಿಗರೇ ! ಅವರೂ ನಮ್ಮಂತೆಯೇ ಕನ್ನಡ ನುಡಿಯನ್ನೇ ಆಡುತ್ತಿದ್ದರು! ಈ ಕರ್ನಾಟಕವೇ ಅವರ ಜನ್ಮಭೂಮಿಯು; ಪೂರ್ವದ ಚಾಲುಕ್ಯರ ರಾಜಧಾನಿಯಾದ ಬಾದಾಮಿಯೂ, ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡವೂ, ಕೊನೆಯ ಚಾಲುಕ್ಯ ವಂಶದ ರಾಜಧಾನಿಯಾದ ಕಲ್ಯಾಣವೂ ವಿಜಯನಗರ ಅರಸರ ರಾಜಧಾನಿಯಾದ ವಿಜಯನಗರವೂ ಇವೆಲ್ಲ ಕೇವಲ ಕರ್ನಾಟಕದ ಪಟ್ಟಣಗಳೇ, ಆ ನಿಮ್ಮ ಅರಸರೆಲ್ಲರೂ ಈ 'ಕಾಡುಕಗ್ಗಾದ' ಕನ್ನಡ ಭಾಷೆಯನ್ನಾಡುವುದು ಅಪಮಾನಕಾರಕವೆಂದು ತಿಳಿಯಲಿಲ್ಲ! ಹೀಗೆ ನಿಮ್ಮಲ್ಲಿ ಶೂರರೂ ವೀರರೂ ಆದ ಅರಸರ ಪರಂಪರೆಯು ಬಲು ಪುರಾತನದಿಂದ ಅವಿಚ್ಛಿನ್ನವಾಗಿ ನಡೆದುಬಂದಿರಲು, ನೀವು ಹತವೀರ್ಯರಾಗಲು ಕಾರಣವೇನು !
ಇನ್ನು, ನಿಮ್ಮಲ್ಲಿಯ ಬುದ್ಧಿಶಾಲಿಗಳ ನಾಮಾವಳಿಯನ್ನು ಹೇಳೋಣವೇ? ಆದಕ್ಕಂತೂ ನೆಲೆಯೇ ಇಲ್ಲ. ಇಂದಿಗೆ ಜಗತ್ತಿನಲ್ಲಿ ಅತ್ಯಂತ ಪ್ರಮುಖವೆಂದು ಪರಿಗಣಿಸಲ್ಪಟ್ಟಿರುವ ಆದೈತ, ವಿಶಿಷ್ಟಾದ್ವತ, ದೈತಗಳೆಂಬ ಮೂರು ಮತಗಳ ಸ್ಥಾಪನಾಚಾರ್ಯರಿಗೆ ಈ ನಿಮ್ಮ ಪವಿತ್ರ ಭೂಮಿಯೇ ಕಾರ್ಯಕ್ಷೇತ್ರವಾಗಿತ್ತು. ಶಂಕರಾಚಾರ್ಯರ ಶೃಂಗೇರಿ, ಕೂಡಲಿ, ಹಂಪ, ಸಂಕೇಶ್ವರ, ಶಿವಗಂಗಾ ಮುಂತಾದ ಮಠಗಳು ಈ ಕರ್ನಾಟಕದಲ್ಲಿಯೇ ಇರುತ್ತವೆ, ಚೋಳ ರಾಜರ ಅನಿವಾರ್ಯವಾದ
ಪುಟ:ಕರ್ನಾಟಕ ಗತವೈಭವ.djvu/೫೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೬
ಕರ್ನಾಟಕ ಗತವೈಭವ