ಪುಟ:ಕರ್ನಾಟಕ ಗತವೈಭವ.djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೪೨
೬ ನೆಯು ಪ್ರಕರಣ – ಚಾಲುಕ್ಯರ ಪೂರ್ವದ ಕರ್ನಾಟಕದ ಇತಿಹಾಸ

ಆದರೆ ಕರ್ನಾಟಕವೆಲ್ಲವೂ ಇವರ ವಶವಾಗಿರಲಿಲ್ಲ. ರಾಷ್ಟ್ರಕೂಟ, ಪಲ್ಲವ, ಗಂಗ, ಬಾಣ, ಕದಂಬ ಮುಂತಾದ ಚಿಕ್ಕಚಿಕ್ಕ ರಾಜ್ಯಗಳು ಆಗ ಈ ದೇಶದಲ್ಲಿ ಆಳುತ್ತಿದ್ದಂತೆ ತೋರುತ್ತದೆ. ಆಂಧ್ರಕೃತ್ಯರು ಕ್ರಿ.ಶ. ೨೨೫ರ ವರೆಗೆ ಆಳಿದರು. ಮುಂದೆ ಸುಮಾರು ೧೦೦ ವರ್ಷಗಳ ಇತಿಹಾಸವು ಚೆನ್ನಾಗಿ ಗೊತ್ತಾಗಿರುವುದಿಲ್ಲ. ಆಗ ಕ್ಷತ್ರಪರೆಂಬ ಪರದೇಶಸ್ಥರು ಪ್ರಬಲವಾದಂತೆ ತೋರುತ್ತದೆ, ಮುಂದೆ ೫ನೆಯ ಶತಮಾನದಲ್ಲಿ ಚಾಲುಕ್ಯರು ತಲೆಯೆತ್ತಿದರು. ಈ ಚಾಲುಕ್ಯರು ಮುಂದೆ ಇಡೀ ಕರ್ನಾಟಕವನ್ನಲ್ಲ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡದ್ದರಿಂದ ಕರ್ನಾಟಕದ ವೈಭವದ ಇತಿಹಾಸವು ಅಲ್ಲಿಂದ ಪ್ರಾರಂಭವಾಗುತ್ತದೆ. ಆದರೆ ಅವರ ಇತಿಹಾಸವನ್ನು ಪ್ರಾರಂಭಮಾಡುವ ಮೊದಲು ಕದಂಬ, ಗಂಗರ ವಿಷಯವಾಗಿ ಸಂಕ್ಷೇಪವಾಗಿ ಹೇಳುವ ಅವಶ್ಯವಿದೆ, ಏಕೆಂದರೆ ಇವು ಕರ್ನಾಟಕಕ್ಕೆ ಎಲ್ಲಕ್ಕೂ ಹಳೆಯ ರಾಜವಂಶಗಳು.

ಕದಂಬ ವಂಶಾವಳಿ*


ಮಯೂರಶರ್ಮ
ಮಯೂರವರ್ಮ
ಕಾಕುಸ್ಥವರ್ಮ
(೪ ನೇ ಶತಮಾನ)
ಶಾಂತಿವರ್ಮ
ಕೃಷ್ಣವರ್ಮ
ಮೃಗೇಶವರ್ಮ
ವಿಷ್ಣುವರ್ಮ
ರವಿವರ್ಮ
ಭಾನುವರ್ಮ
ಶಿವರಥ
ಸಿಂಹವರ್ಮ
ಹರಿವರ್ಮ
ಕೃಷ್ಣವರ್ಮ
ದೇವವರ್ಮ

*ಈ ವಂಶಾವಳಿಯಲ್ಲಿ ಮುಖ್ಯವಾದ ಹೆಸರುಗಳನ್ನು ಮಾತ್ರವೇ ಕೊಟ್ಟಿರುತ್ತದೆ.