ಪುಟ:ಕರ್ನಾಟಕ ಗತವೈಭವ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಕರ್ನಾಟಕ ಗತವೈಭವ



ಕದಂಬರು

ದಂಬರ ವಿಷಯವಾಗಿ ಗೊತ್ತಿರುವ ಸಂಗತಿಗಳೇನಂದರೆ- ಇವರ ಮೂಲ ಪುರುಷನು ಮಯೂರಶರ್ಮನು. ಇವನು ಸೊರಬ ತಾಲುಕ ಸ್ಥಾನಗುಂಡೂರ ಅಥವಾ ತಾಳಗುಂದ ಎಂಬಲ್ಲಿಯ ಬ್ರಾಹ್ಮಣನು, ಇವನು ಕಂಚಿಗೆ ವೇದಾಧ್ಯಯನಕ್ಕಾಗಿ ಹೋದಾಗ ಅಲ್ಲಿಯ ಪಲ್ಲವ ಅರಸನಿಂದ ಅವಮಾನಿತನಾದುದರಿಂದ ಕ್ಷತ್ರಿಯ ಧರ್ಮವನ್ನು ಸ್ವೀಕರಿಸಿ ಬನವಾಸಿಯಲ್ಲಿ ಕದಂಬರಾಜ್ಯವನ್ನು ಸ್ಥಾಪಿಸಿದನು. ಈ ಕದಂಬರು ೩ ನೆಯ ಶತಮಾನದಿಂದ ೬ನೆಯ ಶತಮಾನದವರೆಗೆ ಸ್ವತಂತ್ರವಾಗಿ ಆಳಿದರು. ಈ ವಂಶದಲ್ಲಿ ಕಾಕುಸ್ಥವರ್ಮ, ಕೃಷ್ಣವರ್ಮ ಮುಂತಾದ ಅರಸರು ಪ್ರಬಲರಾಗಿದ್ದರು. ಮುಂದೆ ಚಾಲುಕ್ಯರು ೬ನೆಯ ಶತಮಾನದಲ್ಲಿ ಇವರ ಸ್ವಾತಂತ್ರವನ್ನು ಹರಣ ಮಾಡಿದರು. ಮುಂದೆ ಈ ಕದಂಬರು ಅನೇಕ ಶತಮಾನಗಳವರೆಗೆ ಮಾಂಡಲಿಕ ಅರಸರಾಗಿ ಅಳಿದರು.

ಗಂಗ ವಂಶಾವಳಿ*


ಮಾಧವ-ಕೊಂಗುಣಿವರ್ಮ (೧೦೩)
ಅವನೀತ (೪೩೦-೪೮೨)
ದುರವಿನೀತ (೪೮೨-೫೧೭)
ಶಿವಮಾರ (೬೭೦-೭೧೩)
ಶ್ರೀ ಪುರುಷ (೭೨೬-೭೭೬)
ರಾಜಮಲ್ಲ (೮೭೦-೯೦೭)
ಬೂತುಗ (೯೩೮-೯೫೩)
ಮಾರಸಿಂಹ (೯೬೧-೯೭೪)
ರಾಚಮಲ್ಲ (೯೭೪-೯೮೪

*ಈ ವಂಶಾವಳಿಯಲ್ಲಿ ಮುಖ್ಯವಾದ ಹೆಸರುಗಳನ್ನು ಮಾತ್ರವೇ ಕೊಟ್ಟಿರುತ್ತದೆ.