ಪುಟ:ಕರ್ನಾಟಕ ಗತವೈಭವ.djvu/೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೬೩
೯ನೆಯ ಪ್ರಕರಣ - ಕಲ್ಯಾಣದ ಚಾಲುಕ್ಯರು

ದ್ರ ಮಾರ್ಗದಿಂದ ದಕ್ಷಿಣಕ್ಕೆ ಇಳಿದುಬಂದನು. ಮುಂದೆ ಚೋಳರ ರಾಜಧಾನಿಯಾದ ಕಂಚಿಯನ್ನು ತೆಗೆದುಕೊಂಡು, ಆ ಅರಸನನ್ನು ಓಡಿಸಿದನು. ಈ ಸೋಮೇಶ್ವರನು ಉತ್ತರದಲ್ಲಿ ಕನ್ಯಾಕುಬ್ಜ ಅಂದರೆ ಕನೋಜದ ಅರಸನನ್ನು ಗೆದ್ದದರಿಂದ ಅವನು ಓಡಿಹೋಗಿ ಅಡವಿಯನ್ನು ಆಶ್ರಯಿಸಬೇಕಾಯಿತು. ಸೋಮೇಶ್ವರನೇ ಕಲ್ಯಾಣ ಪಟ್ಟಣವನ್ನು ಸ್ಥಾಪಿಸಿ ಅದನ್ನು ರಾಜಧಾನಿಯನ್ನಾಗಿ ಮಾಡಿದನು. ಇವನಿಗೆ ಸೋಮೇಶ್ವರ, ವಿಕ್ರಮಾದಿತ್ಯ, ಮತ್ತು ಜಯಸಿಂಹ ಹೀಗೆ ಮೂರುಮಂದಿ ಮಕ್ಕಳು. ೨ನೆಯ ಮಗನಾದ ವಿಕ್ರಮಾದಿತ್ಯನು ಇವರೆಲ್ಲರೊಳಗೆ ಚತುರನೂ ವಿದ್ವಾಂಸನೂ ಆಗಿದ್ದನು. ಅವನನ್ನೇ ಯುವರಾಜನನ್ನಾಗಿ ಮಾಡಬೇಕೆಂದು ಸೋಮೇಶ್ವರನ ಇಚ್ಛೆ, ಆದರೆ ವಿಕ್ರಮಾದಿತ್ಯನು ತನ್ನ ಅಣ್ಣನ ಹಕ್ಕನ್ನು ಮುಳುಗಿಸಲು ಇಚ್ಚಿಸಲಿಲ್ಲ. ಆದರೂ ತಂದೆಗೆ ಆತನ ಸಮರ ಸಾಹಸಗಳಲ್ಲಿ ಸಹಾಯ ಮಾಡಿದವನು ವಿಕ್ರಮನೇ. ಈ ವಿಕ್ರಮನು ಮೊದಲು ಚೋಳರನ್ನು ಗೆದ್ದು ಆ ರಾಜ್ಯವನ್ನು ತನ್ನ ರಾಜ್ಯಕ್ಕೆ ಕೂಡಿಸಿಕೊಂಡನು. ಮಾಳವದ ಅರಸನಿಗೆ ಸಹಾಯ ಮಾಡಿ, ಅವನು ಕಳೆದುಕೊಂಡ ಪಟ್ಟವನ್ನು ಅವನಿಗೆ ಕೊಡಿಸಿದನು. ಬಂಗಾಲ ಅಸಾಮು ಪ್ರಾಂತಗಳ ಮೇಲೆ ದಾಳಿ ಇಟ್ಟನು. ಕೇರಳರನ್ನು ಕೆಣಕಿದನು, ಸಿಂಹಳ ದ್ವೀಪದ ಅರಸನು ಇವನಿಗೆ ಶರಣಾಗತನಾದನು. ಕಂಚಿಯನ್ನು ಕೈವಶಮಾಡಿ ಕೊಂಡನು. ಅಲ್ಲಿಂದ ವೆಂಗಿದೇಶ ಅಂದರೆ ತೆಲುಗು ದೇಶದ ಕಡೆಗೆ ಹೊರಳಿದನು. ಹೀಗೆ ವಿಕ್ರಮಾದಿತ್ಯನು ಒಂದೇ ಸಮನೆ ರಾಜ್ಯಗಳನ್ನು ಗೆಲ್ಲುತ್ತ ಸಾಗಿರಲು, ಇತ್ತ ಅವನ ತಂದೆಯಾದ ಸೋಮೇಶ್ವರನಿಗೆ ವಿಷಮ ಜ್ವರ ಹುಟ್ಟಿತು. ಇನ್ನು ತನಗೆ ಬದುಕುವ ಆಶೆಯಿಲ್ಲವೆಂದು ತಿಳಿದ ಕೂಡಲೆ ಅವನು ತುಂಗಭದ್ರೆಯ ಬದಿಗೆ ಬಂದು, ಸುವರ್ಣದಾನ ಮೊದಲಾದುವುಗಳನ್ನು ಮಾಡಿ ನದಿಯಲ್ಲಿ ಹೋಗಿ ಮುಳುಗಿ ಸತ್ತು ಹೋದನು, ಆಹವಮಲ್ಲನು ವಿದ್ಯಾ ಪಕ್ಷಪಾತಿಯು, ವಿದ್ವಾಂಸರಿಗೆ ಆಶ್ರಯದಾತನು, ಇವನ ಸದ್ಗುಣಗಳ ಮೂಲಕ, ಕವಿಗಳು ಇವನನ್ನು ತನ್ನ ಕಾವ್ಯಗಳಲ್ಲಿ ನಾಯಕನನ್ನಾಗಿ ಮಾಡಿರುವರೆಂದು ಬಿಲ್ಲ ಣನು ಇವನನ್ನು ವರ್ಣಿಸಿದ್ದಾನೆ.
ವನ ತರುವಾಯ ಇವನ ಹಿರಿಯ ಮಗನಾದ ೨ನೆಯ ಸೋಮೇಶ್ವರನು ಪಟ್ಟವೇರಿದನು. ಇವನಿಗೆ ಭುವನೈಕಮಲ್ಲನೆಂದು ಹೆಸರು. ವಿಕ್ರಮಾದಿತ್ಯನು,