ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಾವ ರೋಗವೂ ಇರಬಾರದು. ಏಕೆಂದರೆ ಆ ರೋಗವನ್ನು ಹೊಡೆದೋಡಿ ಸುವ ರೋಗನಿರೋಧಶಕ್ತಿಯು ಸಂಭೋಗದ ಆಯಾಸದಿಂದ ಕುಗ್ಗಿ ರೋ ಗಕ್ಕೆ ಕಾಲು ಪಸರಿಸಲಿಕ್ಕೆ ಅನುಕೂಲವಾಗುವದು. (೫) ಸ್ತ್ರೀ-ಪುರುಷ ರಿಬ್ಬರೂ ಕಾಮಶಾಸ್ತ್ರವನ್ನು ಶಾಸ್ತ್ರಿಯವಾಗಿ (Scientifically) ವ್ಯಾಸಂಗಮಾಡಿರಬೇಕು. (೬) ರತಿವಿಲಾಸದ ಸ್ಥಳವು ಆರೋಗ್ಯದಾಯಕ ವಾಗಿಯ, ಸ್ವಚ್ಛವಾದ ಗಾಳಿ, ಬೆಳಕು ಗಳು ಬರುವದಾಗಿಯೂ ಇರ ಬೇಕು. (೭) ದೇಹದಲ್ಲಿ ಇಬ್ಬರಿಗೂ ದಣಿವು ಇರಬಾರದು. (೮) ಉಂಡ ಕೂಡಲೆ ವಿಹರಿಸ ಬಾರದು ; ( ಈ ವಿಷಯದಲ್ಲಿ ೧೯ ನೇ ಪ್ರಶ್ನೆಯ ಉತ್ತರ ವನ್ನು ಚನ್ನಾಗಿ ಓದಿಕೊಳ್ಳಿ). (೯) ತುಂಬ ಹಸಿವೆ, ನಿದ್ರೆ, ಬಾಯಾರಿಕೆ, ಸಿಟ್ಟು, ಭಯ ಮೊದಲಾದವುಗಳಿರಬಾರದು. (೧೦) ಇವೆಲ್ಲವುಗಳಿಗಿ೦ತ ಮುಖವೆಂದರೆ ಗಂಡಹೆಂಡಂದಿರಲ್ಲಿ ಪರಸ್ಪರ ಪ್ರೇಮ ಮತ್ತು ಕಾಮವಿಲಾ ಸಕ್ಕೆ ಪೂರ್ಣಾನುಮೋದನಗಳು ಅಗತ್ಯವಾಗಿ ಇರಬೇಕು. ಅವಿಲ್ಲದಿದ್ದರೆ ಆ ಕಾರ್ಯವು ಹಸುಗಳ ತರಗತಿಗಿಂತ ಕಡೆಯಾಗುವದು, ಏಕ೦ದರೆ ಪಶು ಗಳಿಗೆ ಒತ್ತಾಯದಿಂದ ಒಂದನ್ನೊಂದು ಕೂಡಿಕೊಳ್ಳಲು ಸಾಧ್ಯವೇ ಇಲ್ಲ. ಹೆಬಟ್ಟೆಗಳ ಹಂಗಿಗಾಗಿಯಾಗಲಿ, ಸಮಾಜದ ಭೀತಿಯಿಂದಾಗಲಿ ಹುದ ಬಾನು ಮೊದನವೂ ಕಾಮವಿಲಾಸಕ್ಕೆ ಯೋಗ್ಯವಾದುದಲ್ಲ. ೪ ನೇ ಪ್ರಶ್ನೆ :- ಒತ್ತಾಯದ ಭೋಗದಿಂದೇನಾಗುವದು. ಉತ್ತರ:- ಸ೦ಭೋಗದ ಮುಖ್ಯ ಉದ್ದೇಶಗಳು ಎರಡು. (೧) ಸಂತಾ ನೋತ್ಪತ್ತಿ (೨) ಸಹಜವಾಗಿ ಹುಟ್ಟಿದ (Healthy) ಕಾಮವನ್ನು ದೇಹ ಕ್ಕೂ ಮನ ಕ್ಕೂ ಅಪಾಯವಾಗದಂತೆ, ಸಮಾಜದ ಯೋಗ್ಯ ನೀತಿಗಳಿಗೆ ಬಾಧೆ ಬರದಂತೆ ತೃಪ್ತಿ ಪಡಿಸಿಕೊಳ್ಳುವದು ಮತ್ತು ಅದರ ಮೂಲಕ ದಾಂಪತ್ಯ ಪ್ರೇಮವನ್ನು ಬೆಳೆಸುವದು, (೧) ಕೆ ಸಂತಾನವು ಯಾರಿಗೂ ಬೇಡ, ಮತ್ತು ಒಳ್ಳೆ ಸಂತಾ ನಕ್ಕೆ ಗಂಡ ಹೆಂಡಿರ ಪ್ರೇಮ ಅನುಮೋದನಗಳು ಅತ್ಯಗತ್ಯ. ಏಕೆಂದರೆ ಭವ್ಯ ಸಂತಾನದ ಗುಣವೃತ್ತಿಗಳು ಸಂಭೋಗಸಮಯದ ಗಂಡಹೆಂಡಿರ ಮನೋವೃತ್ತಿಯನ್ನು ಬಹುವಾಗಿ ಅವಲಂಬಿಸಿವೆ. ಮಕ್ಕಳಿಗೆ ಬರುವ ಶೆಳವು