ಪುಟ:ಕಾಮದ ಗುಟ್ಟು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪರಸ್ಪರ ಸಂಚರಿಸುತ್ತಿರುವದರಿಂದ ಅವರಿಗೆ ಸಂಭೋಗನಂತರ ಆಯಾ ಸವೂ ಎನಿಸುವದಿಲ್ಲ. ಆದರೆ ಕೃತ್ರಿಮ ಮೈಥುನದಲ್ಲಿ ಪ್ರಾರಂಭದಲ್ಲೇ ಅತೃಪ್ತಿ, ತನಗೆ ಬೇಕಾದ ಪ್ರಿಯವ್ಯಕ್ತಿಯು ಸಿಗಲಿಲ್ಲವಲ್ಲ ಎಂಬ ಅತೃಪ್ತಿಯಿಂದಲೇ ಆ ದುರಾಚಾರವು ಪ್ರಾರಂಭವಾಗುವದು. ಮತ್ತು ಅತೃಪ್ತಿ ಅಥವಾ ದುಃಖವು ನಾಶಕ (Distructive) ಗುಣವುಳ್ಳದ್ದು. ಚಿ೦ ತಾಸಕರು ಕ್ಷಯಿಸು ತಿರುವದೇ ಇದಕ್ಕೆ ಉದಾಹರಣೆ ಕೃತ್ರಿಮ ಮೈಥುನದಲ್ಲಿ ವೀರ್ಯಸ್ಟಲನ ನಾಗುವಾಗ ಮಾತ್ರ ಏನೋ ಒಂದು ವಿಧದ ಸುಖದ ಮಿಂಚು ಮಿಂಚಿ ಮಾಯವಾಗಿ ಬಿಡುವದು. ತರುವಾಯ ನಿಟ್ಟುಸಿರೇ ಆ ದುರಾಚಾರಿಗಳಿಗೆ ಗತಿ. ಆ ಕಾರ್ಯವಾಗಿ ಸ್ವಲ್ಪ ಹೊತ್ತಿನಲ್ಲಿ ಅವರಿಗೆ ತುಂಬ ದೌರ್ಬಲ್ಯವು ಉತ್ಪನ್ನವಾಗುವದು. ಸಂಭೋಗದಲ್ಲಿ ಲಿಂಗಕ್ಕೆ ಯೋನಿಯ ಮೃದುವಾದ ಆವರಣ ವಿರುವದು. ಆದರೆ ಕೃತ್ರಿಮ ಮೈಥುನದಲ್ಲಿ ಉದ್ವೇಗವು ಬಹಳ ವಾಗಿರುವದರಿಂದ, ಲಿಂಗವನ್ನು ಬಹಳ ಕಠೋರವಾಗಿ ಉಪಯೋಗಿಸು ವರು. ಅದಲ್ಲದೆ ಸಂಭೋಗಕ್ಕೆ ಬೇಕಾದ ಸಹಜವಾದ ೫ ಅನು ಕೂಲ ತೆಗಳನ್ನು ಹಿಂದೆ ಹೇಳಿದೆಯಷ್ಟೆ; ಅವುಗಳನ್ನು ಕೃತ್ರಿಮ ಮೈಥುನದಲ್ಲಿ ಮಾನಸಿಕ ಚಿತ್ರದಲ್ಲಿಯೆ ಕಾಣಬೇಕಾಗಿ ಅದರಿಂದ ಮನವೂ ಕಟ್ಟು ಹೋಗುವದು. ಕೃತ್ರಿಮ ಮೈಥುನವು ಗುಟ್ಟಾಗಿ ನಡೆಯುವದರಿಂದ ಅದನ್ನು ಯಾರೂ ತಡೆಯಲಾಗದ್ದರಿ೦ದಲೂ, ಪ್ರತಿಯೊಂದು ಸಲ ಅದನ್ನು ಮಾಡಿ ಕೊಂಡಾಗ ಅತೃಪ್ತಿಯೇ ಪರಿಣಾಮವಾಗುವದರಿ೦ದಲೂ, ಅದನ್ನು ಆಚರಿಸಲು ಪರಾ ಧೀನತೆ ಇಲ್ಲದಿರುವದರಿಂದಲೂ, ಅದನ್ನು ಪುನಃ ಪುನಃ ಅಭ್ಯಸಿಸುವ ಅಪೇ ಕೈಯೇ ಹೆಚ್ಚಾಗಿ ಅದೊಂದು ಚಟವೇ ಆಗಿ, ದೇಹವನ್ನೂ, ಮನಸ್ಸನ್ನೂ ಹಿಂಡಿ, ಹಿಪ್ಪೆ ಮಾಡಿಹಾಕುವದು, ಸಂಭೋಗದಲ್ಲಿ ತನ್ನ ಪ್ರಿಯನ ಅಥವಾ ಪ್ರಿಯಳ ಸುಖವೇ ತನ್ನ ಸುಖವೆಂದು ತಿಳಿದಿರುವದರಿಂದಲೂ, ಪರಸ್ಪರಾನು ಮೊದನ ಬೇಕಾಗುವದರಿಂದಲೂ, ಸಂಭೋಗವನ್ನು ದಿನಾಲು ಅಥವಾ ಒಂದೇ ದಿನಕ್ಕೆ ಬಹಳ ಸಲ ನಡೆಸುವದು ಸಾಧ್ಯವಿರುವದಿಲ್ಲ, ಮತ್ತು ತನ್ನ