ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು

ಭಾರತೀಯ ನಾಟ್ಯ ಪ್ರಯೋಗಕ್ಕೆ ಅತಿ ಪುರಾತನ ಇತಿಹಾಸವಿದೆ. ನಾಟ್ಯ, ಸಂಗೀತ ಇವೆರಡೂ ಕಲೆಗಳು ನಮ್ಮಲ್ಲಿ ಅನಾದಿ ಪರಂಪರೆಯಿಂದ ಜೊತೆಯಲ್ಲಿಯೇ ಹುಟ್ಟಿ ಬೆಳೆದು ಉಪವೇದಗಳೆಂಬ ಖ್ಯಾತಿ ಪಡೆದಿವೆ. ವೇದೋಕ್ತ ಇತಿಹಾಸಗಳನ್ನು ನೃತ್ಯಗೀತ ಸಹಿತವಾಗಿ ರಂಗಭೂಮಿಯಲ್ಲಿ ರಸೋತ್ಪತ್ತಿಯಾಗುವಂತೆ ಅಭಿನಯಿಸುವ ಪ್ರಯೋಗಕ್ಕೆ ಮೂಲತಃ ನಾಟ್ಯವೇದವೆಂದು ಹೆಸರಾದುದು. ಕ್ರಮೇಣ ಅಭಿನಯವಿಲ್ಲದ ಕೇವಲ ನರ್ತನಕ್ಕೂ ನಾಟ್ಯವೆಂಬ ಹೆಸರು ರೂಢಿಯಲ್ಲಿ ಬಂದಿದೆ. ರಂಗಭೂಮಿಯ ಮೂಲ ಸ್ವರೂಪ ಹೇಗಿತ್ತು, ಕ್ರಮಶಃ ಅದು ಹೇಗೆ ವಿಕಾಸಗೊಂಡಿತು ಎಂಬುದನ್ನು ನಾಟ್ಯ ಶಾಸ್ತ್ರದ ಆರಂಭಕ್ಕೆ ಭರತನು ವರ್ಣಿಸಿರುವ ನಾಲ್ಕೂತ್ಪತ್ತಿ 'ಕಥೆ'ಯಿಂದ ಸಾರೋದ್ಧಾರ ವಾಗಿ ಹೀಗೆ ಸಂಗ್ರಹಿಸಬಹುದು :

ಮೂಲತಃ ನಾಟ್ಯ ಪ್ರಯೋಗವು ವೈದಿಕ ಧರ್ಮದ ಪ್ರಸಾರಕ್ಕಾಗಿ (ಮಧ್ಯದೇಶದಲ್ಲಿ) ಹುಟ್ಟಿತು ಎನ್ನಬಹುದು. ಇಂದ್ರಾದಿ ದೇವತೆಗಳಿಗೂ ವೃತ್ರಾದಿ ದಾನವರಿಗೂ ಆಗಾಗ ಸಂಗ್ರಾಮಗಳು ನಡೆಯುತ್ತಿದ್ದು, ದೇವತೆಗಳು ದಾನವರನ್ನು ಜಯಿಸಿದ ಕಥೆಗಳು ವೇದಗಳಲ್ಲಿ ಪ್ರಸಿದ್ಧವಾಗಿವೆ. ವೇದಾಧಿಕಾರವಿಲ್ಲದ ಲೌಕಿಕರಲ್ಲಿ ದೇವತೆಗಳ ಮಹತ್ವ ಹಾಗೂ ಸತ್ವ ಸಾಮರ್ಥ್ಯಗಳ ಅರಿವುಂಟಾಗುವಂತೆ ಮಾಡಿ ಆ ಮೂಲಕ ಧಾರ್ಮಿಕ ಶ್ರದ್ಧೆಯನ್ನು ಹುಟ್ಟಿಸುವುದಕ್ಕಾಗಿ ಆ ವೇದೋಕ್ತ ಇತಿಹಾಸಗಳನ್ನು ಅದ್ಭುತವಾಗಿ ನಟಿಸಿ ತೋರಿಸುವ ಸಂಪ್ರದಾಯವನ್ನು ಮಹರ್ಷಿಗಳೇ ನಿರೂಪಿಸಿದರೆನ್ನಬೇಕು. ಆರಂಭದಲ್ಲಿ


೧. ನಾಟ್ಯವೇದ ಏವ ಗೀತಪ್ರಧಾನವಿವಕ್ಷಯಾ ಗಾಂಧರ್ವವೇದ ಉಚ್ಯತೇ | ಅಭಿನಯ
ಪ್ರಾಧಾನ್ಯವಿವಕ್ಷಯಾ ತು ನಾಟ್ಯವೇದ ಉಚ್ಯತೇ |ಸಂ. ರ. ಅ. ೩-೪ ವ್ಯಾಖ್ಯಾನ

೨. ನಾಟ್ಯಶಬ್ದ ರಸೇಮುಖ್ಯ ರಸಾಭಿವ್ಯಕ್ತಿಕಾರಣಾತ್
ಚತುರ್ಧಾಭಿನಯೋಪೇತಂ ಲಕ್ಷಣಾವೃತ್ತಿತೋ ಬುದ್ಧಃ
ನರ್ತನಂ ನಾಟ್ಯಮಿತ್ಯುಕ್ತಂ ಸತ್ವತ್ರಾಭಿನಯೋ ಭವೇತ್‌
ಕಾವ್ಯಬದ್ದಂ ವಿಭಾವಾದಿ ವ್ಯಂಜಯನ್ ಯೋ ನಟೇ ಸ್ಥಿತಃ
ಸಾಮಾಜಿಕಾನಾಂ ಜನಯನ್ ನಿರ್ವಿಘ್ನ ರಸಸಂವಿದಂ||೧೯||

(ಸಂ. ರ. ಅ. ೭)

೩. ಗ್ರಾಮ್ಯಧರ್ಮ ಪ್ರವೃತ್ತೇತು ಕಾಮಲೋಭವಶಂಗತೇ
ಈರ್ಷ್ಯಾಕ್ರೋಧಾಭಿಸಂಮೂಢ ಲೋಕೇ ಸುಖಿತದುಃಖಿತೇ||೯||
ನ ವೇದವ್ಯವಹಾರೋಯಂ ಸಂಶ್ರಾವ್ಯಃ ಶೂದ್ರಜಾತಿಮು
ಸ್ಮಾತ್‌ ಸೃಜಾಪರಂವೇದಂ ಪಂಚಮಂ ಸಾವವರ್ಣಿಕಂ ||
ವೇದೋಪವೇದ್ಯಃ ಸಂಬದ್ದೂ ನಾಟ್ಯವೇದೋ ಮಹಾತ್ಮನಾ||೧೮||
ಯ ಇವೇ ವೇದಗುಹ್ಯಜ್ಞಾ ಮುನಯೋ ಸಂಶಿತವ್ರತಾಃ
ಏತೇಸ್ಯ ಗ್ರಹಣೇ ಶಕ್ತಾ ಪ್ರಯೋಗ ಧಾರಣೇ ತಥಾ||೨೩||
ತದಂತೇsನುಕೃತಿರ್ಬದ್ಧಾ ಯಥಾ ದೈತ್ಯಾ ಸುರರ್ಜಿತಾಃ||೫೯||

(ನಾ. ಶಾ. ಅ. ೧)