ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೨ / ಕುಕ್ಕಿಲ ಸಂಪುಟ

ಇದು 'ಛೇದ್ಯಭೇದ್ಯಾಹವಾತ್ಮಕವಾದ ರೌದ್ರಾದ್ಭುತ ಪ್ರಯೋಗವಾಗಿತ್ತು. ಎಂದರೆ ಕೇವಲ ಯುದ್ಧ ರೂಪಕವಾಗಿತ್ತು. ಆ ಪ್ರಯೋಗದಲ್ಲಿ ನಾಟ್ಯಾರಂಭಕ್ಕೆ ಇಂದ್ರ, ಅಗ್ನಿ, ವರುಣಾದಿ ವೈದಿಕ ದೇವತೆಗಳನ್ನು ಸ್ತುತಿಸಲಾಗುತ್ತಿತ್ತು. ಬ್ರಹ್ಮದ್ವೇಷಿಯಾದ 'ದು' ವರ್ಗದ ಜನಾಂಗವು ಇದನ್ನು ವಿರೋಧಿಸುತ್ತಿದ್ದುದಲ್ಲದೆ ಪ್ರಯೋಗವು ಯಶಸ್ವಿಯಾಗ ದಂತೆ ವಿಘ್ನಗಳನ್ನೂ ತಂದೊಡ್ಡುತ್ತಿದ್ದಿತು. ಅದಕ್ಕಾಗಿ ಭದ್ರವಾದ ನಾಟ್ಯಗೃಹಗಳನ್ನು ನಿರ್ಮಿಸಲಾಯಿತು. ಕ್ರಮೇಣ ಈ ಪ್ರಯೋಗವನ್ನು ಹೆಚ್ಚು ಜನಪ್ರಿಯಗೊಳಿಸುವುದಕ್ಕಾಗಿ ಇದರಲ್ಲಿ ಶೃಂಗಾರ ಸಂದರ್ಭಗಳನ್ನೂ ಯೋಜಿಸಲಾಯಿತು. ಅದು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿ ಕ್ರಮೇಣ ಈ ಪ್ರಯೋಗವು ಹಿಮಾಲಯ ಪ್ರಾಂತಗಳ ವರೆಗೂ ವ್ಯಾಪಿಸಿ ಪ್ರಚಾರಕ್ಕೆ ಬಂತು. ಅಲ್ಲಿ ಶೈವಧರ್ಮವೂ ಪ್ರಬಲವಾಗಿದ್ದುದರಿಂದ ಆ ಜನಾಂಗಕ್ಕೂ ಆದರಣೀಯವಾಗುವಂತೆ ಆರಂಭದ ನಾಂದೀ ವಿಧಿಯಲ್ಲಿ (ಪ್ರಾಯಶಃ ಅಲ್ಲಿ ಪ್ರರೂಢ ವಾಗಿದ್ದ) ಶಿವಪಾರ್ವತಿಯರ ತಾಂಡವ ಹಾಗೂ ಲಾಸ್ಯ ನೃತ್ಯಗಳನ್ನೂ ಅಳವಡಿಸಲಾಯಿ ತಲ್ಲದೆ ಶೈವೇತಿಹಾಸಪ್ರಸಿದ್ಧವಾದ ತ್ರಿಪುರಸಂಹಾರಾದಿ ರೌದ್ರಾದ್ಭುತ ರೂಪಕಗಳನ್ನೂ ಪ್ರಯೋಗಕ್ಕೆ ತರಲಾಯಿತು. ಕ್ರಮೇಣ, ಪ್ರಾಯಶಃ ಪೌರಾಣಿಕ ಯುಗಾರಂಭದಲ್ಲಿ,


೪. ಭಾರತೀ೦ ಸಾತ್ವತೀಂ ಚೈವ ವೃತ್ತಿಮಾರಭಟೀಂ ತಥಾ||೫೯||
ಸಂಘಟವಿದ್ರವಕೃತಾ ಛೇದ್ಯಭೇದ್ಯಾಹವಾತ್ಮಿಕಾ

(ನಾ. ಶಾ. ಅ. ೧)

೫. ಪೂರ್ವಂಕೃತಾ ಮಯಾ ನಾಂದೀ ಆಶೀರ್ವಚನ ಸಂಯುತಾ
ಅಷ್ಟಾಂಗಪದಸಂಯುಕ್ತಾ ವಿಶುದ್ಧಾ ವೇದಸಮ್ಮತಾ||೫೭||
ಕ್ರಿಯತಾಂ ನಾಟ್ಯವಿಧಿವದಜನಂ ನಾಟ್ಯಮಂಡಪೇ
ಬಲಿಪ್ರದಾನೈರ್ಹೋಮೆಶ್ಚ ಮಂತ್ರಷಧಿ ಸಮನ್ವಿತೈಃ||೧೧೯||
ಯತ್ತೇನ ಸಂಮಿತಂ ಹೇತದ್ರಂಗದೈವತ ಪೂಜನಂ||೧೨೩||

(ನಾ. ಶಾ. ಅ. ೧)

೬. ಏವಂ ಪ್ರಯೋಗೇ ಪ್ರಾರಬ್ಧ ದೈತ್ಯದಾನವನಾಶನೇ
ಅಭವನ್ ಕುಭಿತಾಃ ಸರ್ವೇ ದೈತ್ಯಾ ಯೇ ತತ್ರ ಸಂಗತಾಃ||೬೫||
ವಿರೂಪಾಕ್ಷ ಪುರೋಗಾಸ್ತು ವಿಘ್ನಾನ್ ಪ್ರೋತ್ಸಾದ್ಯತೇ ಬ್ರುವನ್ |
ನೇತೃಮಿಚ್ಛಾಮಹೇ ನಾಟ್ಯಮೇತವಾಗಮ್ಯತಾಮಿತಿ||೬೬||
ತತಸೈರಸುರೈಃ ಸಾರ್ಧ೦ ವಿಘ್ನ ಮಾಯಾಮುಪಾಶ್ರಿತಾಃ
ವಚಷ್ಟಾಂ ಸ್ಮೃತಿಂ ಚೈವ ಸ್ತಂಭಯಂತಿ ಸ್ಮ ನೃತ್ಯತಾಂ||೬೯||
ಕುರು ಲಕ್ಷಣಸಂಪನ್ನಂ ನಾಟ್ಯವೇಶ್ಯ, ಚಕಾರ ಸಃ||೮೦||

(ನಾ. ಶಾ. ಅ. ೫)

೭. ಅಥಾಹ ಮಾಂ ಸುರಗುರುಃ ಕೈಶಿಕೀಮಪಿ ಯೋಜಯ
ಕೈಶಿಕಿ ಶೈಕ್ಷ್ಯನೇಪಥ್ಯಾ ಶೃಂಗಾರರಸಸಂಭವಾ||೪೩||

(ನಾ. ಶಾ. ಅ. ೫)

೮. ತತಃ ಸಾರ್ಧ೦ ಸುರೈರ್ಗತ್ವಾ ವೃಷಭಾಂಕ ನಿವೇಶನಂ
ತತೋ ಹಿಮವತಃ ಪೃಷ್ಟೇ ನಾನಾ ನಗಸಮಾವೃತೇ
ಬಹುಭೂತಗಣಾಕೀರ್ಣ ರಮ್ಯಕಂದರ ನಿರ್ಝರೇ
ತಥಾ ತ್ರಿಪುರದಾಹಶ್ಚ ಡಿಮಸಂಜ್ಞಃ ಪ್ರಯೋಜಿತಃ||೧೭||

(ನಾ. ಶಾ. ಅ. ೫)