ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೧೩

ಅಸುರ ವರ್ಗದವರ ದ್ವೇಷ, ಅವಹೇಳನ, ಪರಾಜಯ ಇತ್ಯಾದಿ ದೂಷಣೆಗಳಿಂದ ಸತ್ಪರಿಣಾಮವಿಲ್ಲವೆಂದು ಅವರನ್ನೂ ದೇವತೆಗಳೊಡನೆ ಸಮಾನಸ್ಕಂಧರನ್ನಾಗಿಟ್ಟು, ಅವರ ಶಕ್ತಿ ಸಾಮರ್ಥ್ಯಗಳಿಗೆ ಮನ್ನಣೆಕೊಟ್ಟು ನಾಟ್ಯದಲ್ಲಿ ಗೌರವಿಸುವುದರ ಮೂಲಕ ಪ್ರಯೋಗವನ್ನು ಸರ್ವಾದರಣೀಯವನ್ನಾಗಿ ಮಾಡುವ ಪ್ರಯತ್ನ ನಡೆಯಿತು. ರಂಗಪೂಜೆ ನಾಂದೀ ವಿಧಿಗಳಲ್ಲಿ ರಾಕ್ಷಸರಿಗೂ ಬಲಿ, ವಂದನೆ, ಪೂಜೆ, ಅವರ ಪ್ರೀತ್ಯರ್ಥವಾದ ಗೀತ, ವಾದ್ಯಾದಿಗಳು ಇವನ್ನೆಲ್ಲಾ ಯೋಜಿಸಲಾಯಿತು. ದೇವದಾನವರ ಅನ್ನೋನ್ಯ ಭಾವದ ದ್ಯೋತಕವಾಗಿ ಸಮುದ್ರಮಥನಾದಿ ಸಂದರ್ಭಗಳನ್ನು ಪ್ರಯೋಗಕ್ಕೆ ತರಲಾಯಿತು. ಮುಂದೆ ಭಾಗವತಧರ್ಮ ಊರ್ಜಿತಕ್ಕೆ ಬರಲು ಎಷ್ಟೆಲ್ಲ ದೇವರ್ಕಳು ಹುಟ್ಟಿಬಂದರೋ ಅವರೆಲ್ಲರಿಗೂ ನಾಟ್ಯಾರಂಭದಲ್ಲಿ ಪೂಜೆ ಪುರಸ್ಕಾರಗಳನ್ನು ಸಲ್ಲಿಸುವ ಹಾಗೂ ಪುರಾಣೇತಿಹಾಸಗಳ ಎಲ್ಲ ಕಥಾಭಾಗಗಳನ್ನೂ ನಾಟಕರೂಪದಲ್ಲಿ ಪ್ರಯೋಗಿಸುವ ಸಂಪ್ರದಾಯವು ರೂಢಿಯಲ್ಲಿ ಬಂದು ಸರ್ವತ್ರ ಯಶಸ್ಸನ್ನು ಪಡೆಯಿತು. ಹೀಗೆ ಸಾಲೌಕಿಕವಾದ ಹಾಗೂ ಸಾರ್ವವರ್ಣಿಕವಾದ (ಸೆಕ್ಯೂಲರ್) ನಾಟ್ಯಪ್ರಯೋಗವು ಭರತಭೂಮಿಯ ನಾನಾ ಪ್ರದೇಶಗಳ ವೃತ್ತಿಪ್ರವೃತ್ತಿಗಳಿಂದ ವಿಶೇಷ ಸಂಸ್ಕಾರವನ್ನು


5. ಅಲಂ ವೋ ಮನ್ಯುನಾ ದೈತ್ಯಾ ವಿಷಾದಂ ತ್ಯಜತಾನಘಾ
ಭವತಾಂ ದೈವತಾನಾಂ ಚ ಶುಭಾಶುಭವಿಕಲ್ಪಕ||೧೦೨||
ಕರ್ಮಭಾವಾನ್ವಯಾಪೇಕ್ಷೆ ನಾಟ್ಯವೇ ಮಯಾ ಕೃತಃ
ವೈಕಾಂತತೋತ್ರಭವತಾಂ ದೇವಾನಾಂ ಚಾತ್ರಭಾವನಂ||೧೦೩||
ತ್ರೈಲೋಕ್ಯಸ್ಯಾಸ್ಯ ಸರ್ವಸ್ಯ ನಾಟ್ಯಂ ಭಾವಾನುಕೀರ್ತನಂ
ಕ್ವಚಿತ್ ಧರ್ಮಃ ಕ್ವಚಿತ್‌ ಕ್ರೀಡಾ ಕ್ವಚಿದರ್ಥಃ ಕ್ವಚಿಚ್ಛಮಃ||೧೦೪||
ಕ್ವಚಿದ್ಧಾಸ್ಕಂ ಕ್ವಚಿದ್ಯುದ್ಧಂ ಕ್ವಚಿತ್ಕಾಮಃ ಕ್ವಚಿದ್ದಧಃ
ತನ್ನಾತ್ರಮನ್ಯುಃ ಕರ್ತವೋ ಭವದ್ಭರಮರಾನ್ ಪ್ರತಿ

(ನಾ. ಶಾ. ಅ. ೧)

ಪಾಮಕೇನ ಮಾಂಸೇನ ಸಂಪೂಜ್ಯಾ ರಕ್ಷಸಾಂ ಗಣಾ
ಸುರಾಮಾಂಸಪ್ರದಾನೇನ ವಿಧಿನಾ ಪ್ರತಿಪೂಜಯೇತ್||೪೧||
ನಾನಾನಿಮಿತ್ತ ಸಂಭೂತಾ ಪೌಲಸ್ಯಾಃ ಸರ್ವ ಏವ ತು
ರಾಕ್ಷಸೇಂದ್ರಾ, ಮಹಾಸತ್ವಾ ಪ್ರತಿಗೃಹಂ ಮಂ ಬಲಿಂ||೫೬||

(ನಾ. ಶಾ. ಅ. ೨)

೧೦. ತತೋಸ್ಮು ಭಗವತಾ ಯೋಜಯಾಮೃತಮಂಥನಂ
ತಸ್ಮಿನ್ ಸಮವಕಾರತು ಪ್ರಯುಕ್ತ ದೇವದಾನವಾ
ಹೃಷ್ಟಾಃ ಸಮಭವನ್ ಸರ್ವೇ ಕರ್ಮಭಾವಾನುದರ್ಶನಾತ್||೪||
ನಿರ್ಗೀತೇನಾವಬದ್ಧಾಸ್ತು ದೈತ್ಯದಾನವ ರಾಕ್ಷಸಾ
ನ ಕೋಭಂ ನ ವಿಘಾತಂ ಚ ಕರಿಷ್ಯಂತೀಹ ತೋಷಿತಾಃ||೪೬||
ತತ್ತಥಾ ಪೂರ್ವರಂಗೇ ತು ಮಯಾ ಪ್ರೋಕ್ತಂ ದ್ವಿಜೋತ್ತರ್ಮಾ
ಸರ್ವದೈವತ ಪೂಜಾರ್ಹ೦ ಸರ್ವದೈವತ ಪೂಜನಂ
ದೈತ್ಯದಾನವ ತುಷ್ಟ್ಯರ್ಥಂ ಸರ್ವೇಷಾಂ ಚ ದಿವೌಕಸಾಂ
ನಿರ್ಗೀತಾನಿ ಸಗೀತಾನಿ ಪೂರ್ವರಂಗಕೃತಾನಿತು||೫೭||

(ನಾ. ಶಾ. ಅ. ೫)