ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೪ / ಕುಕ್ಕಿಲ ಸಂಪುಟ

ಪಡೆಯುತ್ತ ವೃದ್ಧಿಗೆ ಬಂದು ಸಂಸ್ಕೃತ ಪ್ರಾಕೃತ ಭಾಷೆಗಳು ಕೂಡಿ ನುಡಿಯುತ್ತಿದ್ದ ಅದೊಂದು ಸರ್ವಸಮೃದ್ಧಿಯ ಕಾಲದಲ್ಲಿ ಸಾಹಿತ್ಯದ ಶಿಖರವನ್ನೇರಿ ಪೂರ್ಣವೈಭವದಿಂದ ಶೋಭಿಸುತ್ತಿತ್ತು. ಕಾಲಕ್ರಮದಲ್ಲಿ ಆ ಭಾಷೆಗಳಿಗೆ ಮುಪ್ಪಡಸಿ, ಕೊನೆಗೊಮ್ಮೆ ಅವುಗಳ ಉಸಿರಾಟ ನಿಂತುಹೋದಂದಿಗೆ ಆ ನಮ್ಮ ರಂಗಭೂಮಿಯ ಆ ನಮ್ಮ ರಂಗಭೂಮಿಯ ಕೊನೆಯ ಆಟವೂ ಮುಗಿಯಿತು. ಆಮೇಲೆ ಇಂದಿನ ವರೆಗೂ ಬೆಳಕಿಲ್ಲ. ಅಂದಿನ ಆ ದೃಶ್ಯದ ಹಾಗೂ ನಾಟಕರಚನೆಯ ಸ್ವರೂಪ ಲಕ್ಷಣಗಳನ್ನು ತಿಳಿಸುವ ಏಕೈಕಪ್ರಮಾಣಗ್ರಂಥವಾಗಿ ಉಳಿದಿರುವುದು ಭರತ ಮುನಿಯ ನಾಟ್ಯಶಾಸ್ತ್ರ ಒಂದೇ. ಇದೂ ಬಹಳ ಪುರಾತನ ರಚನೆ. ಕಾಳಿದಾಸನ ಕಾಲಕ್ಕೆ ಪೌರಾಣಿಕ ಐತಿಹ್ಯವನ್ನುವಷ್ಟು ಹಳೆಯದಾಗಿತ್ತೆಂದು ತೋರು ವುದು. ನಾಟಕಾದಿ ದೃಶ್ಯಕಾವ್ಯಗಳ ರಚನೆ ಹೇಗಿರಬೇಕು ಮತ್ತು ರಂಗದಲ್ಲಿ ಅವುಗಳನ್ನು ಹೇಗೆ ಪ್ರಯೋಗಕ್ಕೆ ತರಬೇಕು ಎಂಬ ಲಕ್ಷಣಗಳು ಅದರಲ್ಲಿ ವಿಸ್ತಾರವಾಗಿ ನಿರೂಪಿಸಲ್ಪಟ್ಟಿವೆ. ಆ ಲಕ್ಷಣಗಳ ಪ್ರಕಾರ ನೃತ್ಯ ಸಂಗೀತಗಳಿಲ್ಲದ ನಾಟಕಪ್ರಯೋಗ ವೆಂಬುದಿಲ್ಲ. ಪ್ರಯೋಗ ಎಂಬುದಕ್ಕೆ ಭರತನು 'ಗೀತ ವಾದ್ಯಾಂಗ ಸಂಯೋರ್ಗ ಪ್ರಯೋಗ ಇತಿ ಸಂಜ್ಜಿತಃ' ಎಂಬ ಲಕ್ಷಣವನ್ನೇ ಹೇಳಿರುತ್ತಾನೆ. ಸಂಗೀತಶಾಸ್ತ್ರವನ್ನು ಆತನು ನಾಟ್ಯಶಾಸ್ತ್ರದ ಅಂಗವಾಗಿಯೇ ನಿರೂಪಿಸಿರುವುದಾದರೂ ಅದೇ ಉದ್ದೇಶದಿಂದ ಎಂಬುದು ಸ್ಪಷ್ಟವೇ ಸರಿ.

ಆದರೆ ನಮ್ಮಲ್ಲಿರುವ ಸಂಸ್ಕೃತ ನಾಟಕಗ್ರಂಥಗಳನ್ನು ನೋಡಿದರೆ ಅವುಗಳ ಅಭಿನಯಕ್ಕೆ ನೃತ್ಯಸಂಗೀತಗಳ ಯೋಜನೆ ಇದ್ದಿರುವಂತೇನೂ ಕಾಣುವುದಿಲ್ಲ; ತಾಲಬದ್ಧ ವಾದ ಒಂದೇ ಒಂದು ಗೀತೆಯೂ ಅವುಗಳಲ್ಲಿರುವುದಿಲ್ಲ, ನರ್ತನಕ್ಕಾದರೂ ಒಂದೇ ಒಂದು ಅವಕಾಶವನ್ನು ಕಲ್ಪಿಸಿರುವುದಿಲ್ಲ, ಎಲ್ಲಿ ಹಾಡು, ಎಲ್ಲಿ ಕುಣಿತ ಎಂಬ ಸೂಚನೆ ಯನ್ನು ಸಹ ಕೊಟ್ಟಿರುವುದಿಲ್ಲ. ಕಾಳಿದಾಸನ 'ವಿಕ್ರಮೋರ್ವಶೀಯ'ದ ಚತುರ್ಥಾಂಕ ವೊಂದರಲ್ಲಿ ಪುರೂರವನ ಪಾತ್ರಕ್ಕೆ ಕೆಲವೊಂದು ಗೀತೆಗಳು ಹಾಗೂ ಒಂದೆರಡು ಕುಣಿಯುವ ಸಂದರ್ಭಗಳು ಕಾಣುವುದಿದ್ದರೂ ಅದು ಪುರೂರವನ ಉನ್ಮಾದಾವಸ್ಥೆಯ ದೃಶ್ಯವಾಗಿರುವುದರಿಂದ ಆ ಹುಚ್ಚೆದ್ದ ಹಾಡಾಗಲಿ, ಕುಣಿತವಾಗಲಿ ಕ್ರಮಬದ್ಧವಾದ ಗೀತನೃತ್ತ ಎನ್ನುವ ಹಾಗಿಲ್ಲ. ಇನ್ನು ಕೆಲವು ನಾಟಕಗಳಲ್ಲಿ ಅಪರೂಪವಾಗಿಯಾದರೂ


೧೧. ಮುನಿನಾ ಭರತೇನ ಯಃ ಪ್ರಯೋಗೋ
ಭವತೀಷ್ಟಷ್ಟರಸಾಶ್ರಯೋ ನಿಬದ್ಧಃ |
ಲಲಿತಾಭಿನಯಂ ತಮದ್ಯ ಭರ್ತಾ
ಮರುತಾಂ ಪ್ರೋತುಮನಾಃ ಸಲೋಕಪಾಲಃ ||(ವಿ ಕ್ರ. ಅಂ. ೨-೧೭)

೧೨. ಗೀತೇ ಪ್ರಯತ್ನ: ಪ್ರಥಮಸ್ತು ಕಾರ್ಯಃ |
ಶಯ್ಯಾಂ ಹಿ ನಾಟ್ಯಸ್ಯ ವದಂತಿ ಗೀತಂ ||
ಗೀತೇಪಿ ವಾಪಿಚ ಸಂಪ್ರಯುಕ್ತ |
ನಾಟ್ಯಪ್ರಯೋಗೋ ನ ವಿಪತ್ತಿಮೇತಿ|| ೪೩೫ ||
....ಯಥಾನೃತಕೃತಂ ತಥಾ |
ಯಥಾವರ್ಣಾದೃತೇ ಚಿತ್ರಂ ನಶೋಭೋತ್ಪಾದನಂ ಭವೇತ್
ಏವಮೇವ ವಿನಾ ಗಾನಂ ನಾಟ್ಯಂ ರಂಗಂ ನ ಗಚ್ಛತಿ|| ೪೨೫ ||

(ನಾ. ಶಾ. ಅ. ೩೨)