ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
'ಬೆದಂಡೆ - ಚತ್ತಾಣ' /೨೫೯

ಮತ್ತು ಬಾಜನೆಗಬ್ಬ ಎಂಬ ವಿಭಾಗವು ಇನ್ನೊಂದು ವಿಧ ಎನ್ನುತ್ತಾನೆ. ಇವುಗಳ ಪ್ರತ್ಯೇಕ ಲಕ್ಷಣಗಳನ್ನು ಪರಿಶೀಲಿಸಿದಲ್ಲಿ ಪದ್ಯಕಾವ್ಯವೆಂಬುದು ಬೇರೆ, ಪಾಡುಗಬ್ಬವು ಬೇರೆ ಎಂದು ಆತನ ವಿವಕ್ಷೆ ಇದ್ದಂತೆ ಕಾಣುವುದು. ಎಂದರೆ ಪದ್ಯ, ಹಾಡು, ಇವೆರಡೂ ಒಂದೇ ಅಲ್ಲ ಎಂಬ ಅಭಿಪ್ರಾಯವಾಗುವುದು. ಪಾಡುಗಬ್ಬದಲ್ಲಿರುವ ಹಾಡುಗಳೆಂದರೆ ಗಾನಕ್ಕೆ ಪ್ರಶಸ್ತವಾದ ವಿಶಿಷ್ಟ ಗೇಯ ವಸ್ತುಗಳೆಂದೂ ಬಾಜನೆಗಬ್ಬದಲ್ಲಿರುವ ಪದ್ಯಗಳೆಂದರೆ ಸರ್ವಸಾಮಾನ್ಯ ಪಾಠಯೋಗ್ಯವಾದ ಛಂದೋರಚನೆಗಳೆಂದೂ ಅರ್ಥವಾಗುವುದು. ಬಾಜನೆ ಎಂಬುದು ಸಂಸ್ಕೃತ 'ವಾಚನ' ಶಬ್ದದ ತದ್ಭವರೂಪ. ಬಾಜನೆಗಬ್ಬ ಎಂದರೆ ಓದುವ ಕಾವ್ಯ ಎಂದರ್ಥ. ಸಂಸ್ಕೃತ ಕಾವ್ಯಗಳಲ್ಲಿಯೂ ಗೇಯ, ಪಾಠ ಎಂಬ ವಿಭಾಗವಿದ್ದಿರುವಂತೆ ನಾಟ್ಯಶಾಸ್ತ್ರಾದಿ ಲಕ್ಷಣಗ್ರಂಥಗಳಿಂದ ತಿಳಿಯುವುದು. ಗೇಯ ಕಾವ್ಯದಲ್ಲಿರತಕ್ಕ, ಗಾನಯೋಗ್ಯವಾದ ಛಂದೋವಿಶೇಷಗಳಿಗೆ ಪಾರಿಭಾಷಿಕವಾಗಿ 'ಜಾತಿ' ಎಂಬ ಸಂಜ್ಞೆ ಇದೆ. ನಾಟಕದಲ್ಲಿ ಹಾಡತಕ್ಕ ಧ್ರುವಾಪದಗಳನ್ನೂ ಜಾತಿಗಳೆಂದು ಕರೆಯಲಾಗಿದೆ.
ಕಾವ್ಯಾವಲೋಕನದಲ್ಲಿ ಬಾಜನೆಗಬ್ಬದ ಲಕ್ಷಣವು ಹೀಗಿದೆ :-

ಪಲತರದ ಪದ್ಯದಿಂದಂ
ಲಲಿತವಚೋರಚನನಿಚಯ ಪದ್ಧತಿಕೆಗಳಿಂ |
ಸಲೆ ನಿಲೆ ಸಮೆದುದು ಸರಸಾ
ಖಿಲವರ್ಣನಮಾದೊಡದುವೆ ಬಾಜನೆಗಬ್ಬಂ

ನಗರಾರ್ಣವ ಸರಿದಟವೀ
ನಗ ಚಂದ್ರಾರ್ಕೋದಯರ್ತು ಸಲಿಲ ಕ್ರೀಡಾ |
ದಿಗಳಾದಿಯಾಗೆ ಸರಸೋ
ಕ್ಕಿಗಳಿಂ ವರ್ಣಿಸುಗೆ ವರ್ಣಕಂಗಳನದರೊಳ್ ||

|| ೯೫೫ ||


ಹಲವು ತರದ ಪದ್ಯಗಳಿಂದಲೂ, ವಚನಗಳಿಂದಲೂ ಎಂದರೆ ಅನಿಬದ್ಧವಾಕ್ಯ ರಚನೆಗಳಿಂದಲೂ, ಪದ್ಧತಿಕೆಗಳಿಂದ ಎಂದರೆ ರಗಳೆ (ರಘಟಾ ಬಂಧ)ಗಳಿಂದಲೂ ಕೂಡಿರುವ ವಿಸ್ತಾರವಾದ ವಸ್ತುವೆಂದರೆ ಇದು ಚಂಪೂಕಾವ್ಯವೆಂಬುದು ಸ್ಪಷ್ಟವೇ ಸರಿ. (ಸ್ವಚ್ಛಂದ ಸಂಜ್ಞೆ ರಘಟಾ ಮಾತ್ರಾಕ್ಷರ ಸಮೋದಿತಾಃ | ಪಾದದ್ವಂದ್ವ ಸಮಾಕೀರ್ಣ ಸುಶ್ರಾವ್ಯಾ ಸೈವ ಪದ್ಧತಿಃ || ಜಯಕೀರ್ತಿಯ ಛಂದೋನುಶಾಸನ.)


೧. ನಾಟ್ಯಶಾಸ್ತ್ರ ೨. ೩೨- ಯಾನಿ ಚೈವಂ ನಿಬದ್ಧಾನಿ ಛಂದೋವೃತ್ತ ವಿಧಾನತಃ |
ಧ್ರುವಾರೂಪಾಣಿ ಪೂರ್ವಾಣಿ ತಾನಿ ವಕ್ಷ್ಯಾಮಿ ತತ್ವತಃ
ಅತ್ಯುಕ್ತಂ ಚ ಪ್ರತಿಷ್ಠಂ ಚ ಮಧ್ಯಂ ಗಾಯತ್ರಮೇವ ಚ |
ಏತಾಃ ಸ್ಥಿತಾಪಕೃಷ್ಣಾಸು ತ್ರ್ಯಸ್ರಾ ಜ್ಞೇಯಾಸ್ತು ಜಾತಯಃ
ಪ್ರಾವೇಶಿಕಾನಾಂ ಜಾತೀನಾಮುದ್ಧತಾನಾಂ ನಿಬೋಧತ

೩೫
ಇತ್ಯಾದಿ

ಜಾತೀನಾಂ ತ್ವಥ ಸರ್ವಾಸಾಂ ಛಂದೋವೃತ್ತ ನಿದರ್ಶನಂ |
ಸ್ನಾನ ಪ್ರಮಾಣಿ ಸಂಜ್ಞಾಭಿರ್ಗದತೋ ಮೇ ನಿಬೋಧತ ||

|| || || ೩೮ ||

ಶ್ಲೋಕ ೪೬ ವ್ಯಾ- ಜಾತೀನಾಮಿತಿ ಧ್ರುವಾಣಾಂ