ಪುಟ:ಕೋಹಿನೂರು.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ ೧೦೫ m ವಿಲಾಸಕುಮಾರಿಯು ಮೂರ್ಛಿಯಾಗಿ ನೆಲದಮೇಲೆ ಬಿದ್ದಳು. ದಾನವ ಸೇನಾ ಸತಿಯು ಮೂರ್ಛಿತೆಯಾಗಿ ಬಿದ್ದವಳನ್ನು ಎತ್ತುವುದಕ್ಕೆ ಮುಂದಾಗಿ ಹೋದ ನನು ಘಟ್ಟಿಯಾಗಿ ನಕ್ಕನು. ದುರ್ಗದಲ್ಲಿದ್ದ ಸ್ವಲ್ಪ ಸಂಖೆಯ ಸೈನ್ಯದವರು ಗದ್ದಲವನ್ನು ಕೇಳಿ ಮಹಡಿಯಮೇಲೆ ಓಡಿ ಬಂದು ಮುಸಲಮಾನರು ಮೇಲಕ್ಕೆ ಸತ್ತು ತಿದ್ದ ಬಾಗಲಿಗೆ ಅಷ್ಟಾಗಿ ನಿಂತರು ಇದ್ದಕ್ಕಿದ್ದಹಾಗೆ ಅಫಜುಲಖಾನನು ರಯದಿಂದ ಕುಂದಿ ನೋಡಲಾಗಿ ಭಯಂಕರವಾದ ಮೂರ್ತಿಯನ್ನು ತಾಳಿದ್ದ ಕೋ ನೀ ನಭಾರಿಯಾಗಿದ್ದ ಫಕೀರನು ಎದುರಿಗೆ ನಿಂತಿದ್ದನು ! ಅವನ ಬಲಗೈ ಯಲ್ಲಿ ಹರಿತವಾದ ಕತ್ತಿ -ವಿಶಾಲವಾದ ಕಣ್ಣುಗಳು ಕಿಡಿಗಳನುಗಿಯುತ್ತಿದ್ದುವು. ಸುಬ್ಬು ಗಂಟಿನಿಂದ ಸುರಗಿದ ಮುಖದಮೇಲೆ ತಲೆಯ ಒಟೆಗಳು ಕವಿತುಕೊಂಡಿ ಬ್ಲುವು, ಇಂಬಾದ ಎದೆಯಮೇಲೆ ಬಿಳಿದಾದ ದಾಡಿಯು ಹಾರುತಿತ್ತು. ೨ಫಜುಲಖಾನನು ಹೆದರಿ ಹಿಂಜರಿದು ನಿಂತನು, ಫಕೀರನು, ಅಫಜಲನ ತಲೆ ತನ್ನು ಒಗ್ಗಿಸಿ ಹಿಡಿದು ಕೈಯಲ್ಲಿದ್ದ ಕತ್ತಿಯನ್ನು ಮೇಲಕ್ಕೆತ್ತಿ, “ ಪಾಪಿಷ್ಠ ! 'ನ್ನ ಕೈಯಿಂದ ನಿನ್ನನ್ನು ಕೊಲ್ಲುವುದು ನಿನಗೆ ತಕ್ಕ ದಂಡನೆಯಲ್ಲ-ಓಡಿ ಹೋಗು೨೨ ಒಂದು ಗರ್ಬಿಸಿ ಹೇಳಿದನು. ಅಫಜುಂಖಾನು ಪ್ರಾಣದಿಂದ ಮೇಲುಸಿರನ್ನು ಬಿಡುತ್ತ ಓಡಿ ಮೋದನು, ಅವನನುಚರರು ಫಕೀರನೆ ಭಯಂಕರವಾದ ಮೂರ್ತಿಯನ್ನು ಕಂಡು ಅಲ್ಲಿ ನಿಲ್ಲದೆ ದಿಕ್ಕೆಟ್ಟು ಓಡಿದರು ದುರ್ಗದ ಸೈನಿಕರು, ' ಹೊಡಿ ! ಹೊಡಿ ! ೨ ೨ಂದು ಕೂಗುತ್ತ ಅವರ ಬೆನ್ನಟ್ಟಿ ಹೋದರು. ಫಕೀರನು ಹಾಸಿಗೆಯ ಮೇಲಿದ್ದ ವಿಕ್ರಮಸಿಂಹನ ದೇಹವನ್ನು ನೋಡಿ 5ನು, ಪ್ರಾಣವು ಸಂಪೂರ್ಣವಾಗಿ ದೇಹವನ್ನು ಬಿಟ್ಟು ಹಾರಿಹೋಗಿದ್ದಿತು. ಆಗವನು ಮೂರ್ಛಿಯಿಂದ ಬಿದ್ದಿದ್ದ ವಿಲಾಸಕುಮಾರಿಯನ್ನು ಹೊತ್ತು ಕೊಂಡು ಅಲ್ಲಿಂದ ಹೊರಟುಹೋದನು. ಸ್ವಲ್ಪ ದೂರ ಹೋಗುವುದರೊಳಗಾಗಿ ಹುಡು ಯು ಎಚ್ಚತ್ತುಕೊಂಡು, “ ನನ್ನ ತಂದೆಯು ಎಲ್ಲಿ ? ? ಎಂದು ಕೇಳಿದಳು. ಫಕೀರನು ಕರುಣಸ್ವರದಿಂದ, " ನಲ್ಲಿ ! ಇಂದಿನಿಂದ ನಾನು ನಿನಗೆ •ಂದೆ 99 ಎಂದನು. 14