ಮೂರನೆಯ ಪರಿಚ್ಛೇದ 4444444 MMwwwnwwwamy +1hyky/AAAMAM Mwು ದೂರ ಕುಳಿತುಕೊಂಡು ಮೇಲೆ ಹೇಳಿರುವಹಾಗೆ ಮಾತನಾಡುತಿದ್ದರು. ಆ ಸಮಯದಲ್ಲೊಬ್ಬ ಕುದುರೆ ಸವಾರನು ಅವರು ಕುಳಿತಿದ್ದ ಕಡೆಗೆ ಬರುತಿದ್ದನು, ಭೂತದ ಭಯವು ಆಗಲೂ ಅವರ ಹೃದಯದಿಂದ ಬಿಟ್ಟು ಹೋಗಿರಲಿಲ್ಲ. ಅವರು ಆ ದಿನ ನಡೆದ ಆ ಅಮಾನುಷಿಕವಾದ ಅಸಮ ಸಾಹಸಿಕ ಯುದ್ದವು ಭೂತರ ಕೆಲಸವೆಂದು ದೃಢವಾಗಿ ನಂಬಿದ್ದರು. ಬಾಲಸೂರ್ಯನ ಹಾಗಿದ್ದ ದನಾ ಯುವ ಯುವಕನು ಹಿಡಿದಿದ್ದ ಭೀಷಣವಾದ ಆ ಕತ್ತಿಯ ಸಂಚಾಲನವೂ ಮೇಘದ ಗರ್ಜನೆಯಹಾಗೆ ಗಂಭೀರವಾದ ಆ “ ಭಂ, ಭಂ, ಹರ ೨ ಶಬ್ದದೊಂ ದಿಗೆ ಸೇರಿದ್ದ ಸಮುದ್ರದ ಗರ್ಜನೆಗೆ ಸಮಾನವಾದ ಮುಸಲಮಾನ ಫಕೀರನ ಆ “ ಅಲ್ಲಾಹೊ ೨೨ ಧ್ವನಿಯೂ ಮುಸಲರು ಮಳೆಯಹಾಗೆ ಕರೆದ ಅಸ್ತ್ರವೃಷ್ಟಿಯ ಮಧ್ಯದಲ್ಲಿ ಯೂ ರುದ್ರಮೂರ್ತಿಯಹಾಗಿದ್ದ ವೀರರಿಬ್ಬರು ಮರದ ಕೊಂಬೆಗೆ ಳಿಂದ ಅಪ್ಪಳಿಸಿ ಹೊಡೆದ ಆ ಪೆಟ್ಟುಗಳೂ ಅವರ ಮನಸ್ಸಿನಲ್ಲಿ ಇನ್ನೂ ಜಾಗರಿತ ವಾಗಿದ್ದುವು. ಆ ಭೂತ ಚತುಷ್ಟಯದಲ್ಲೊಂದು ಭೂತವು ಕುದುರೇ ಸವಾರನ ವೇಷವನ್ನು ತಾಳಿ ತಮ್ಮ ಪ್ರಾಣವಧೆ ಮಾಡುವುದಕ್ಕೆ ಬರುತ್ತಿದೆಯೆಂದು ತಿಳಿದು ಕೊಂಡರು, ಕುದುರೆಯು ಸವಿಾಪ ಬರುತ್ತಿರುವುದನ್ನು ಕಂಡು ಭಯದಿಂದೇ ದುತ್ತ ದೌಡುಕಿತ್ತರು, ಕುದುರೆ ಸವಾರನು ಕುದುರೆಯನ್ನು ಮತ್ತಷ್ಟು ವೇಗ ವಾಗಿ ಓಡಿಸಿಕೊಂಡು ಬರುತ್ತ ಧ ಮವಿಲ್ಲ, ಓಡಿಹೋಗಬೇಡಿರಿ ೨೨ ಎಂದು ಕೂಗಿಕೊಂಡನು. ರಹಿಂಖಾನ-ಅಣ್ಣ! ನಮ್ಮ ನಬಾಬಸಾಹೇಬರೆಂದು ಕಾಣುತ್ತದೆ ! - “ ಅಯ್ಯೋ ! ಮುಗ್ದಾಳ ! ಭೂತದ ವ್ಯಾಪಾರವನ್ನು ನೀನರಿಯೆ, ಭೂತವು ಯಾವ ವೇಷವನ್ನಾದರೂ ತಾಳಬಲ್ಲದು, ನಿನಗೆ ಸತ್ತು ಹೋಗಬೇಕೆಂದು ಇಷ್ಟ ವಿದ್ದರೆ ಇಲ್ಲಿ ಯೇ ನಿಂತಿರು. ನಾನೇನೋ ಓಡಿಹೋಗಿ ಪ್ರಾಣವನ್ನು ಳಿಸಿ ಕೊಳುವೆನು. !! ಕುದುರೇ ಸವಾರನು ಅಫಜುಲಖಾನನಾಗಿದ್ದವನು ಸ್ವಲ್ಪದರಲ್ಲಿಯೇ ಓಡಿಹೋಗುತಿದ್ದ ತನ್ನ ಸೈನಿಕರೆದುರಿಗೆ ಬಂದು ನಿಂತು, “ ನಿಮಕಹರಾಮಗ ಳಿರಾ ! ನೀವು ಮುಸಲಮಾನರಾಗಿದ್ದು ಹಿಂದೂಗಳಿಗೆ ಹೆದರಿ ಓಡಿಹೋಗು ವಿಧಾ ? ಕಾಫರರಿಗೆ ಬೆನ್ನು ತೋರಿಸಿದರೆ ಏನುಗತಿಯಾಗುವುದು ಗೊತ್ತುಂಟೆ ? ? ಎಂದು ಕೇಳಿದನು,
ಪುಟ:ಕೋಹಿನೂರು.djvu/೨೭
ಗೋಚರ