ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩.೨. ಕೊtಹಿಸುರು ಕೃಷಿಕ ಯುವಕನು ಬಾದಷಹನ ಅಪ್ಪನಮೇರೆಗೆ ಸಭಾಸದರೆದುರಿಗೆ ಬಂದು ನಿಂತನು. ಬಾದಷಹನು ಹೇಳತೊಡಗಿದನು-* ನಿಮ್ಮೆದುರಿಗೆ ನಿಂತ್ರಿ ರುವ ಸುಕುಮಾರ ವದನವುಳ್ಳ ಸುಂದರಯವಕನು ಚಾತಿಯಲ್ಲಿ ಹಿಂದವಾಗಿ ದೃರೂ ವೀರತ್ವದಲ್ಲಿ ನಿಮ್ಮಲ್ಲಿರುವ ಸರ್ವಶ್ರೇಷ್ಠನಾದ ಮುಸಮಾನ ವೀರನಿಗೆ ಸಮಕಕ್ಷಿಯಾಗಿದ್ದಾನೆಂದು ತಿಳಿಯುತ್ತೇವೆ. ಆದುದರಿಂದ ಇವನನ್ನು ಮುಸ ಲಮಾನ ಧರ್ಮದಲ್ಲಿ ಸೇರಿಸಿ ಕೊಂಡು, ನಿಮ್ಮಗಳಹಾಗೆ ಉಚ್ಚವಾದ ಪದವಿಯ ಲ್ಲಿಡಬೇಕೆಂದು ನನ್ನ ಅಭಿಪ್ರಾಯವಾಗಿದೆ. ಇವನು ಮಹಮ್ಮದೀಯ ಧರ್ಮದಲ್ಲಿ ದೀಕ್ಷಿತನಾದರೆ ದಿನೇ ದಿನೇ ನಮ್ಮ ಸಿಂಹಾಸನದ ಗೌರವವನ್ನು ವೃದ್ಧಿಗೊಳಿಸುವೆನೆಂದು ನಾವು ನಂಬಿದ್ದೇವೆ. ಹಿಂದೂ ಯುವಕ ! ಉಗ ಳಿಗೆ ವಂದನೆ ಮಾಡು ! ನಿನ್ನ ಅದೃಷ್ಟವು ಮೇಲಾಯಿತು. ಈ ದಿನ ಸಾಯಂ ಕಾಲದ ನಮಾಜಿಗೆ ಮೊದಲು ಇವರೆಲ್ಲರೂ ಮಹಾಸಮಾರೋಹದಿಂದ ನಿನ್ನನ್ನು ಸತ್ಯವಾದ ಮುಸಲಮಾನ ಧರ್ಮದಲ್ಲಿ ದೀಕ್ಷಿತನನ್ನಾಗಿ ಮಾಡುವರು, ಬಳಿಕ ನಿನಗೆ ಬಹುಮಾನಾಸ್ಪದವಾದ ಉಪದವಿಯನ್ನು ಕೊಟ್ಟು ನಿನ್ನ ನೀರತ್ವಕ್ಕೆ ತಕ್ಕ ಪುರಸ್ಕಾರವು ಕೊಡಲ್ಪಡುವುದು. ನಿರ್ಭಿತನಾದ ಹುಡುಗನು ಸಸ್ಮಿತವದನನಾಗಿ ಪ್ರತಸ್ವರದಿಂದ, CG ಭಾರತಸಮಾಜನೆ ! ಯವರ ಪರಿಚಯವು ಹಿಂದವೀರನಿಗೆ ತಕ್ಕ ಪುರ ಸ್ವಾರವೇ ಅಹುದು ! ಈ ಬಾಹುಗಳೆರಡೂ ಆರ್ಯಧರ್ಮಕ್ಕೆ ವಿರೋಧಿಯಾದ ದಾನವನೆದೆಯನ್ನು ಸೀಳುವುದಕ್ಕೆ ಸಲುವಾಗಿ ಸ್ಪಷ್ಟವಾಗಿರುವುವು, ಯವನನ ಚರಣಸೇವೆಗೆ ಸಲುವಾಗಿ ಸ್ಪಷ್ಟವಾಗಿಲ್ಲ ...” ಎಂದು ಘಂಟಾಘೋಷವಾಗಿ ಹೇಳಿದನು. ಸಮಾಜನು ಕೆಂಪೇರಿದ ಕಣ್ಣುಗಳುಳ್ಳವನಾಗಿ ನಾಲ್ಕು ಕಡೆಯೂ ನೋಡಿ ಕ್ರೋಧದಿಂದಲೂ, ವಿಷಾದದಿಂದ “ ಹಾ ! ಉಮಾಗಳಿರಾ ! ಇಂದು ನಾನು ಜಾಗ್ರತಾವಸ್ಥೆಯಲ್ಲಿ ಸ್ವಷ್ಟವನ್ನು ನೋಡುತ್ತೇನೆ ! ಕಾಳಭುಜಂಗದ ಹೆಡೆಯಮೇಲೆ ಮಂಡೂಕದ ಪದಾಘಾತದಂತಿಹುದು, ಸಿಂಹದ ತಲೆಯಮೇಲೆ ಗುಳ್ಳೆನರಿಯ ನಏಪ್ರಹರ ! ಇಂದು ನಮ್ಮ ಬಾಳು ಕಂಡಹಾಗಾಯಿತು ! ಮತ್ತೇನು ? ಕಟುಕರು ಬರಲಿ ! 99 ಎಂದು ಬಿಸುಸುಯ್ದು ಹೇಳಿದನು. ಸೈನ್ಯ ದಳದ ರರ ಮಧ್ಯದಿಂದ ಕಾಲಾಂತಕ ಮೂರ್ತಿಯುಳ್ಳ ಕಟಕನು ಒರೆಯುಗಿದ ಕುಠಾರಹಸ್ಸನಾಗಿ ಮೂಂದಾಗಿ ಬಂದು ನಿಂತನು,