ಪುಟ:ಗಿಳಿವಿಂಡು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

88

  • ಬಲ್ಲು ದೆ ಲತ ಫಲಂ ತನ್ನ'
  • ಬಲ್ಲು ದೆ ಲತೆ ಫಲಂ ತನ್ನ '

ಬಲ್ಲುದೆ ಲತೆ ಫಲಂ ತನ್ನ ಸಿಹಿಯೋ ಕಹಿಯೋ ಎಂಬುದನ್ನ ? ಒಗೆದಂತೊದಗಿಸಲು ಬನ್ನ ಮೇನೊ ? ಬಳ್ಳಿಯಾ ಹಲವೊ ಕೆಲವೊ ಸವಿದು ಹಣ್ಣ, ಸಿಹಿಯಾದಡೆ ಕೊಳುವುದುಣ್ಣ ಕಹಿಯಾದಡೆ ಕಳೆವುದಣ್ಣ ಲತೆಯ ತಳ್ಳಿಯಾ ಪ್ರಕೃತಿವಶಮೆ ಫಲಿಸ ಬಲ್ಲ ಲತೆಗೆ ರುಚಿಯ ಗೊಡವೆ ಸಲ್ಲರುಚಿಯರಿಯದೆ ಸಸ್ಯಮೆಲ್ಲ ಫಲಿಸಲಾರವೆ ? ರುಚಿಯೊ ? ರಸಿಕರೊಡನೆ 1 ಮುನ್ನ ಸವಿದ ಪೊಗಳಿ ತೆಗಳಿದನ್ನ, ಸವಿದೆಲ್ಲಡೆ ಲತೆಗೆ ತನ್ನ ಫಲಂ ಭಾರವೆ ? ತಾನೆ ತನ್ನ ಫಲಮನು೦ಬ ಬಳ್ಳಿ ಫಲಿಸಲುಂಟೆ ? ಕೊಂಬ ರಿಲ್ಲದಂತೆನಿತೂ ಫಲಂ ಬ ಕುಂಕಲಡಿಯಲಿ, ಬಗೆಯ ಬಳ್ಳಿಗದುವೆ ಗೊಬ್ಬ ರಾಗದೆ ? ಮರುವೆಳಸು ಕೊಬ್ಬ ದಿಹುದೆ ? ಹೊಸತ ಬಳ್ಳಿ ಹಬ್ಬ ನೆನಿತೂ ಮಡಿಯಲಿ ?