ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಮಂಗಳಂ ನಿನ್ನೊರದ ಕಬ್ಬಕೆ, ಮಂಗಳಂ ಕಿವಿಮನದ ಹಬ್ಬಕೆ, ಮಂಗಳಂ ಕನ್ನಡದ ಭಾಮಿನಿ ಮನದಿನಿಯ ನಿನಗೆ | ಮಂಗಳಂ ನಿನ್ನ ಮರ ಮೂರ್ತಿಗೆ, ಮಂಗಳಂ ನಿನ್ನಜರ ಕೀರ್ತಿಗೆ, ಮಂಗಳಂ ನಿನಗೊಲಿದ ಗದುಗಿನ ವೀರ ನರಯಣಗೆ || ೨ || 'ಸುಮ್ಮನೇ ಕೆನ್ನನೆಲೆ ವಿಧಿಯೆ ಕಾಡಿಸುವೆ ?' ಸುಮ್ಮನೇಕೆನ್ನನೆಲೆ ವಿಧಿಯ ಕಾಡಿಸುವೆ ? - ಬೇಡಿದುದ ಕೊಡೆ, ಬೇಡದುದನಾಯ್ಡು ಕೊಡುವೆ! ಆರದುದನಾದೆನೆಂದೇಕೆ ತಡಬಡುವೆ ? ಕೇಳುವೊಡನೀವೆನೆಂದೇಕ ಬೇಡಿಸುವೆ ? ಆದೊಡಂ ಕೇಳೆನಗೆ ನಿನ್ನಿಂದು ಬೇಡ ಅವಳನೆನ್ನಿ೦ದೊಯಿದ ಇಂದೆನಗೆ ಬೇಕೆ ? ಇನ್ನವಳ ಕಾಣಿಸದ ನಾಳೆಯಕಟೇಕೆ ? ಅವಳಿದ್ದ ನಿನ್ನೆ ಸಾಕೆನಗದಂ ನೀಡ ! ಇಂದಿನಳುವೆಯ ನುಗ್ಗು ತದ ನಾಳೆಯತ್ತಂ ಸುಖದಿ ಹೊರಮೊಗಗೊಂಡು ಹರಿಯಲದು ನೇರೆ, ಅಳಲೂಳಿಳಿಮಗನಾಗಲಾಸೆ ಮರಳುತ್ತ೦ ಹಾಯುದಿಂದು ನಿನ್ನೆಗಳ ಕಡಲ ಸೇರೆ. ಆದುದರಿನಾಪಡಿ ಹಿಂದಿರುಗಿಸೆನ್ನ, ನಿನ್ನೆಗಯ್ಲಿ ಸು- ಬೇರೆ ನಾನೆರೆಯೆ ನಿನ್ನ 1 ಅಳುವ ಹೊಳೆ ಕಡಲನ್ನು ಸೇರುವ ಬಾಯಿ (bar)