________________
ಹಳೆಯ ನಾಲ್ಕ ಸರಿಗೆ ಕುಕಿಲಿನ ಕೊರಳ ಕನಸನೆತ್ತಲು ಸಲ್ಲ! ಕೊಳದ ಪಡಿನೆರೆಯಂಬರದ ಚಂದುನೆನ್ನ? ವಿಗಾಲಮಿಂತು ನೆಂಟಣಿಸಿ ನೀ ಮುದಿಯ 1ಮರಿಯಂತೆ ಕಾವೆ ಪಳನನಸಿನೀ ನಿಧಿಯ ? ನಿನಗಲ್ಲದರ್ಥದಿಂದೇನಾಳೆ ನಿನಗೆ ?ಹೆರರ್ಗೀಥ್ರಯದರ್ಥಮದು ದೊರೆವುದೇಂ ತನಗೆ ?_12 16 ನೀನೆನಿತೊ ಚರಿತಕಾರನಿಗೀವ ಸಂತಸವ ' ಚೊಚ್ಚಲನ್ನಿಯ ಸನಿಹಿಸಿದ ತಾಯ್ಯೋಗಸಂ, ದೂರದಿಂ ನಳಿನಿಯೋಳಸೋವಿನಳಿನಿಯ ಪಸವ | ನದರ ಸರಿದೂಗೆ ಮಿರುಗುಮೆಯವನ ಸೊಗಸಂ ? ನೋಂತಿರುವೆ ನೀ ಮೌನವಾದೊಡಂ, ಮುಂದಾರೆ | ಭಾಸ್ಕರನ ಬಿಜಯದುಕ್ಕಡವ ತೆರೆವಂತೆ, ನನಸು ಕನಸುಗಳ ದರ್ಶನವನೇಂ ತರಲಾರೆ, ಬಿಂಗುಸುಬು ಬಂಗಾರದಿರವನೊರೆವಂತೆ ? ಹಸುರು ಮಸಿಯಿಂ ಬರೆದುದಿದರ ಬಿನ್ನಣಮೇಂ ? ನಿನ್ನ ಕವನಕೆ ಕಾಲನಿಟ್ಟ ಟಿಪ್ಪಣಮೇಂ ? ಮುನ್ನ ನಿಂದಿಗೆ ಸಾಲವಿತ್ತ ಬರವಣವೂ ? ನಿಚ್ಚತೆಗೆ ನಮ್ಮನೋಲಯಿಸುವವುತಣವೊ ? ಕಂಡ ಚೆಲುವಿನಿದು, ಕಾಣದ ಚೆಲುವು ಮಿಗಿಲೆನಲು, ಕನಸು ಕಂಗಳಿಗೆ ಸಿಲುಕಿದ ಚೆಲುವು ಕಿರಿದೆ ? ಅದುಕತದಿ ನಿನ್ನ ಸಸಿನೆದೆಯೊಳೋರಮೆಯ ನಲು ಮೆಯ ನೀಡ! ಕನಸುಕಾಂಬೆನು ನಿನ್ನನಿರದೆ! ಭೋರ್ಗರೆವ ಕಡಲ ನಿಸ್ಸಿಮ ಕೋಲಾಹಲಂ ಶಂಖದೆಣೆಮುರಿಯ ಸುಳಿಗದ್ದದಗಳಲ್ಲಿ, 1 ಸರ್ರ