ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

24 ಹಳೆಯನಾಣ್ಯ ನಮಗಂದಿನಿಂದಗಿಯಲ್ಲರಗಳಿಲ್ಲ! ಅಳಿವಾದೊಡಂ ನಡುವೆ ಬರಲಾರ್ತನಲ್ಲ ! ನಿಚ್ಚತೆಯ ಸೆಳವಿನೀ ತೇಲುದೀವಿಯಲಿ! ಕಾಲನಂ ಮೂದಲಿಸುತಾಳ ರೀವಿಯಲಿ ! ಕೆಂಗಂಗನುದಿರ್ಗರಿಯನೆಲರ ಸೀಗುರಿಯೆಂದು ಮರತದಂ ಬರೆಯ ಲೆಕ್ಕಣ ಎಸಗುವನ್ನ, ಕಾಲ ರೆಕ್ಕೆಯ ಕಾಲನಿಂದುದಿರ್ದ ಗರಿಯೆಂದು ನಿನ್ನನರಿಯದರೆಂತು ಬಳಸಿದರೆ ನಿನ್ನ ? ಇನ್ನೆವರನೊಲ್ಲೆಲ್ಲಿ ತೊಳಲ್ಲೆ ? ಏನೇಂ ಗೇದೆ ? ನಿನ್ನ ನೀರಿಂದಾರ ಬೆಸಲಳಲ ತೊಳೆದ ? ಆವಾವ ಲಲನೆಯರ ಮುತ್ತಯ್ದ ತನಕಾದೆ ? ಕವಿಯಾರದೆಳಗೂಸಿನೊಳಗುಟ್ಟ ಸೆಳೆದೆ ? ಆವಾವ ಹರಕೆಗಳ ಕಾಣಿಕೆಗೆ ಸಂದೆ ? ಬೇಹರವನೆಲ್ಲೆಲ್ಲಿ ಸಲುವಳಿಗೆ ತಂದೆ ? ನಿನ್ನೊಡಮೆಯಿಂದಾರಿನೇನ ಮಾಡಿಸಿದೆ ? ಆರ ತೊರೆದೆಂತು ಮನೆಮನೆಯ ಬೇಡಿಸಿದೆ ? ನಿನ್ನ ತಾಯ್ತನಿ ಎಲ್ಲಿ ? ಅಗೆದ ಗುದ್ದಲಿ ಎಲ್ಲಿ ?

  • ಕರಗಿಸಿದ ಕೋವೆ, ಬಡಿದದ್ದ ಗಣಿ ಎಲ್ಲಿ ? ಹುಯ್ದ ಪಡಿಯಚ್ಚೆಲ್ಲಿ ? ತಿಕ್ಕಿದರದಲಗೆಲ್ಲಿ ?

ಕೆತ್ತಿದುಗುರುಳಿಯಪ್ಪನಿತ್ಯ ಮಣಲೆಲ್ಲಿ ? ನಿನ್ನ ಮೋರೆಯ ಮೋರೆಯುಳ್ಳರಸನಿಂದೆಲ್ಲಿ ? ಅವನ ನಾಡವನ ಸಿರಿ ಹೆಚ್ಚಳಗಳಲ್ಲಿ ? ನೀಂ ಬಳಸಿದಾವಾವ ದೇಶಕಾಲಗಳೆಲ್ಲಿ ? ಬೊಕ್ಕಸದಿ ನಿನ್ನ ನಿಕ್ಕಿದ ಹರದರೆಲ್ಲಿ ? ನಿನ್ನನೊಡ್ಡು ತ ದುಡಿದ ಪಲ ಬಯಕೆ ಎಲ್ಲಿ ? ನಿನ್ನ ಪದವಂದರೆದ ಬಡ ತಿರುಕರೆಲ್ಲಿ ? ನಿನ್ನ ಕಂಡವರೆಲ್ಲಿ ? ಬಳಸಿದವರಲ್ಲಿ ? ಅವರನಿಬರೆಲ್ಲಿ ? ನೀನೂರುವನೇನಿಲ್ಲಿ ?