ಗುರು-ಯುಕ್ತವಾದ ಆಹಾರವಾಗಲಿ, ಪರಿಶುದ್ಧತೆಯಾಗಲಿ ಇಲ್ಲದಿದ್ದರೆ ಶರೀರಕ್ಕೆ ಹೇಗೆ ವ್ಯಾಧಿಯು ಸಂಭವಿಸುವುದೋ, ಆತ್ಮಕ್ಕೂ ಹಾಗೆಯೇ. ಅದಕ್ಕೆ ತಕ್ಕ ಆಹಾರವೂ ಪರಿಶುದ್ದತೆಯೂ ಇಲ್ಲದಿದ್ದರೆ ವ್ಯಾಧಿಯು ಸಂಭವಿಸುವುದು. ಆತ್ಮಕ್ಕೂ ಶರೀರಕ್ಕೂ ಪರಸ್ಪರಸ೦ಬ೦ಧವಿರುವುದರಿಂದ ಆತ್ಮಕ್ಕೆ ಆವುದಾದರೂ ಬಾಧೆಯುಂಟಾದಾಗ ಶರೀರವು ಬಡವಾಗುವುದು.
ಚ೦ದ್ರ ಸ್ವಲ್ಪ ದಿನಗಳಿಗೆ ಮೊದಲು ಕಾಲಾಧೀನಳಾದ ನಮ್ಮ ದಾಸಿಯ ವಿಷಯವಾಗಿ ನನ್ನ ಮನಸ್ಸಿಗೆ ವ್ಯಥೆಯುಂಟಾಗಿರುವುದು. ಬಾಲ್ಯದಿಂದಲೂ ನನ್ನನ್ನೆತ್ತಿಕೊಂಡು ಆಡಿಸಿದ ಆ ದಾಸಿಯವಿಷಯವಾಗಿ ಹೇಗೆ ತಾನೆ ವ್ಯಸನಪಡದೆ ಇರಲಾದೀತು? ಈಗ ನೀವು ಕೇಳಿದಂತೆ ನಾನು ಬಡವಾಗಿರುವುದಕ್ಕೆ ಅದೇ ಕಾರಣವಾಗಿರಬಹುದು. ಇದುವರೆಗೂ ನೀವು ತಿಳಿಸಿದ ಧರ್ಮಗಳೆಲ್ಲ ಶರೀರವನ್ನು ಕುರಿತವುಗಳೇ ಆಗಿರುವುದರಿಂದ, ಆತ್ಮಕ್ಕೆ ಸಂಬಂಧಿಸಿದ ಧರ್ಮಗಳನ್ನೂ ಸ್ವಲ್ಪ ವಿವರಿಸಬೇಕೆಂದು ಬೇಡುವೆನು.
ಗುರು-ಆತ್ಮವೆಂಬ ನಮ್ಮ ಜ್ಞಾನದೇಹವು ವೃದ್ಧಿ ಹೊಂದುವುದಕ್ಕೆ ವಿದ್ಯೆಯೇ ಆಹಾರವು. ನಮ್ಮ ಜ್ಞಾನಕ್ಕೆ ಸಾಧನವಾದ ಗ್ರಂಥಾವಲೋಕನೆಗೆ ವಿದ್ಯೆಯೆಂದು ಹೆಸರು. ಜ್ಞಾನಸಂಪಾದನೆಯನ್ನು ಸಂಪೂರ್ಣವಾಗಿ ಮಾಡದವರು ಯಾವವಿಷಯದಲ್ಲಿ ಹೇಗೆ ಪ್ರವರ್ತಿಸಬೇಕೆಂಬುದನ್ನರಿಯದೆ, ಕಷ್ಟಕ್ಕೊಳಗಾಗಿ ಸುಖವಿಲ್ಲದಿರುವರಾಗುವರು. ದೇಹಶುದ್ದಿಯಂತೆಯೇ ಆತ್ಮಶುದ್ಧಿಯೂ ನಮ್ಮ ಸೌಖ್ಯಕ್ಕೆ ಅತ್ಯಂತಾವಶ್ಯಕವಾದುದು. ನಾವು ಆತ್ಮಾನಂದವನ್ನು ಅನುಭವಿಸಬೇಕಾದರೆ, ಸಾಧ್ಯವಾದಷ್ಟುಮಟ್ಟಿಗೆ, ಜ್ಞಾನಾಭಿವೃದ್ಧಿಯನ್ನುಂಟುಮಾಡಿಕೊಂಡು, ಚಿತ್ತಶುದ್ಧಿಯನ್ನು ಹೊಂದಿರಬೇಕು.
ಚಂದ್ರ-ಜ್ಞಾನಾಭಿವೃದ್ಧಿಯುಂಟಾಗುವುದಕ್ಕೆ ವಿದ್ಯೆಯು ಆವಶ್ಯಕವಾದುದೆಂದು ಹೇಳಿದಿರಲ್ಲವೇ! ಸ್ತ್ರೀಯರು ಕಲಿಯಬೇಕಾದ ವಿದ್ಯೆಯು ಎಷ್ಟು ಮಟ್ಟಿಗಿರಬೇಕು?
ಗುರು-ಪುರುಷರಿಗೆ ಹೇಗೋ ಹಾಗೆಯೇ ನಿಮಗೂ ಈಗ ನಾನು ಪ್ರತಿದಿನವೂ ಹೇಳುತ್ತಿರುವಂತೆ ಭಾಷಾವಿಷಯಿಕವಾದ ಜ್ಞಾನವನ್ನು ವೃದ್ಧಿಗೊಳಿಸುವ ವ್ಯಾಕರಣಸಾಹಿತ್ಯಗಳೂ, ವಸ್ತು ವಿವೇಚನಶಕ್ತಿಯನ್ನುಂಟು