ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪
ಚ೦ದ್ರಮತಿ.

ಮಾಡತಕ್ಕ ಗಣಿತಶಾಸ್ತ್ರವೂ, ದೇಶಕಾಲವರ್ತಮಾನಗಳನ್ನು ತಿಳಿಸತಕ್ಕ ಚರಿತ್ರೆಗಳೂ ಆವಶ್ಯಕಗಳಾಗಿರುವುವು. ನಿಮ್ಮ ನಡೆನುಡಿಗಳು ಕ್ರಮವಾಗಿರುವುದಕ್ಕೋಸುಗ ಎಲ್ಲವುಗಳಿಗಿಂತ ಮುಖ್ಯವಾಗಿ ನೀತಿಗ್ರಂಥಗಳನ್ನೋದಬೇಕು. ಭಗವಂತನ ಮಹಿಮೆಯನ್ನು ತಿಳಿಸತಕ್ಕ ಗ್ರಂಥಗಳನ್ನೂ, ಪಾತಿವ್ರತ್ಯಧರ್ಮ, ಗೃಹಕೃತ್ಯಗಳ ಕ್ರಮ ಮುಂತಾದುವುಗಳನ್ನು ಬೋಧಿಸತಕ್ಕ ಗ್ರಂಥಗಳನ್ನೂ ಆವಶ್ಯಕವಾಗಿ ಓದಬೇಕು. ಇದಲ್ಲದೆ ಸ್ತ್ರೀಯರೇ ಪ್ರತ್ಯಕ್ಷವಾಗಿ ಕಲಿತುಕೊಳ್ಳಬೇಕಾದ ವಿಷಯಗಳು ಕೆಲವಿರುವುವು. ಅವುಗಳಲ್ಲಿ ಹೊಲಿಗೆಯ ಕೆಲಸ, ಅಡಿಗೆ ಮಾಡುವ ವಿಧಾನ, ಶಿಶುಪೋಷಣಕ್ರಮ ಮುಂತಾದುವುಗಳನ್ನು ಅತ್ಯವಶ್ಯವಾಗಿ ಅಭ್ಯಾಸಮಾಡಬೇಕು. ಭಗವಂತನು ಸಾಧಾರಣವಾಗಿ ಪುರುಷಕಂಠಕ್ಕಿಂತ ಸ್ತ್ರೀಯರ ಕಂಠದಲ್ಲಿ ಹೆಚ್ಚಾದ ಮಾಧುರ್ಯವನ್ನಿಟ್ಟಿರುವನಾದುದರಿಂದ, ಸಂಗೀತಶಾಸ್ತ್ರವನ್ನು ಅಭ್ಯಾಸ ಮಾಡಿ, ಪತಿಯು ಕಷ್ಟ ಪಟ್ಟು ಮನೆಗೆ ಬಂದಾಗ ಇಂಪಾದ ಹಾಡುಗಳನ್ನು ಹಾಡಿ, ಆತನ ಮನಸ್ಸಿಗೆ ಆಯಾಸವು ತೋರದಂತೆ ಮಾಡುವ ಭಾರವು ಸ್ತ್ರೀಯರನ್ನೇ ಸೇರಿರುವುದು. ಪುರುಷರು ಹೊರಗೆ ಹೊರಟು ಕಷ್ಟಪಟ್ಟು ಕೆಲಸಮಾಡತಕ್ಕವರು; ಸ್ತ್ರೀಯರಾದರೋ ಸಾಧಾರಣವಾಗಿ ಮನೆಯಲ್ಲಿಯೇ ಇದ್ದುಕೊಂಡು ಮಕ್ಕಳು ಮೊದಲಾದವರ ಯೋಗಕ್ಷೇಮವನ್ನು ವಿಚಾರಿಸತಕ್ಕವರು; ಆದುದರಿಂದ ಮಕ್ಕಳಿಗೆ ಬರುವ ಸಾಧಾರಣ ವ್ಯಾಧಿಗಳಿಗೆ ಮಾಡಬೇಕಾದ ಚಿಕಿತ್ಸೆಗಳನ್ನೂ, ದೇಹಾರೋಗ್ಯವು ಕೆಡದಂತೆ ಕಾಪಾಡುವುದಕ್ಕೋಸುಗ ಮಾಡಬೇಕಾದ ಕಾರ್ಯಗಳನ್ನೂ, ಮನೆಯಲ್ಲಿ ಆರಾದರೂ ಗರ್ಭಿಣಿಯರಾದರೆ ಅವರು ಪ್ರಸವಿಸುವಾಗ ಮಾಡಬೇಕಾದ ಕಾರ್ಯಗಳನ್ನೂ ಚೆನ್ನಾಗಿ ಕಲಿತಿರಬೇಕು. ಅಷ್ಟು ಮಟ್ಟಿಗಾದರೂ ವೈದ್ಯವನ್ನು ಕಲಿಯದ ಪಕ್ಷದಲ್ಲಿ, ಪುರುಷರು ಮನೆಯಲ್ಲಿಲ್ಲದಿರುವಾಗ ಮನೆಯವರಿಗಾರಿಗಾದರೂ ಆಕಸ್ಮಿಕವಾಗಿ ರೋಗವೋ ಬಾಧೆಯೋ ಉಂಟಾದರೆ ಅದಕ್ಕೆ ಪ್ರತಿಕ್ರಿಯೆಯನ್ನು ಮಾಡುವುದಕ್ಕೆ ಸ್ತ್ರೀಯರು ಅಸಮರ್ಥೆಯರಾದಾರು!

ಚ೦ದ್ರ- ಈಗ ಹೇಳಿದುದು ಸ್ವಲ್ಪ ಮಟ್ಟಿಗೆ ತಿಳಿಯಿತು. ನೀವು ಹೇಳಿದುದರಲ್ಲಿ ಕೆಲವು ನಮ್ಮ ನಡೆಗಳನ್ನು ಕ್ರಮಪಡಿಸಿಕೊಳ್ಳುವುದಕ್ಕೂ,