ಪುಟ:ಚಂದ್ರಮತಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಳನೆಯ ಪ್ರಕರಣ ೩೭ ಧೈರ್ಯವನ್ನವಲಂಬಿಸುವುದರಿಂದ, ಸಂಭವಿಸಿದ ವಿವತ್ತಿನಲ್ಲಿ ಅರ್ಧವಾಲು ಕಡಿಮೆಯಾಗಿ ಹೋಗುವುದು ; ವಿನಯವನ್ನು ಕೈಗೊಂಡು ನಡೆದುಕೊ೦ ಡರೆ ಸಕಲರೂ ನಮ್ಮ ವಿಷಯದಲ್ಲಿ ಒಳ್ಳೆಯ ಅಭಿಪ್ರಾಯವುಳ್ಳವರಾಗು ವರು. ನಾವು ತಗ್ಗಿ ನಡೆದರೆ ಇತರರು ನಮ್ಮ ದುರ್ಗುಣಗಳನ್ನೂ ಲಕ್ಷ್ಮಿ ಸದೆ ಅವುಗಳನ್ನೆಲ್ಲ ಸುಗುಣಗಳನ್ನಾಗಿಯೇ ಭಾವಿಸುವರು; ಗರ್ವವನು, ಹೊಂದಿ ಬೆರತು ಬೀಗಿದರೆ ನಮ್ಮ ಸುಗುಣಗಳೂ ದುರ್ಗುಣಗಳಾಗಿಯೇ ತೋರುವುವು. ಸದ್ದು ಣಗಳೊಳಗೆಲ್ಲ ದಯೆಯೇ ಅತ್ಯುತ್ಕೃಷ್ಟವಾದುದು; ಅದನ್ನು ಮಾರಿದ ಧರ್ಮವು ಮತ್ತೊಂದಿಲ್ಲ. ನಾವು ತೃಪ್ತರಾಗದೆಯಿದ್ದರೆ ನಮ್ಮ ಮನಸ್ಸಿಗೆ ಯಾವಾಗಲೂ ಸುಖವುಂಟಾಗುವುದೇ ಇಲ್ಲ. ಆದುದ ರಿಂದ ನಾವು ಧರ್ಮ ಕಾರ್ಯಗಳನ್ನು ಮಾಡುವುದರಲ್ಲಿಯೂ ವಿದ್ಯೆಯನ್ನು ಸಂಪಾದಿಸುವದರಲ್ಲಿಯೂ ಮಾತ್ರ ಅಲ್ಪತೃಪ್ತರಾಗದೆ ಉಳಿದ ಸಮಸ್ತ ವಿಷ ಯಗಳಲ್ಲಿಯೂ ಭಗವಂತನು ನಮಗೆ ಎಷ್ಟು ಕೊಟ್ಟಿರುವನೋ ಅಷ್ಟರಿಂ ದಲೇ ತೃಪ್ತರಾಗಿರಬೇಕು. ಏಳನೆಯ ಪ್ರಕರಣ. ಮತ್ತೆರಡು ದಿನಗಳು ಕಳೆದಬಳಿಕ ಒಂದುದಿನ ಸಾಯಂಕಾಲ ಚಂದ್ರ ಮತಿಯು ತನ್ನ ಒಡನಾಡಿಯರೊಡನೆ ಓದಿಕೊಳ್ಳುವುದಕ್ಕೋಸುಗ ಬ೦ದಳು. ಆಗ ನಿದ್ರಾ ಸಮುದ್ರನು ಯಾರೊಡನೆಯೋ ಅಂತರಂಗದಲ್ಲಿ ಮಾತನಾಡು ತಿರಲು, ಆತನು ಹೊರಕ್ಕೆ ಬರುವವರೆಗೂ ಬಾಗಿಲ ಬಳಿಯಲ್ಲಿದ್ದ ಕಾಲು ಮಣೆಯ ಮೇಲೆ ಕುಳಿತುಕೊಂಡು ತಂಗಾಳಿಯನ್ನು ಸೇವಿಸುತ್ತ ಬೇಸ ಗೆಯ ಸೊಗೆಯನ್ನು ಪರಿಹರಿಸಿಕೊಂಡು, ಕೈಯಲ್ಲಿದ್ದ ಪುಸ್ತಕವನ್ನು ತೆರೆದು ಹಿ೦ದಣ ಪಾಠಗಳನ್ನು ಓದಿಕೊಳ್ಳುತ್ತಿದ್ದಳು. ಆಗ ಕೆಲವು ವೈಷ್ಣವರು ಶಂಖಚಕ್ರಗದಾಂಕಿತನಾದ ಮೈಯುಳ್ಳವರಾಗಿ ಅಲ್ಲಿಗೆ ಬಂದು ವಿಷ್ಣು ಗೀತ ಗಳನ್ನು ಹಾಡುತ್ತ ತಮಗೇನಾದರೂ ದಾನಮಾಡಬೇಕೆಂದು ಚಂದ್ರಮತಿ ಯನ್ನು ಬಹು ದೈನ್ಯದಿಂದ ಬೇಡಿಕೊಂಡರು. ಇಷ್ಟರಲ್ಲಿ ವಿದ್ಯಾಸಮುದ್ರನು