ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚಂದ್ರಮತಿ.

ಗುವ ಪ್ರಯೋಜನಗಳನ್ನರಿತು, ಚಂದ್ರಮತಿಗೆ ಗ್ರಹಣಶಕ್ತಿಯುಂಟಾದಕಾಲ ಮೊದಲ್ಗೊಂಡು ಸಣ್ಣ ಸಣ್ಣ ನೀತಿವದ್ಯಗಳನ್ನು ಕಲಿಸತೊಡಗಿದಳು; ಸುಗುಣಗಳನ್ನು ಸ್ತನ್ಯದೊಡನೆಯೇ ಅರೆದು ಕುಡಿಸತೊಡಗಿದಳು. ಆದುದರಿಂದ ಚಂದ್ರಮತಿಯು ತನ್ನ ಆರನೆಯ ವರ್ಷದಲ್ಲಿಯೇ ಒಡನಾಡಿಯರಿಗಿಂತ ವಿವೇಕವತಿಯೂ, ಗುಣವತಿಯೂ ಆದಳು ಮೃದುವಲ್ಲದ ವಾತಾವುದೂ ಅವಳ ಬಾಯಿಂದ ಹೊರಡುತ್ತಿರಲಿಲ್ಲ. ಜನನೀಜನಕರು ಪ್ರೇಮಪೂರ್ವಕವಾಗಿ ಆವುದನ್ನು ಕೊಟ್ಟರೆ ಅದನ್ನು ತೆಗೆದುಕೊಂಡು ಸಂತೋಷಪಡುತ್ರಿದ್ದಳಲ್ಲದೆ, ಇಲ್ಲದ ಪದಾರ್ಥಗಳನ್ನವೀಕ್ಷಿಸಿ ಅದೇ ಬೇಕೆಂದು ಯಾವಾಗಲೂ ಚಲಹಿಡಿಯುತ್ತಿರಲಿಲ್ಲ, ತನ್ನೊಡನಾಡುವ ಬಾಲೆಯರನ್ನು ಎಂದಾದರೂ ಬಯ್ಯುತ್ತಿರಲಿಲ್ಲ, ತನ್ನ ಬಳಿಯಲ್ಲಿರುವ ಹಣ್ಣು ಹಂಪಲುಗಳನ್ನೇ ಆದರೂ ಮೊದಲು ಅವರಿಗೆ ಕೊಟ್ಟು ಉಳಿದುದನ್ನು ತಾನು ತಿನ್ನುತ್ತಿದ್ದುದಲ್ಲದೆ ಅವರನ್ನು ತನ್ನ ಸೋದರಿಯರಂತೆ ಭಾವಿಸಿ ನಿರಂತರವೂ ಪ್ರೀತಿಸು ತ್ರಿದ್ದಳು ಎಂದಾದರೂ ತಾನು ಪ್ರಮಾದವಶದಿಂದ ಒಂದು ತಪ್ಪನ್ನು ಮಾಡಿದಪಕ್ಷದಲ್ಲಿ, ಮರುಮಾತಾಡದೆ ಆ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನು ಬೇಡುತ್ತಿದ್ದಳು. ತನ್ನ ತಪ್ಪನ್ನು ಮರೆಮಾಡುವುದಕ್ಕೋಸುಗ ಇಲ್ಲದುದನ್ನೆಲ್ಲ ಕಲ್ಪಿಸಿ ಬೋಂಕುವುದಕ್ಕೆ ಸ್ವಲ್ಪವಾದರೂ ಪ್ರಯತ್ನಿಸುತ್ತಿರಲಿಲ್ಲ.

ಒಂದಾನೊಂದು ದಿವಸ ಉಶೀನರಮಹಾರಾಜನು ವಿದ್ವಾಂಸರ ಮಧ್ಯದಲ್ಲಿ ಕುಳಿತು ವಿದ್ಯಾವ್ಯಾಸಂಗದಲ್ಲಿ ಕಾಲಹರಣ ಮಾಡುತ್ತಿದ್ದಾಗ ಆತನ ಆಸ್ಥಾನ ವಿದ್ವಾಂಸರಲ್ಲಿ ಅಗ್ರಗಣ್ಯನಾದ ವಿದ್ಯಾಸಮುದ್ರನೆಂಬ ಬ್ರಾಹ್ಮಣನು ರಾಜನ ಅಪ್ಪಣೆಯಪ್ರಕಾರವಾಗಿ ಈ ಕೆಳಗೆ ವಿವರಿಸುವ ರೀತಿಯಲ್ಲಿ ವಿದ್ಯಾ ವಿಷಯಿಕವಾದ ಒಂದು ಉಪನ್ಯಾಸವನ್ನು ಮಾಡಿದನು

" ಲೋಕದಲ್ಲಿ ಸ್ಥೂಲದೇಹವನ್ನು ಬಳೆಯಿಸುವುದಕ್ಕೆ ಆಹಾರವು ಹೇಗೆ ಆವಶ್ಯಕವೋ ಹಾಗೆಯೇ ಜ್ಞಾನವೆಂಬ ದೇಹವನ್ನು ಬಳೆಯಿಸುವುದಕ್ಕೆ ವಿದ್ಯೆಯೆಂಬ ಆಹಾರವು ಆವಶ್ಯಕವು. ವಿದ್ಯೆಯಿಂದ ವಿನಯವಿವೇಕಾದಿಗಳುಂಟಾಗುವುವು: ಅದರಿಂದ ಸಮಸ್ತ ಸದ್ಗುಣಗಳೂ ಉಂಟಾಗುವುವು. ಓದಿರತಕ್ಕವರು ಸಾಧಾರಣವಾಗಿ ತಮ್ಮ ವಿದ್ಯೆಗೆ ತಕ್ಕ ಬುದ್ಧಿಯನ್ನೂ