ܩܪܘ ಚಂದ್ರಶೇಖರ. ನನ್ನಿಂದ ರಕ್ಷಿಸಲ್ಪಡಲಾಗದು. ಈ ಬಾಂದಿಯು ಹೇಳಿದಹಾಗೆ ಬಂಗಾಳ ನಬಾಬನು ಮೂರ್ಖನೆಂಬುದು ನಿಜ ನಿಮ್ಮ ಕೈಲಾದರೆ ರಾಜ್ಯವನ್ನು ರಕ್ಷಿಸಿಕೊಳ್ಳಿರಿ. ನಾನು ಹೊರಟೆ, ನಾನು ಹೋಗಿ ರುಹಿದಾಸಗಡದಲ್ಲಿ ಹೆಂಗಸರ ಮಧ್ಯೆ ಅವಿತುಕೊಂಡಿರುವೆನು, ಅಥವಾ ಫಕೀರನಾಗುವೆನು, ಎಂದು ಹೇಳುತಿದ್ದ ಹಾಗೆ ನವಾಬನ ಬಲಿಷ್ಟವಾದ ಶರೀರವು ಪ್ರವಾಹದಲ್ಲಿ ನೆಟ್ಟಿದ್ದ ಗಳ ವಿನಹಾಗೆ ಅದುರಲಾರಂಭಿಸಿತು. ಕಣ್ಣೀರೊರಿಸಿಕೊಂಡು ನಬಾಬನು ಮುಂದೆ ಹೇಳತೊಡಗಿದನು :- ಕೇಳಿರಿ, ಬಂಧುಗರಾ ! ನನ್ನನ್ನು ಸಿರಾಜ ಉದ್ಘಲನಹಾಗೆ ಇಂಗ್ಲೀಷರು ಅಥವಾ ಅವರ ಅನುಚರರು ಹೊಡೆದುಹಾಕಿದರೆ, ದಳನಿಯ ಗೋರಿದ ಪಕ್ಷದಲ್ಲಿ ನನಗೂ ಗೋರಿಯನ್ನು ಮಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳು ತೇನೆ.ಇನ್ನು ಹೆಚ್ಚು ಮಾತನಾಡಲಾರೆ. ಈಗ ನೀವು ಹೋಗಿರಿ, ಆದರೆ ನೀವು ನನ್ನ ಅಪ್ಪಣೆಯೊಂದನ್ನು ಪಾಲನವಾಡಕು, ನಾನು ಆ ತಕಿಟಾನನನ್ನು ಒಂದು ತಡವೆ ನೋಡಬೇಕು, ಎಂದು ಹೇಳಿ, ಅಲಿ ಇಬ್ರಾಹಿಂರ್ಖಾ ! ಎಂದು ಕೂಗಿದನು. ಅಲಿ ಇಬ್ರಾಹಿಮನು ಬಂದು ನಿಂತನು. ನವಾಬನು, ನಿನ್ನ ಹಾಗೆ ನನಗೆ ಬಂಧುವು ಈ ಜಗತ್ತಿನಲ್ಲಿಲ್ಲ. ನಿನ್ನನ್ನು ಬೇಡುತ್ತೇನೆ, ನೀನು ಆ ತಕಿಖಾನನನ್ನು ನನ್ನ ಹತ್ತಿರ ಕರೆತರಬೇಕೆಂದನು. ಅಲಿ ಇಬ್ರಾಹಿಮನು ಅಭಿವಾದನ ಮಾಡಿ, ಹೊರಗೆ ಬಂದು ಅಶ್ವಾರೋಹಣನಾಗಿ ತಿಬಿ ರದಿಂದ ಹೊರಟನು. ನಬಾಬ - ವತ್ತಾರು ನನಗೆ ಉಪಕಾರ ಮಾಡುವವರು ? ಎಲ್ಲರೂ ಕೈಮುಗಿದು ನಿಂತುಕೊಂಡು ಅಪ್ಪಣೆಯನ್ನು ಬೇಡಿದರು. ನಬಾಬ--ಯಾರಾದರೂ ಆ ಫಾಸ್ಟರನನ್ನು ಹಿಡಿದುತರುವಿರಾ ? ಅಮೀರಹರ್ಸ - ಅವನು ಇರುವ ಸ್ಥಳವನ್ನು ಪತ್ತೆ ಮಾಡಿ ತರುವೆನು. ನಬಾಬನು ಹಾಗೆಯೇ ಯೋಚಿಸಿಕೊಂಡು, ಇನ್ನು ಆ ಕೈವಲಿನಿದು ಯಾರು ? ಅವಳನ್ನು ಯಾರಾದರೂ ಕರೆತರುವಿರಾ ? ಎಂದನು ಮಹಮ್ಮದ ಇರಫನು ಎದ್ದು, ಅವಳು ಇಷ್ಟು ದಿನಕ್ಕೆ ಸ್ವದೇಶಕ್ಕೆ ಬಂದಿರ ಬಹುದು, ನಾನು ಹೋಗಿ ಕರೆತರುವೆನೆಂದು ಹೇಳಿ ಹೊರಟನು. ಅನಂತರ ನವಾಬನು, ದಳನಿಗೆ ಆಶ್ರಯವನ್ನು ಕೊಟ್ಟು ಸಹಾಯ ಮಾಡಿದ ಆ ಬ್ರಹ್ಮಚಾರಿಯನ್ನು ಕಂಡುಹಿಡಿದು ಕರೆತರುವವರು ಯಾರೆಂದು ಕೇಳುತ್ತಲೆ, ವಹ ಮೃದಜರನನು, ಕೈವಲಿನಿಯನ್ನು ಕರೆತಂದು ಬಿಟ್ಟ ಮೇಲೆ ನಾನು ಹೋಗಿ ಕರೆತರುವೆ ನೆಂದು ಹೇಳಿದನು. ಕಡೆಗೆ ನಬಾಬನು, ಗುರಗಣಖಾನನು ಎಷ್ಟು ದೂರದಲ್ಲಿದ್ದಾನೆಂದು ಕೇಳಿದನು. - ಮಂತ್ರಿಗಳಲ್ಲೊಬ್ಬನು, ಅವನು ಸೌಜನ್ನು ತೆಗೆದುಕೊಂಡು ಉದಯನಾಲೆಯ ಹತ್ತಿರ ಬರುತ್ತಾನೆಂದು ಕೇಳಿದೆ. ಆದರೆ ಇನ್ನೂ ಬಂದು ತಲ್ಪಲಿಲ್ಲವೆಂದೆನು, ನಬಾ
ಪುಟ:ಚಂದ್ರಶೇಖರ.djvu/೧೫೬
ಗೋಚರ