ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ho ಚಂದ್ರ ಶೇಖರ. - ಪ್ರತಾಪ-ನನಗೆ ಇರುವ ಸರಸವೂ ಚಂದ್ರಶೇಖರನಿಂದ ಆದುದೆಂಬುದು ನಿನಗೆ ಗೊತ್ತಿಲ್ಲವೆ ? ಸುಂದರಿ -ಗೊತ್ತುಂಟು, ಆದರೆ ಮನುಷ್ಯರು ದೊಡ್ಡ ಮನುಷ್ಯರಾದರೆ ಪೂರ್ವ ಸ್ಥಿತಿಯನ್ನು ಮರೆತು ಬಿಡುತ್ತಾರೆಂತಲೂ ಕೇಳಿದ್ದೇನೆ.

  • ಪ್ರತಾಪನು ಕುದ್ದನಾಗಿ, ಅಧೀರನಾಗಿ ನಾಕೈಕೂನ್ಯನಾದನು, ಅವನ ಕೋಪ ವನ್ನು ನೋಡಿ ಸುಂದರಿಯು ಬಹಳ ಆಹ್ಲಾದವುಳ್ಳವಳಾದಳು.

- ಮರುದಿನ ಸ ತಾಸನು ಒಬ್ಬ ಸಾಚಕನನ್ನೂ ಒಬ್ಬ ನೃತ್ಯವನ್ನೂ ಸಂಗಡ ಕರೆದುಕೊಂಡು ಮಾಂಗೀರಿಗೆ ಹೊರಟನು. ನೃತ್ಯನ ಹೆಸರು, ರಾಮಚರಣ, ಪ್ರತಾ ಸನು ಇಂತಹ ಕಡೆಗೆ ಹೋಗುವೆನೆಂದು ದಾರಿಗೂ ಹೇಳಿ ಹೋಗಲಿಲ್ಲ. ಆದರೆ ರೂಪ ನಿಗೆ ಮಾತ್ರ ತಾನು ರೈವಲಿನಿಯನ್ನೂ ಚಂದ್ರಶೇಖರನನ್ನೂ ಹುಡುಕಿಕೊಂಡು ಬರುವು ದಾಗಿ ಹೇ' ಹೋಗಿದ್ದನು. ಅವರು ಇರುವ ಸ್ಥಳವನ್ನು ಗೊತ್ತು ಮಾಡಿಕೊಳ್ಳದೆ ಹಿಂದಿರುಗುವುದಿಲ್ಲವೆಂತಲೂ ಹೇಳಿದ್ದನು. ಯಾವ ಮನೆಯಲ್ಲಿ ಬ್ರಹ್ಮಚಾರಿಯು 'ದಳನಿಯನ್ನು ತಂದು ಇಟ್ಟಿದ್ದನೋ ಅದೇ ಮನೆಯಲ್ಲಿಯೇ ಪತಾಸನು ವಾಸವಾಗಿದ್ದುದು. - ಸುಂದರಿಯು ಕೆಲವು ದಿನ ತಂಗಿಯ ಮನೆಯಲ್ಲಿದ್ದು ಆಯಾಶೆಯನ್ನು ಪೂರೈಸಿ ಕೊಂಡು, ಕೈವಲಿನಿಯನ್ನು ಬೈಯುತ್ತಿದ್ದಳು. ಬೆಳಿಗ್ಗೆ ಮಧ್ಯಾಹ್ನ ಸಾಯಾಹ್ನ ತ್ರಿಕಾ ಲದಲ್ಲಿಯೂ ಅವಳು ತಂಗಿಗೆ, ಶೈವಲಿನಿಯ ಹಾಗೆ ಪಾಸಿಪ್ಪೆಯು ಇನ್ನು ಭೂಮಿಯಮೇಲೆ ಹುಟ್ಟುವುದಿಲ್ಲವೆಂದು ಹೇಳುತ್ತಿರುವಳು, ಒಂದು ದಿನ ರೂಪಸಿಯು, ಅಕ್ಕ ! ಅದೇ ನೋ, ನಿಜ, ಆದರೆ ನೀನೇತಕ್ಕೆ ಅವಳಿಗೋಸ್ಕರ ಇಷ್ಟು ಒಡಾಡಿ ಸಾಯಬೇಕೆಂದಳು. ಸುಂದರಿ-ಅವಳ ತಲೆಯನ್ನು ಕಡಿಯುವುದಕ್ಕೆ ಅವಳನ್ನು ಯಮನ ಮನೆಗೆ ಕಳ :ಹಿಸುವುದಕ್ಕೆ ಅವಳ ಮುಖಕ್ಕೆ ಬೆಂಕಿ ಹಾಕುವುದಕ್ಕೆ ಇತ್ಯಾದಿ ಇತ್ಯಾದಿ - ರೂಪನೀ-ಅಕ್ಕ ! ನೀನು ಬಹಳ ಜಗಳಗಂಟ, ಕಾಲು ಕೆರದುಕೊಂಡು ಹೋಗಿ ಕಾದಾಡುತ್ತಿ. ಸುಂದರಿ-ಅವಳೇ ನನ್ನ ಸಂಗಡ ಕಾದಾಡಿದವಳು. ಜ.