ಪುಟ:ಚಂದ್ರಶೇಖರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ. ಗಂಗಾ ತೀರದಲ್ಲಿ. ಕಲಿಕತ್ತೆಯಲ್ಲಿದ್ದ ರ್ಕೌಸಿಲಿನವರು (ಗವರ ರವರ ಸಭೆಯವರು), ನಬಾ ಬಿನ ಸಂಗಡ ಯುದ್ಧವನ್ನು ನಡೆಸತಕ್ಕದ್ದೆಂದು ಸಿದ್ದಾಂತ ಮಾಡಿ ದರು, ಪ್ರಕೃತ, ಯುದ್ಧಕ್ಕೆ ಅಜಿಮಾಬಾದನಲ್ಲಿರುವ (Patnaಪಾಟ್ಟಾ) ಕೋಠಿಗೆ ಆಯುಧಗಳನ್ನು ಕಳುಹಿಸಬೇಕಾದುದು ಆವ ಈಕವಾದುದರಿಂದ ಬಂದು ಹಡಗಿನತುಂಬ ಆಯುಧಗಳು ಪೂರ್ತಿ ಯಾಗಿ ಹೊರಟಿತು. ಅಜಿಮಾಬಾದಿನಲ್ಲಿ ಕೋರಿದು ಅಧ್ಯಕ್ಷನಾಗಿದ್ದ ಇಲಿಸ ಸಾಹೇಬನಿಗೆ ಕೆಲವು ಸವಾ ಚಾರಗಳನ್ನು ಏಕಾಂತವಾಗಿ ಹೇಳಿ ಕಳುಹಿಸಬೇಕಾಗಿತ್ತು, ಅಮಿಟಿ ಸಾಹೆಬನು ನವಾಬನ ಸಂಗಡ ಸಂಧಿಯನ್ನು ನಡೆಯಿಸಲು ಮಾಂಗೀರಿಗೆ ಬಂದಿದ್ದನು. ಅಲ್ಲಿ ಅಮಿಯ ಟನು ಏನು ಮಾಡುವನೋ, ಅಲ್ಲಿನ ಸಮಾಚಾರವು ಏನಾಗಿರುವುದೊ ಅದು ಗೊತ್ತಾಗದೆ ಇಲಿಸಿಗೆ ಸಮಾಚಾರವನ್ನು ಕಳುಹಿಸುವುದಕ್ಕೆ ಯತ್ನ ವಿರಲಿಲ್ಲ. ಅದು ಕಾರಣ ಅಲ್ಲಿಗೆ ಒಬ್ಬ ಚತುರನಾದವನನ್ನು ಕಳುಹಿಸಿ ಅವನು ಅಮಿಂಟನನ್ನು ನೋಡಿ ಅಲ್ಲಿನ ಸಂಗತಿಗ ಳನ್ನು ತಿಳಿದುಕೊಂಡು ಅಲ್ಲಿಂದ ಹೋಗಿ ಇಲಿಸಿಗೆ ರ್ಕಸಿಲಿನ ಅಭಿಪ್ರಾಯವನ್ನು ತಿಳಿಸ ಬೇಕಾಗಿತ್ತು. ಈ ಕೆಲಸಕ್ಕೋಸ್ಕರ ಗವರ್ನರು ರ್ವಾಸಿಸ್ಟಾರ್ಟು ಸಾಹೆಬನು ಫಾಸ್ಟರನನ್ನು ಪುರಂದರಪುರದ ಕೋಠಿಯಿಂದ ಕರೆಯಿಸಿದ್ದನು. ಅವನು ಆಯುಧಗಳ ಹಡಗಿನ ಸಂಗಡೆ ಹೋಗುತ್ತ ದಾರಿಯಲ್ಲಿ ಅಮಿದುಟನ್ನು ನೋಡಿ ಅಲ್ಲಿಂದ ಸುಟ್ಟಾಕ್ಕೆ ಹೋಗಬೇಕಾಗಿತ್ತು. ಅದು ಕಾರಣ ಅವನು ಕಲಿಕತ್ತೆಗೆ ಬರುತ್ತಲೆ ಪಶ್ಚಿಮದಿಕ್ಕಿಗೆ ಪಯಣವಾಗಿ ಹೊರಟನು. ಅವನಿಗೆ ಮೊದಲೆ ಈ ಏರ್ಪಾಡುಗಳೆಲ್ಲು ಗೊತ್ತಾಗಿದ್ದುದರಿಂದ ಶೈವಲಿನಿಯನ್ನು ಪುರಂದರಪುರದಿಂದ ಮಾಂಗೀರಿಗೆ ಕಳುಹಿಸಿಕೊಟ್ಟಿದ್ದನು. ಬಂದು ದಾರಿಯಲ್ಲಿ ಶೈವಲಿ ನಿಯು ಹೋಗುತಲಿದ ಹಡಗಿನ ಸಂಗಡ ಸೇರಿಕೊಂಡನು. ಫಾಸ್ಟರನು ಶೈವಲಿನಿಯೊಂದಿಗೆ ಮಾಂಗೀರಿಗೆ ಎಂದು ತನ್ನ ಹಡಗನ್ನೂ ಆಯು ಧಗಳ ಹಡಗನ್ನೂ ತೀರದಲ್ಲಿ ಕಟ್ಟಿಸಿದನು ಅಲ್ಲಿ ಅಮಿದುಟನ ಸಂಗಡ ಮಾತನಾ ಡಿಕೊಂಡು ಬಂದನು. ಅಪ್ಪರೊಳಗೆ ಗುರಗಣಖಾನನು ಹಡಗನ್ನು ಹಿಡಿದು ನಿಲ್ಲಿಸಿ ದನು. ಅನಂತರ ಅಮೀಯತಿಗೂ ನಬಾಬನಿಗೂ ಮಾತು ನಡೆಯಿತು, ಆ ದಿನ ಫಾಸ್ಯರೂ ಅಮಿಯಟೂ ಮಾತನಾಡಿಕೊಂಡದ್ದರಲ್ಲಿ ನಬಾಬನು ಹಡಗುಗಳನ್ನು ನಿಲ್ಲಿ