ಪುಟ:ಚಂದ್ರಶೇಖರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Kಳಿ ಚಂದ್ರ ಶೇಖರ. ಯಾಗುತ್ತಿರಲಿಲ್ಲ, ಪ್ರತಾಪನು ಬಂದು ಹಾರು ಹಾರಿ ಹಡಗಿನಮೇಲೆ ಹತ್ತಿಕೊಂಡನು. ಈ ಘಟನಾವಳಿಗಳನ್ನು ವರ್ಣಿಸಲು ಬೇಕಾಗುವ ಕಾಲದಲ್ಲಿ ನೂರರಲ್ಲಿ ಒಂದುಭಾ ಗದ ಸಮಯದಲ್ಲಿ ಇವೆಲ್ಲಾ ನಡೆದುಹೋದವು. ಪ್ರಹರಿಯ ಪತನ, ಭಾಸ್ಕರನ ಹೊರಗೆ ಬರುವಿಕೆ, ಅವನ ಪತನ, ಮತ್ತು ಪ್ರತಾಪನ ನಕಾರೋಹಣ, ಇವೆಲ್ಲಾ ಆಗಿ ಪೂರೈಸಿದರೂ ಐವತ್ತು ಮಾರು ದೂರದಲ್ಲಿದ್ದ ಮತ್ತೊಂದು ಹಡಗಿನ ಜನರು ಈ ಹಡ ಗಿನ ಹತ್ತಿರ ಬರಲಾರದೆಹೋದರು. ಆದರೆ ಅವರೂ ಬಂದು ಸೇರಿದರು. ಅವರು ಬಂದು ನೋಡುವುದರಲ್ಲಿ ಹಡಗು ಪತಾಪನ ಕೌಶಲದಿಂದ ಆಗಲೆ ಹೊರಗೆ ಮಧ್ಯಪ್ರವಾಹಕ್ಕೆ ಹೊರಟುಹೋಯಿತು. ಒಬ್ಬನು ಈಜಿಕೊಂಡು ಹಡಗನ್ನು ಹಿಡಿ ದಲು ಬಂದನು. ಪ್ರತಾಪನು ಹಡಗಿನಲ್ಲಿದ್ದ ಒಂದು ಬೊಂಬಿನಜಲ್ಲೆಯನ್ನು ಹಿಡಿದು ಅವನ ತಲೆಯಮೇಲೆ ಹೊಡೆದನು. ಅವನು ಹಿಂದಿರುಗಿ ಹೊರಟುಹೋದನು, ಮತ್ತಾರೂ ಮುಂದಾಗಿ ಬರಲಿಲ್ಲ. ಆ ಜಲ್ಲೆಯನ್ನು ನೀರಿಗೆಹಾಕಿ ಹಡಗನ್ನು ತಳ್ಳಿದನು, ಹಡಗು ತಿರುಗಿ ಗಭೀರವಾದ ಪ್ರವಾಹಕ್ಕೆ ಹೋಗಿ ಬಿದ್ದು ಅತ್ಯಂತ ವೇಗವಾಗಿ ಪೂರ್ವಾಭಿಮುಖ ವಾಗಿ ಹೊರಟಿತು. ಜಲ್ಲೆ ಯು ಕೈಯಲ್ಲಿದ್ದ ಹಾಗೆ ಪ್ರತಾಪನು ಹಿಂದಿರುಗಿ ನೋಡಲಾಗಿ ಹಡಗಿನಲ್ಲಿದ್ದ ಮತ್ತೊಬ್ಬ ತೆಲಿಂಗಿ ಸಿಪಾಯಿಯು ಹಡಗಿನ ಮೇಲುಭಾಗದಲ್ಲಿ ಕೈಯಲ್ಲಿ ಬಂದೂಕನ್ನು ಹಿಡಿದು ಗುರಿಯಿಟ್ಟು ಮೊಳಕಾಲೂರಿ ನೊಡುತ್ತ ಕುಳಿತಿದ್ದನು. ಪ್ರತಾಪನು ಜಲ್ಲೆ ಯನ್ನು ತಿರುಗಿಸಿಕೊಂಡು ಸಿಪಾಯಿನ ಕೈಮೇಲೆ ಹೊಡೆದನು. ಬಂದೂಕು ಕೈತಪ್ಪಿ ಕೆಳಗೆ ಬಿದ್ದಿತು. ಪ್ರತಾಪನು ಬಂದೂಕನ್ನು ತೆಗೆದುಕೊಂಡನು. ಭಾಸ್ಕರನ ಕೈಯಿಂದ ಬಿದ್ದು ಹೋಗಿದ್ದ ಬಂದೂಕನ್ನು ಎತ್ತಿಕೊಂಡನು. ಅನಂತರ ಅವನು, ನಕದಲ್ಲಿದ್ದ ಜನರನ್ನು ಕುರಿತು, ಕೇಳಿ ನನ್ನ ಹೆಸರು ಪ್ರತಾಪರಾಯ, ಮುರಿಸದಾಬಾದಿನ ನಬಾ ಎನೂ ನನಗೆ ಹೆದರುವನು, ಈ ಎರಡು ಬಂದೂಕುಗಳು ಮತ್ತು ಈ ಜಿ- ಇವು ಗಳಿಂದ ಒಂದೇ ತಡವೆಗೆ ನಿಮ್ಮಲ್ಲನೇಕರನ್ನು ಹೊಡೆದುಹಾಕಬಲ್ಲೆನೆಂದು ತೋರುತ್ತದೆ. ನೀವೆಲ್ಲರೂ ನನ್ನ ಮಾತನ್ನು ಕೇಳಿದರೆ ಯಾರಿಗೂ ಏನೂ ಘಾತವಾಗುವುದಿಲ್ಲ. ನಾನು ಹಡ ಗಿನ ಹಲ್ಲನ್ನು ( Hull- ಹಡಗನ್ನು ಸರಿಯಾದಕಡೆಗೆ ತಿರುಗಿಸುವ ಕೈಹಿಡಿ ) ಹಿಡಿದು ಬೇಕಾದ ದಿಕ್ಕಿಗೆ ತಿರುಗಿಸುವೆನು. ಹೂಟನ್ನು ಹೊಡೆಯುವವರು ಸರಿಯಾಗಿ ಹೂಟ: ಹೊಡೆಯಬೇಕು. ಮಿಕ್ಕವರೆಲ್ಲರೂ ಅವರವರು ಇರುವಸ್ಥಳದಲ್ಲಿ ಕುಳಿತಿರಲಿ, ಸ್ಥಳ ವನ್ನು ಬಿಟ್ಟು ಕದಲಿದರೆ ಅವರನ್ನು ಹೊಡೆದುಹಾಕಿಬಿಡುವೆನು, ಸುಮ್ಮನಿದ್ದರೆ ಅವ ರಿಗೇನೇನೂ ಭಯವಿಲ್ಲವೆಂದು ಕೂಗಿ ಹೇಳಿದನು. - ಹೀಗೆಂದು ಹೇಳಿ ನೌಕವನ್ನು ನಡೆಸುವವರ ಕೈಯಲ್ಲಿ ಒಂದೊಂದು ಹೂಟನ್ನು ಕೊಟ್ಟನು. ಅವರು ಭರದಿಂದ ಹೇಳಿದಹಾಗೆ ಮಾಡಿದರು, ಪ್ರತಾಪನು ಹೋಗಿ ಹಶ ಗಿನ ಹಿಡಿಯುನ್ನು ಹಿಡಿದುಕೊಂಡು ಕುಳಿತನು. ದಾರೂ ತುಟ ಏಟಕಿಸಲಿಲ್ಲ, ಹಡಗ