ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಚಂದ್ರಶೇಖರ. ಜ ನ್ಯನಲ್ಲ, ಸಾಕ್ಷಾತೆ ರಾಕ್ಷಸನಾಗಿದ್ದಾನೆ - ದೇಶೃಜನರು ಅವನನ್ನು ಹಿಡಿಯಲಾರರು ಎಂದನು. ಗೊಲ್ಲ ರ್ಸ್ಟ ಮತ್ತು ರ್ಜಾರ್ಸ ಇಬ್ಬರು ಇಂಗ್ಲೀಷರು ಅಮಿದುತಿನ ಅಪ್ಪಣೆಯ ಪ್ರಕಾರ ಏಕಾಉಲ್ಲನ ಸಂಗಡ ಹೋದರು, ಅವರು ಆಯುಧಪಾಣಿಗಳಾಗಿದ್ದರು. ಹೋಗುವಾಗ ಗೋಲ್ಡ ಸ್ಟನನು ಬಕಾಉಲ್ಲನನ್ನು ಕುರಿತು, ನೀನು ಯಾವಾಗಲಾ ದರೂ ಆ ಮನೆಯೊಳಗೆ ಹೋಗಿದ್ದುದುಂಟೆ ? ಎಂದು ಕೇಳಿದನು ಬತಾಉಲ್ಲ-ಇಲ್ಲ. ಗೋಲ್ಡ ಸ್ಟನನು ರ್ಜಾಸನ್ನನನ್ನು ಕುರಿತು, ಹಾಗಾವರ ಮೇಣದಬತ್ತಿಯನ್ನೂ ದೀಪ ದಕಡ್ಡಿಯನ್ನೂ ಸಂಗಡ ತೆಗೆದುಕೊ ; ಹಿಂದೂಗಳು ರಾತಿಲ್ಲಾ ಎಣ್ಣೆ ಉರಿಸುವು ದಿಲ್ಲ. ವ್ಯರ್ಥವಾಗಿ ನಪ್ಪವಾಗುವುದೆಂದು ದೀಪವನ್ನು ನಂದಿಸಿಬಿಡುವುದೆಂದನು. ರ್ಜಾಸನ್ನನು ಬತ್ತಿಯನ್ನೂ ದೀಸದಕಡ್ಡಿಯನ್ನೂ ತೆಗೆದು ಅಂಗಿಯ ಕಿಸಯಲ್ಲಿ ಹಾಕಿಕೊಂಡನು. ಅನಂತರ ಅವರು ಇಂಗ್ಲೀಷರ ಯುದ್ಧ ರಣಯಾತ್ರೆಗೆ ಹೋಗುವವರಹಾಗೆ ಹೆಚ್ಚ ದುನ್ನು ಹಾಕುತ್ತ ರಾಜಪಥದಲ್ಲಿ ಹೊರಟರು. ಯಾರೂ ಮಾತನಾಡಲಿಲ್ಲ - ಅವರ ಹಿಂದ ನಾಲ್ಕು ಮಂದಿ ಸಿವಾಯಿಗಳ ನಾದುಕನೂ ಬತಾಉಲ್ಲನೂ ಹೋದರು. ಅವ ರನ್ನು ಕಂಡು ನಗರದಲ್ಲಿ ಗಸ್ತು ತಿರುಗುತಲಿದ್ದ ಕಾವಲುಗಾರರು ಹೆದರಿ ಸರಿದರು. ಇಂಗ್ಲೀಷರಿಬ್ಬರೂ ಸಿಪಾಯಿಗಳೂ ಬತಾಉಲ್ಲನ ಸಂಗಡ ಪ್ರತಾಪನ ವಾಸಗೃಹದ ಇದಿರಿಗೆ ನಿಶ್ಯಬ್ದವಾಗಿ ಬಂದು ಬಾಗಿಲನ್ನು ಮೆಲ್ಲಮೆಲ್ಲಗೆ ತಟ್ಟಿದರು. ರಾಮಚರಣನು ಎದ್ದು ಬಾಗಿಲನ್ನು ತೆರಯಲು ಬಂದನು. ರಾಮಚರಣನು ಅದ್ವಿತೀಯನಾದ ನೃತ್ಯನು, ಮೈಯೊತ್ತುವುದರಲ್ಲಿ, ಕಾಲ ನ್ಯೂ ತುವುದರಲ್ಲಿಯೂ, ಎಣ್ಣೆಬತ್ತುವುದರಲ್ಲಿ ಸುಶಿಕ್ಷಿತವಾದ ಹಸ್ತಲಾಘವವುಳ್ಳವ ನಾಗಿದ್ದನು. ಧೋತ) ಒಗೆಯುವುದರಲ್ಲಿಯ ಅಂಗರಾಗ ಮಾಡಿಕೊಳ್ಳುವದರಲ್ಲಿಯ ಬಹಳ ಸಮರ್ಥನು. ಅವನಹಾಗೆ ಫರಪುಮಾಡತಕ್ಕವನಿಲ್ಲ. ಅವನಹಾಗೂ ವ್ಯಾಪಾರ ಮಾಡುವವನು ದುರ್ಲಭ. ಆದರೆ ಇವೆಲ್ಲವೂ ಸಾಮಾನ್ಯವಾದ ಗುಣಗಳು, ದೊಣ್ಣೆ ತಿರುಗಿಸುವುದರಲ್ಲಿ ಅವನು ದುರಸ್ತಿದಾಬಾದಪ್ರದೇಶಗಳಲ್ಲಿ ಪ್ರಸಿದ್ಧನಾಗಿದ್ದನು. ಎಂದೂ ಕನ್ನು ಉಪಯೋಗಿಸುವುದರಲ್ಲಿ ರಾಮಚರಣನು ಎಂತಹ ಕ್ಷಿಪಹಸ್ತನಾಗಿ ಗುರಿಯೊ ಡ್ಡತಕ್ಕವನೆಂಬುದು ಫಾಸ್ಟರನ ರಕ್ತದಿಂದ ಗಂಗಾಜಲದ ಸ ವಾರದಲ್ಲಿ ಬರೆದುಹೋ ಗಿದೆ. ಇವೆಲ್ಲಕ್ಕಿಂತಲೂ ರಾಮಚರಣನಿಗೆ ಮತ್ತೊಂದು ಸಮಯೋಪಯೋಗಿಯಾದ ಹೆಚ್ಚಾದ ಗುಣವಿತ್ತು, ಅದೇನೆಂದರೆ: ಧೂರ್ತತೆ -ನರಿಯಹಾಗೆ ಧೂರ್ತನಾಗಿದ್ದನು. ಮತ್ತು ಅದ್ವಿತೀಯನಾದ ಪ್ರಭುಭಕ್ತಿಯುಳ್ಳವನಾಗಿ ನಂಬುಗೆಯುಳ್ಳವನಾಗಿದ್ದನು.