ಎರಡನೆಯ ಭಾಗ. ೬M ರಾವಂಚರಣನು ಬಾಗಿಲನ್ನು ತೆರೆಯುವುದಕ್ಕೆ ಬಂದವನು, ಮನಸ್ಸಿನಲ್ಲಿ, ಇಷ್ಟು ಹೊತ್ತಿನಲ್ಲಿ ಬಂದು ಬಾಗಿಲನ್ನು ತಟ್ಟುವವರು ಯಾರಿರಬಹುದು ? ಬ್ರಹ್ಮಚಾರಿ ಠಾಕೂರನಾಗಿರಬಹುದೆ ? ಆದರೆ ಈಗತಾನೇ ನಾನು ಒಂದು ದೊಡ್ಡ ಕಾರವನ್ನು ಮಾಡಿಬಿಟ್ಟು ಬಂದಿದ್ದೇನೆ. ಅದು ಕಾರಣ ರಾತ್ರಿ ಕಾಲದಲ್ಲಿ ತಿಳಿದುಕೊಳ್ಳದೆ ಬಾಗಿಲನ್ನು ತೆರೆಯುವುದು ಸರಿಯಲ್ಲವೆಂದುಕೊಂಡನು. ಹೀಗೆ ಯೋಚಿಸಿಕೊಂಡು ರಾಮಚರನು ನಿಶ್ಯಬ್ಬವಾಗಿ ಬಾಗಿಲಿನ ಹತ್ತಿರ ನಿಂತು ಸ್ವಲ್ಪಹೊತ್ತು ಆಲೈಸಿ ಕೇಳಿದನು. ಇಬ್ಬರು ಮೆಲ್ಲಮೆಲ್ಲಗೆ ಮಾತನಾಡುತಲಿದ್ದುದು ಕೇಳಿಸಿತು. ರಾಮಚರಣನು ಅಂತಹ ಮಾತಿಗೆ ' ಟಸಪುಸ " ಮಾತೆಂದು ಹೇಳುವನು. ಈಗಿನವರು ಅಂತಹ ಮಾತಿಗೆ ಇಂಗ್ಲೀಪೆಂದು ಹೇಳುವರು. ರಾಮಚರಣನು ಮನಸ್ಸಿ ನಲ್ಲಿ, ಅಬ್ಬಾ ! ಗೊತ್ತಾಯಿತಣ್ಣ ! ಬಾಗಿಲನ್ನು ತೆಗೆಯಬೇಕಾದರೆ ಕೈಯಲ್ಲಿ ಬಂದೂಕು ಇರಬೇಕು. ' ಟಸಪುಸ " ಮಾತನ್ನು ನಂಬಿದರೆ ತಲೆಯಮೇಲೆ ಕಲ್ಲು ! ಎಂದಂದು ಕೊಂಡನು. ರಾಮಚರಣನು ಪುನಃ, ಬರೆ ಬಂದೂಕಿನಿಂದ ಪ್ರಯೋಜನವಿಲ್ಲ ಪ್ರಭುವನ್ನು ಕರು ಯಬೇಕೆಂದು ಯೋಚಿಸಿಕೊಂಡು, ಪ್ರತಾಪನನ್ನು ಕರೆಯುವುದಕ್ಕೆ ಬಾಗಿಲಿನಿಂದ ಹಿಂದಿರ ಗಿದನು. - ಇಸ್ಮರಲ್ಲಿ ಇಂಗ್ಲೀಷರ ತಾಳ್ಮೆಯು ತುದಿಮುಟ್ಟಿತು. ಜಾಸಸನ್ನನು ಕಾಯುವು ದೇತಕ್ಕೆ? ಬಾಗಿಲನ್ನು ಒದ್ದು ಬಿಡೋಣ, ಭಾರತವರ್ಷದ ಬಾಗಿಲು ಇಂಗ್ಲೀಷರ ಇದೆಗೆ ತಡೆಯುವುದಿಲ್ಲವೆಂದನು. ಗೋಲಸ್ಟನ್ನನು ಬಾಗಿಲಿಗೆ ಬಂದು ಒದೆಯನ್ನು ಕೊಟ್ಟನು. ಬಾಗಿಲು ದಡಬಡ ಶಬ್ದವಾಯಿತು. ರಾಮಚರಣನು ಓಡಿದನು. ಶಬ್ದವು ಪ್ರತಾಪನ ಕಿವಿಗೆ ಬಿದ್ದಿತು. ಅವನು ಮಹಡಿಯ ಮೇಲಿನ ಮೆಟ್ಟಿನಿಂದ ಇಳಿಯುತ್ತಿದ್ದನು. ಅಷ್ಟು ಹೊತ್ತಿಗೆ ಇನ್ನೂ ಬಾಗಿ ಲು ಒಡೆದಿರಲಿಲ್ಲ. ಅನಂತರ ಜಾಸಸನ್ನನು ಒಡೆಯುವುದಕ್ಕೆ ಪ್ರಾರಂಭಿಸಿದನು. ಬಾಗಿಲು ಒಡೆದು ಹೋಯಿತು. « ಹೀಗೆಯೇ ಬ್ರಿಟನ್ನಿನ ಪದಾಘಾತದಿಂದ ಭಾರತವರ್ಷವೆಲ್ಲಾ ಒಡೆದುಹೋಗಲಿ ಎಂದಂದುಕೊಂಡು ಇಂಗ್ಲೀಷರಿಬ್ಬರೂ ಮನೆಯೊಳಗೆ ಪ್ರವೇಶಮಾಡಿದರು. ಅವರ ಹಿಂದೆ ಸಿಪಾಯಿಗಳ ಒಳಗೆ ಬಂದರು. ಮಹಡಿಯ ಮೆಟ್ಟಿ ನಮೇಲೆ ಪ್ರತಾಪನೂ ರಾಮಚರಣ ಸಂಧಿಸಿದರು. ರಾವು ಚರಣನು ಪ್ರತಾಪನಿಗೆ ಮೆಲ್ಲಮೆಲ್ಲಗೆ, ಕತ್ತಲೆಯಲ್ಲಿ ಔತುಕೊಳ್ಳಿರಿ, ಇಂಗ್ಲೀಷರು ಬಂದಿದ್ದಾರೆ, ಆಮವಾತನ ಕೋಠಿಯ ಜನರೆಂದು ಕಾಣುತ್ತದೆ ಎಂದನು. ರಾಮಚರ ಇನ್ನು, ಅಮಿಯಟೆ ಸಾಹೆಬನನ್ನು .( ಆಮವಾತ 11 ಎಂದು ಹೇಳುವನು.
ಪುಟ:ಚಂದ್ರಶೇಖರ.djvu/೭೧
ಗೋಚರ