ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ. ನಗುವು. -- ಡಗಿನೊಳಗೆ ಬಂದು ಅಮಿದುಟನು ಗೊಲ್ಪಷ್ಟನ್ನನ್ನು ಕುರಿತು, ಈ ಹೆಂಗಸು ಮರಳಿನಲ್ಲಿ ಒಬ್ಬಳೆ ಕುಳಿತುಕೊಂಡು ಅಳುತ್ತಿದ್ದಳು. ಅವಳಿಗೆ ನನ್ನ ಮಾತು ಗೊತ್ತಿಲ್ಲ. ನೀನವಳನ್ನು ಕೇಳೆಂದನು. ಗೋಲ್ಯ ಸ್ಮನ್ನನು ಅಮಿಯುಟನಹಾಗೆ ಪಂಡಿತ, ಅವನು ಹೆಂಗಸನ್ನು ಕುರಿತು, ನೀನು ಯಾರೆಂದು ಹಿಂದಿಯಲ್ಲಿ ಕೇಳಿದನು. ಕೈವಲಿನಿದು ಮಾತನಾಡಲಿಲ್ಲ. ಅತ್ತಳು. ಗೋಲ್ಡಮ್ಮ-ಏತಕ್ಕೆ ಅಳುತ್ತಿ? ಕೈವಲಿನಿಯು ಅಳುತ್ತಲೆ ಇದ್ದಳು, ಮಾತನಾಡಲಿಲ್ಲ. ಗೋಲ್ಯ ರ್ಸ್ಮ-ನಿನ್ನ ಮನೆ ಇರುವದೆಲ್ಲಿ ? ಶೈವಲಿನಿಯು ಮೊದಲಿನಹಾಗೆ, ಗೋಲ್ಯ ರ್ಸ್ಮ-ನೀನು ಇಲ್ಲಿಗೆ ಏತಕ್ಕೆ ಬಂದೆ? ಕೈವಲಿನಿಯು ತದ್ರತೆ. ಗೋಲ್ಯ ಸ್ಮನ್ನ ನು ಸೋತು ಬೇಸರಗೊಂಡು, ಏನೊಂದುತ್ತರವೂ ಬಾರದೆ ಇರುವು ದನ್ನು ಕಂಡು ಶೈವಲಿನಿಯನ್ನು ಹೊರಟುಹೋಗೆಂದನು, ಶೈವಲಿನಿಗೆ ಆ ಮಾತೂ ಗೊತ್ತಾ ಗಲಿಲ್ಲ ; ಕದಲಲಿಲ್ಲ ; ನಿಂತೇ ಇದ್ದಳು. ಅಮಿಯಟನು, ನಮ್ಮ ಮಾತು ಇವಳಿಗೆ ಗೊತ್ತಿಲ್ಲ. ಅವಳ ಮಾತು ನನಗೆ ಗೊತ್ತಿಲ್ಲ. ಉಡುಪು ನೋಡಿದರೆ ಇವಳು ಬಂಗಾಳೆ ಸೀಮೆಯು ಹೆಂಗಸೆಂದು ತೋರು ತದೆ. ಬಣ್ಣ ಬಂಗಾಳಿಯವನನ್ನು ಕರೆಯಿಸಿ ಕೇಳುವಹಾಗೆ ಹೇಳೆಂದನು. - ಸಾಹೇಬರ ನೌಕರರೆಲ್ಲರೂ ಬಂಗಾಳೆ ಮುಸಲ್ಮಾನರು. ಅಮಿನಟನು ಒಬ್ಬ ನಕರನನ್ನು ಕರೆದು ಅವಳನ್ನು ವಿಚಾರಿಸುವಹಾಗೆ ಹೇಳಿದನು. ನಕರ ಅಳುವುದೇತಕ್ಕೆ ? ಶೈವಲಿನಿಯು ಹುಟ್ಟಿದಹಾಗೆ ನಕ್ಕಳು, ನಕರನು ಸಾಹಬರಿಗೆ, ಇವಳು ಹುಚ್ಚಿಯೆಂದು ಹೇಳಿದನು. ಸಾಹೆಬ-ಅವಳಿಗೆ ಏನು ಬೇಕೆಂದು ಕೇಳು. ನೌಕರನು ಕೇ 'ದನು, ಶೈವಲಿನಿಯು ಹೊಟ್ಟೆ ಹಸಿವಾಗುತ್ತದೆ ಎಂದಳು.