ಮರ ನೆಯ ಭಾಗ. v ಈ ಸಮಯದಲ್ಲಿ ಕೈವಲಿನಿಯು ಕಡೇ ಹಡಗಿನ ಪಾರ್ಶ್ವದಲ್ಲಿ ಈಜಿಕೊಂಡುಹೋಗು ತಿದ್ದಳು, ಅಲ್ಲಿ ಅವಳು ಅಕಸ್ಮಾತ್ತಾಗಿ ಚಕಿತೆಯಾದಳು. ಆ ಹಡಗು ತಾನೂ ಮತ್ತು ಲಾರ್ರನಿ ಫಾಸ್ಟರನೂ ಬಂದ ಹಡಗಾಗಿತ್ತು. ಕೈವಲಿನಿಯು ನಡುಗಿ ಆ ಹಡಗನ್ನು ದೃಷ್ಟಿಸಿ ನೋಡಿದಳು, ಹಡಗಿನ ಮೇಲ್ಬಾ ಗದಲ್ಲಿ ಬೆಳದಿಂಗಳ ಬಳಕಿನಲ್ಲಿ ಒಂದು ಚಿಕ್ಕದಾದ ಮಂಚದಮೇಲೆ ಅರ್ಧಶತನಾವಸ್ಥೆ ಯಲ್ಲಿ ಒಬ್ಬ ಸಾಹೆಬನು ಕುಳಿತಿದ್ದನು. ಉಜ್ವಲವಾದ ಚಂದ ಕಿರಣವು ಅವನಮೇಲೆ ಬಿದ್ದಿತ್ತು, ಕೈವಲಿನಿಯು ಚೀತ್ಕಾರಮಾಡಿದಳು-ನೋಡಲಾಗಿ ಮಂಚದಮೇಲಿದ್ದವನು ಲಾರ್ರನೆ ಫಾಸ್ಟರನು ! ಲಾರ್ರೆಸೆ ಫಾಸ್ಸರನು ಈಜಿಕೊಂಡು ಹೋಗುತ್ತಿದ ವಳನ್ನು ದೃಷ್ಟಿಸಿ ನೋಡಿ ಕೈವಲಿನಿಯೆಂದು ಗುರ್ತಿಸಿದನು. ಅವನೂ ಚೀತ್ಕಾರ ಮಾಡಿ, ಹಿಡಿದುಕೊ ! ಹಿಡಿ ದುಕೊ ! ನನ್ನ ಬೀಬೀ ! ಎಂದು ಕೂಗಿದನು. ಫಸ್ಟರನು ತೀರ್ಣನಾಗಿ, ರುಗ್ನನಾಗಿ, ದುರ್ಬಲನಾಗಿ, ಶಯ್ಯಾಗತನಾಗಿ ಏಳ ವದಕ್ಕೆ ತಾಣವಿಲ್ಲದೆ ಬಿದ್ದಿದ್ದನು. - ಘಾಸರಿನ ಕೂಗನ್ನು ಕೆ ನಾಲ್ಕಾರುಮಂದಿ ಶೈವಲಿನಿಯನ್ನು ಹಿಡಿಯುವುದಕ್ಕೆ ಧುಮುಕಿದರು. ಪ್ರತಾಪನು ಅಪ್ಪಹೊತ್ತಿಗೆ ಅವರಿಗಿಂತಲೂ ಬಹಳ ದೂರ ಹೋಗಿ ದನು. ಅವರು ಪ್ರಾಸನನ್ನು ಕೂಗಿ ಹಿಡಿದುಕೊ ! ಹಿಡಿದುಕೊ ! ಭಾಸ್ಟರಸಾಹೆಬರು ಇನಾಂ ಕೊಡುವರು ಎಂದು ಕೂಗಿದರು. ಪ್ರತಾಸನು ಮನಸ್ಸಿನಲ್ಲಿ, ಭಾಸ್ಕರನಿಗೆ, ನಾನೂ ಬಂದುತಡವೆ ಇನಾಂ ಕೊಟ್ಟಿದ್ದೇನೆ, ಒಳ್ಳೆಯದು, ಮತ್ತೊಂದು ತಡವೆಯ ಕೊಡುವೆನೆಂದಂದುಕೊಂಡು, ಪ)ಕಾಕ್ಯವಾಗಿ ಕೂಗಿ, ನಾನು ಹಿಡಿದುಕೊಳ್ಳುತ್ತೇನೆ, ನೀವು ಮೇಲಕ್ಕೆ ಹೋಗಿ ಎಂದು ಹೇಳಿದನು. - ಈ ಮಾತನ್ನು ನಂಬಿಕೊಂಡು ಎಲ್ಲರೂ ಹಡಗನ್ನೇರಿಕೊಂಡರು. ಫಸ್ಟ್ರನಿಗೆ, ಮುಂದೆ ಇದ್ದ ವನು ಪ್ರತಾಪನೆಂದು ಗೊತ್ತಾಗಲಿಲ್ಲ. ಮಾಸ್ಟ್ರನಿಗೆ ತಲೆಯ ಮೊದಲು ಆಗ ಇನ್ನೂ ನೀರೋಗವಾಗಿರಲಿಲ್ಲ. 12
ಪುಟ:ಚಂದ್ರಶೇಖರ.djvu/೯೫
ಗೋಚರ