ಪುಟ:ಚೆನ್ನ ಬಸವೇಶವಿಜಯಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ho) ದಶಾವತಾರಕಾರಣನಿರೂಪಣ ಪಾದಕ್ಕೆ ನಮಸ್ಕರಿಸಿ, ಹಿಂತೆಗೆದನು. ಶುಕನಾದರೆ- ತನ್ನ ಜಾಣ್ಮು ಡಿಯಿಂದ ಶಿವನನ್ನು ಮೆಚ್ಚಿಸಿದನು. (ಎಂದರೆ- ನಾನು ಹಾಗೆಯೇ ಮಾ ಡುತ್ತೇನೆಂದು ಬಿನ್ನೆ ಸಿದನು.) ಅವನ ಧೈಗಕ್ಕೆ ಸರಶಿವನು ಮೆಕ್ಸಿದನು. ಮೂಗಿನಮೇಲೆ ಬೆರಳಿಟ್ಟು ತಲೆದೂಗಿ, ನೀನೇ ಜಾಣನೆಂದು ಶ್ಲಾಘಿಸಿದ ನು. ಬಳಿಕ ದಯೆಯಿಂದ ಅವನಿಗೆ ಮಂತ್ರೋಪದೇಶವನ್ನು ಮಾಡಿ ಕೈ ಲಾಸಕ್ಕೆ ತೆರಳಿದನು. ಇತ್ತ ಶುಕ್ರನು ಪರಮಸಂತೋಷವ ಗ್ನನಾಗಿ ಬಂದು, ತನ್ನ ಶಿಷ್ಯರೆಲ್ಲರನ್ನೂ ಕರೆದು ನಮಗೆ ಈಗ ಶಿವನ ಕರುಣೆ ಯುಂಟಾಯಿತು. ಆ ಮಂತ್ರವು ನನಗೆ ಸಿದ್ಧಿಸುವವರೆಗೂ ನೀವೆಲ್ಲರೂ ಭ ಸ್ಮರುದ್ರಾಕ್ಷಜಟಾದಿಗಳನ್ನು ಧರಿಸಿ, ಅಲ್ಲಲ್ಲಿ ತಪಸ್ಸನ್ನು ಮಾಡಿಕೊಂಡಿ ರಿ; ಆ ಸಮಯದಲ್ಲಿ ನಿಮ್ಮ ಶತ್ರುಗಳು ನಿಮ್ಮ ಮೇಲೆ ಬಿದ್ದು ಕೊಲ್ಲುವು ದಕ್ಕೆ ಬಂದರೆ ಆಗ ನನ್ನ ತಂದೆಯಾದ ಭೌಗುವನ್ನು ನೀವುಗಳು ಮರೆ ಹುಗಿ, ಎಂದು ಹೇಳಿ, ಎಲ್ಲರನ್ನೂ ಕಳುಹಿಬಿಟ್ಟು, ತಲದೆಯ ಆಶ್ರಮ ಕೈ ತಾನು ಹೋಗಿ ಈ ವೃತ್ತಾಂತವನ್ನೆಲ್ಲ ಅವನೊಡನೆ ಬಿಸಿ! ಅವ ನಪ್ಪಣೆಯನ್ನು ಪಡೆದು ಹೋಗಿ ತಪಸ್ಸನ್ನಾಚರಿಸುತ್ತಿದ್ದನು. ಈ ಸು ದ್ವಿ ಯನ್ನೆಲ್ಲ ದೇವತೆಗಳು ಕೇಳಿ, ದಿಗಿಲು ಬಿದ್ದು, ಬುದ್ದಿ ತೋರದೆ, ವಿಷ್ಣು ವಿನ ಬಳಿಗೆ ಹೋಗಿ, ಶುಕ್ರಾಚಾರ್ನ ಪ್ರಯತ್ನವನ್ನಲ್ಲ ಬಿನ್ನೆ ಸಿದರು. ಆಗ ವಿಷ್ಣುವು ಶಿವನು ಕೊಟ್ಟಪ್ಪಣೆ ಯು ಹುಸಿಯುವುದಿಲ್ಲ; ಆದುಕಾರ ಣ ಬಲಾಢನಾದ ಶುಕ್ರನು ತಪಸ್ಸನ್ನು ಮಾಡಿ ಮಂತ್ರಸಿದ್ದಿಯನ್ನು ಪ ಡೆದುಕೊಂಡು ಬರುವುದರೊಳಗಾಗಿ ರಾಕ್ಷಸಕುಲವನ್ನೆಲ್ಲ ನಿ- ಲಮಾ ಡಿಬಿಡಬೇಕು. ಆದುದರಿಂದ ಅವರೆಲ್ಲೆಲ್ಲಿ ತಪಸ್ಸನ್ನಾಚರಿಸುತ್ತಿದ್ದರೂ ಹುಡುಕಿ ಮೇಲೆ ಬಿದ್ದು ಕೊಲ್ಲಿರೆಂದು ಅಹ್ಮದಿಕ್ಷಾಲಕರಿಗೆ ಆಜ್ಞಾಪಿಸಿ ದನು, ಆ ಕೂಡಲೇ ಇಂದ್ರಾದಿಗಳೆಲ್ಲರೂ ಚತುರಂಗಸೈನ್ಸಸಮೇತ ರಾಗಿ ಹೊರಟು, ಗಿರಿ ನದಿಃ ಗುಹಾದಿಗಳನ್ನೆಲ್ಲ ತಡಕಿ, ನಿರಾಯುಧರಾಗಿ ಶಿವಧ್ಯಾನದಲ್ಲಿ ಕುಳಿತಿರುವ ರಾಕ್ಷಸರನ್ನೆಲ್ಲ ತರಿದು, ಇರಿದು, ಕೊರೆದು, ಸಿಗಿದು, ಬಿಗಿದು, ಬಗಿದು, ಕೊಲ್ಲುತ್ತ ಬರುತ್ತಿದ್ದರು. ಆಗ ಉಳಿದಿ ದ್ದ ರಾಕ್ಷಸರೆಲ್ಲರೂ ತಪಸ್ಸಿನಿಂದೆದ್ದು ಓಡಿಬರುತ್ತ, “ ಆಹಾ ! ಹುಟ್ಟಿ ದಂದಿನಿಂದ ನನ್ನನ್ನು ಕಂಡಕೂಡಲೇ ದಿಕ್ಕುಗೆಟ್ಟು ಓಡುತ್ತಿದ್ದ