ܐܼܲܩܘ h೧೩ ಜಲಂಧರಾಸುರನ ಕಥೆ ಸುರಿಸಿದನು. ಸಕಲ ದಿಕ್ಕಾಲಕರನ್ನೂ ಯಕ್ಷ ಗಂಧರ ಕಿನ್ನರ ಕಿಂಪುರುಷಾ ದಿದೇವನಿಚಯವನ್ನೂ, ಹಶರಥ ಪದಾತಿಸೇನಾಸಮೇತವಾಗಿ ಜಲಂ ಧರನಮೇಲೆ ಯುದ್ಧ ಮಾಡುವುದಕ್ಕಾಗಿ ಬರಬೇಕೆಂದು ಆಜ್ಞಾಪಿಸಿದನು. ಆ ಕೂಡಲೇ ಅಮರಾವತಿಯೊಳಗೆಲ್ಲ ಆನೆಗೆ ಹೊದಿಕೆಯನ್ನು ಹಾಕು, ಕುದು ರೆಗೆ ಕಡಿವಾಣವನ್ನು ಜೋಡಿಸು, ತೇರನ್ನು ಕಟ್ಟು, ಕವಚ ಟೊಪ್ಪಿಗೆ ಗಳನ್ನು ತೊಡು, ಬೇಗನೆ ಚೆಲ್ಲಣವನ್ನಿಕ್ಕು, ಮುಸಲ ಮುದ್ಧರ ತೋಮ ರ ಕುಂತ ಮೊದಲಾದ ಆಯುಧಗಳನ್ನು ಕೊಡು, ಬೇಗ ನಡೆ, ಎಂಬ ನಾನಾವಿಧದ ಯುದ್ದ ಕುತೂಹಲದ ಗಜಬಜವು ತುಂಬಿಕೊಂಡಿತು. ತ «ನ್ನು ರಾಕ್ಷಸನ ಸೈನ್ಯವು ಮುತ್ತುವುದಕ್ಕೆ ಬರಲಾಗಿ ಅಮರಾವತಿಯು ಕಂಡು, ಅದನ್ನು ಜೈಸುವುದಕ್ಕಾಗಿ ಪ್ರತಿ ಸೇನೆಯನ್ನೇ ಹೊತ್ತಿರುವ ಎಂಬಂತೆ ನಾನಾವಾದೃಧನಿಗಳಿಂಬೆ ಭೋರ್ಗರೆಯುತ್ತ, ಕತ್ತಿ ಗುರಾಣಿ ಬಿಲ್ಲು ಬಾಣ ಗದೆ ಮೊದಲಾದುವುಗನ್ನು ಹಿಡಿದು ಆರ್ಭಟಿಸುತ್ತಲಿರುವ ಶರಭಟರುಗಳು ಕೊಟ್ಟನುಕೆ ಟಯಾಗಿ ಪಟ್ಟಣದಿಂದ ಹೊರಟ ರು. ಆಗ ದೇವೇಂದ್ರನು ಶೃಂಗರಿಸಿದ ಐರಾವತವನ್ನೇರಿ, ಸ್ತುತಿಪಾಠಕರಿಂ ದ ಹೊಗಳಿಸಿಕೊಳ್ಳುತ್ತ, ಛತ್ರಚಾಮಗಳಿಂದುಪಚರಿಸಿಕೊಳ್ಳತ್ರ್ಯ, ದಿ ಕ್ಯಾಲಕರ ಕರಾವಲಂಬನವನ್ನು ಸ್ವೀಕರಿಸುತ್ತ, ಮನುವುನಿಗಳ ಆಶಿ ದ್ವಾದವನ್ನು ಪಡೆಯುತ್ತ, ಅತ್ಯಂತವೈಭವದಿಂದ ಯುದ್ಧಕ್ಕೆ ಹೊರಟ ನು, ಬಳಿಕ ಅಗ್ನಿಯು ಟಗರನ್ನೂ, ಯಮನು ಕೊಣನನ್ನೂ, ನಿಮೃತಿ ಯು ಮನುಷ್ಯನನ್ನೂ, ವರುಣನು ಮೊಸಳೆಯನ್ನೂ, ವಾಯುವು ಎರಳೆಯನ್ನೂ, ಕುಬೇರನು ಕುದುರೆಯನ್ನೂ, ಈಶಾನನು ವೃಷಭನ ನೂ, ಹತ್ತಿಕೊಳ್ಳಲು, ಉಳಿದ ಸುನರೋರಗಗರುಡಗಂಧ ಕಿನ್ನಕಿಂಪು ರುಪಾದಿಗಳೆಲ್ಲ ತಮ್ಮ ತಮ್ಮ ವಾಹವನ್ನಿರಿ ಸಡಗರದಿಂದ ದೇವೇಂದ್ರನ ಎರಡು ಪಕ್ಕಗಳಲ್ಲಿ ಹೊರಗು. ಆ ದೇವಸೇನೆಯಲ್ಲಿ ಸೃಷ್ಟಸ್ತರ ಣಗಳನ್ನು ಹೊದ್ದಿನಿ, ಗಂಬೆಗಳನ್ನು ಜೋಲುಬಿಟ್ಟು, ಮೇಲೆ ಧಕ್ವ ನ್ನು ಎತ್ತಿ ಹಿಡಿದು, ಮುಖದಮೇಲೂ ಕಿವಿಯಮೇಲೂ ಚಿತ್ರರೇಖೆಯಂ ಬರೆದು, ಕಿವಿಗೆ ಶ್ವೇತಚಾಮರಗಳನ್ನು ಇಳಿಯಬಿಟ್ಟು, ಅಲಂಕರಿಸಿದ ಆ ನೆಗಳು ಮುದದಿಂದ ತೂಗಾಡುತ್ತ ಕಿವಿಯನ್ನು ಝಾಡಿಸುತ್ತ ಸುಂಡಿಲನ್ನು 15
ಪುಟ:ಚೆನ್ನ ಬಸವೇಶವಿಜಯಂ.djvu/೧೨೬
ಗೋಚರ