೧೩] , Ah ಜಲಂಧರನಿಂದ ದೇವೇಂದ್ರನಸಜಯ ದೇವನಾಯಕರೆಲ್ಲರೂ ಹಿಮ್ಮೆಟ್ಟ ಓಡಿಹೋಗುತ್ತಿರಲು, ಅವರ ಚತುರಂ ಗಬಲವೂ ಅವರನ್ನೇ ಹಿಂಬಾಲಿಸಿತು. ಬಿರುಗಾಳಿಯು ಸಣ್ಣ ಕಸ ಕಡ್ಡಿ ಯನ್ನೆಲ್ಲ ಬಡಿದೋಡಿಸಿಕೊಂಡು ಹೋಗುವಂತೆ ಅವರ ಹಿಂದಿನಿಂದ ರಾಕ್ಷ ಸಸೇನೆಯು ಜಡಿದು ಬಡಿದು ಓಡಿಸಿಕೊಂಡು ಹೋಗುತ್ತಿದ್ದಿತು. ದಿಕ್ಕು ಗೆಟ್ಟು ದೇವತೆಗಳೊಡುತ್ತಿರುವುದನ್ನು ನೋಡಿ ರಾಕ್ಷಸರು ಕೇಕೆಹಾಕು ತಲೂ, ಜರೆಯುತ್ತಲೂ, ಬೈಯುತ್ತಲೂ, ಕೈಗೆ ಸಿಕ್ಕಿದವರನ್ನು ಗುದ್ದಿ ತುಳಿದು ಕೊಲ್ಲುತ್ತಲೂ, ಅವರ ಆನೆ ಕುದುರೆ ರಥಗಳಮೇಲೆ ಕುಳಿತು ಬೊಬ್ಬಿರಿಯುತ್ತಲೂ, ರಕ್ತವನ್ನು ಹೀರಿ ಚಪ್ಪರಿಸುತ್ತಲೂ ಯಥೇಚ್ಚ ವಾಗಿ ರಣಾಂಗಣದಲ್ಲಿ ವಿಹರಿಸುತ್ತಿದ್ದರು. . ದಿಕ್ಕುಗೆಟ್ಟು ಓಡುತ್ತ ಕೈಗೆ ಸಿಕ್ಕಿದವರನ್ನು ತರಿಯುವುದಕ್ಕಾಗಿ ರಾಕ್ಷಸರು ಕೈ ಕತ್ತಿಯನ್ನೆತ್ತಿದರೆ ದೇ ವತೆಗಳು ಆ ಕತ್ತಿಯ ಕಡೆಗೇ ಕಣ್ಣನ್ನು ತಿರುಗಿಸಿ ದೈನ್ಯದಿಂದ ಹಲ್ಕಿರಿ ಯುತ್ತಲೂ, ಕೈಗಳನ್ನು ಚಾಚಿ ಕೊಲ್ಲಬೇಡಿರೆಂದು ಬೇಡಿ, ಕಾಲ್ ಬೀ ಳುತ್ತಲೂ, ಬಾಯಲ್ಲಿ ಹುಲ್ಲನ್ನು ಕಚ್ಚಿ, ನನ್ನ ತಲೆಯನ್ನುಳುಹಿ ಕಾಪಾ ಡಯ್ಯ ! ನಿನ್ನ ಮನೆಯಾಳಾಗಿರುತ್ತೇವೆಂದು ಕೇಳಿಕೊಳ್ಳುತ್ತಲೂ, ತಲೆ ಯನ್ನುಳುಹಿಕೊಂಡು, ಸತ್ತು ಬಿದ್ದಿರುವ ಆನೆ ಕುದುರೆಗಳ ಮರೆಯಲ್ಲಿ ಅವಿತಿದ್ದು ಓಡಿಹೋಗುತ್ತಿದ್ದರು, ದೇವತೆಗಳ ಕಳೆದುಳಿದ ಚತುರಂಗ ಸೈನ್ಯವು ಒಂದರಮೇಲೊಂದು ಬಿದ್ದು ಕೈಕಾಲನ್ನು ಮುರಿದುಕೊಂಡು ರಕ್ತವನ್ನು ಸುರಿಸುತ್ತ ಓಡಿಬಂದು ಅಮರಾವತಿಯ ಕಂದಕವನ್ನು ಬಂ ದು ಸೇರಿತು, ಪಟ್ಟಣದ ಕಿರಿದಾದ ಬಾಗಿಲಲ್ಲಿ ನಾನು ಮುಂದು ತಾನು ಮುಂವೆಂದು ಪಟ್ಟಣವನ್ನು ಹೊಕ್ಕಿಕೊಳ್ಳುವ ರಭಸದಲ್ಲಿ ಎಷ್ಟೋ ಮಂದಿ ಗಳು ಆನೆ ಕುದುರೆ ರಥಗಳಿಗೆ ನಿಕ್ಕಿ ಅಂಗವಿಕಲರಾಗಿ ಅನೇಕರು ಪ್ರಾಣ ಕೊಟ್ಟರು. ಆಳೇರಿಗಳ ಮೇಲೆ ಹೆಂಗುಸರು ನಿಂತು ನೋಡುತ್ತಿರಲು, ಕೆಳಗಿನಿಂದ ಅವರಿಗೆ ಕೈಮುಗಿದು ದಯೆಯಿಟ್ಟು ಬೇಗನೆ ನಮ್ಮನ್ನು ಮೇಲಕ್ಕೆ ಸೇರಿಕೊಳ್ಳಿರೆಂದು ಕೆಲವರು ಬೇಡಿಕೊಳ್ಳುತ್ತಿದ್ದರು. ಇಪ್ಪ ರಲ್ಲಿ ರಾಕ್ಷಸಸೇನೆಯು ಅಮರಾವತಿಯ ಬಾಗಿಲಿಗೆ ಓಡಿಸಿಕೊಂಡು ಬರೆ ದಿತು. ಕಾವಲುಗಾರರು ಥಟ್ಟನೆ ಕೋಟೆಯ ಬಾಗಿಲನ್ನು ಮುಚ್ಚಿ ಬಂಧಿಸಿದರು.
ಪುಟ:ಚೆನ್ನ ಬಸವೇಶವಿಜಯಂ.djvu/೧೩೨
ಗೋಚರ