೧೪ ಚನ್ನ ಬಸವೇಕವಿಜಯಂ, (ಕಾಂಶ 4) [ಅಧ್ಯಾಯ ತಿದ್ದಳು. ಬಾಲ್ಯವನ್ನು ಕಳದು ಯವನಾವಿರ್ಭಾವಗೊಂಡ ಮಾರುತಿಯ ಕಪೋಲಗಳಲ್ಲಿ ಕೆಂಪು ಮೂಡಿತು. ಕಂಕುಳಲ್ಲಿ ಪದ್ಮ ವಾಸನೆಯ ಬೆನ ರು ಹುಟ್ಟಿತು, ಮುಖದಲ್ಲಿ ಲಾವಣ್ಣವಿಚಿಯು ತೇಲಾಡಹತ್ತಿತು. ದೀ ರ್ಘವಾದ ನಯನಗಳು ತುದಿಯಲ್ಲಿ ಕೆಂಪನ್ನು ತಾಳಿದುವು. ನಡುವು ಸಣ್ಣನಾಯಿತು, ತೊಡೆಗಳು ನುಣುಪಾದುವು. ಮಾತಿನಲ್ಲಿ ಸೊ ಗಸು ಹೆಚ್ಚಿತು, ನಡಗೆಯು ಮಂದವಾಯಿತು. ನಗೆಯಲ್ಲಿ ನಾಚಿಕೆಯು ಬೆರೆದಿತು. ಎದೆಗಳು ಉಬ್ಬಿರಿದುವು. ಪ್ರತಿಯೊಂದು ಅಂಗವೂ ಸಲ್ಲಕ ಣಕ್ಕೆ ತಕ್ಕಂತೆ ದುಂಡಾಗಿ ಮಿರುಗುತ್ತಿರಲು, ಅಗಜಾತೆಯು ಶೃಂಗಾರದ ಗಣಿಯಾಗಿಯೂ, ಲಾವಣ್ಯದ ಹೊಳೆಯಾಗಿಯೂ, ಸಂದದ ನಿಧಿಯಾ ಗಿಯೂ, ಮಾಂಗಲ್ಯದ ಮನೆಯಾಗಿಯ, ಸೊಂಪಿನ ಬೀಡಾಗಿಯೂ, ಮೆರೆಯುತ್ತಿದ್ದಳು. - ಆಗಳೊಂದಾನೊಂದು ದಿವಸ ನಾರದ ಮಹರ್ಷಿಯು ವೀಣೆಯನ್ನು ಬಾಜಿಸುತ್ತ ಆಕಾಶಮಾರ್ಗದಿಂದಿಳಿದು ನಗರಾಜನರಮನೆಗೆ ಬಂದನು. ಅರಸನು ಮನ್ನಿಯನ್ನು ಕಂಡು ನಮಸ್ಕರಿಸಿ, ಅಂತಃಪ್ರರಕ್ಕೆ ಕರೆದುಕೊಂಡು ಹೋಗುತ್ತಿರಲು, ಇದಿರಾಗಿ ಪಾರತಿಯು ಬಂದಳು. ನಾ ರದನು ಕಂಡು ಥಟ್ಟನೆ ದೇವಿಯ ಪಾದಾರವಿಂದಕ್ಕೆ ನಮಸ್ಕರಿಸಿದನು. ಪರತರಾಜನಾದರೆ ಇದೇನಾಶ್ಚರೈವೆಂದು ಬೆರಗಾಗಿ, ವಂದ್ಯರಾದ ತಾವು ನನ್ನ ಮಗಳಿಗೆ ನಮಸ್ಕರಿಸುವುದೆಂದರೇನು ? ಎಂದು ಕೇಳಿದನು. ಅದಕ್ಕೆ ನಾರದರ್ಪಿಯು _ ಗಿರಿರಾಜನೆ, ದೇವಗಂಗೆಯು ಆಕಾಶದಿಂದಿ ಆದುಬಂದಮಾತ್ರದಿಂದಲೇ ಅದಕ್ಕೆ ಆಕಾಶವು ತಾಯಿಯಾಯಿತೆ ? ಕಲ್ಪ ವೃಕ್ಷವು ಹುಟ್ಟಿರುವ ಮಾತ್ರದಿಂದಲೇ ಅದಕ್ಕೆ ನಂದನವನವು ಜನನಿಯಾ ಗುವುದೆ ? ಅದರಂತೆಯೇ ಜಗದಂಬಿಕೆಯು ಕಾ ಕಾರಣಸಂಬಂಧದಿಂ ದ ನಿಮ್ಮ ಮನೆಯಲ್ಲಿ ನೆಲಸಿದ್ಧ ಮಾತ್ರದಿಂದಲೇ ನಿಮಗೆ ಮಗಳಾಗಿ ಹೋ ದಳ ? ಶಿವಪತ್ನಿಯು ದಕ್ಷಯಾಗದಲ್ಲಿ ದೇಹವನ್ನು ಬಿಟ್ಟ ಬಳಿಕ ನಿನ್ನ ಪ ತ್ರಿಗೆ ಕೊಟ್ಟಿದ್ದ ವರವನ್ನು ಪರಿಪಾಲಿಸುವುದಕ್ಕಾಗಿ ಆಕೆಯ ಗರ್ಭವನ್ನು ಪ್ರವೇಶಿಸಿದ್ದಳು; ದೇವಿಯ ವಿಯೋಗದಿಂದ ಪರಶಿವನು ಹೇಮಕೂಟಪ ರತದೊಳಗೆ ತುಂಗಭದ್ರಾ ತೀರದಲ್ಲಿ ಆತ್ಸಾ ರಾಮನಾಗಿ ತಪಸ್ಸಿನಲ್ಲಿ ಕು ಇತಿರುವನು; ನೀನು ಈ ತಾಯಿಯನ್ನು ಸಾಮಾನ್ಯಳೆಂದು ತಿಳಿಯಬೇಡ,
ಪುಟ:ಚೆನ್ನ ಬಸವೇಶವಿಜಯಂ.djvu/೧೯೫
ಗೋಚರ