ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܬ݁ܶܗܘܶ ಮರಸೀತಪಕ್ಖರಣವು ಈಕೆಯ ಸಂಬಂಧದಿಂದ ನಿಮ್ಮ ವಂಶವೆಲ್ಲ ಪಾವನವಾಯಿತು, ನೀವು ಸತಿ ಪತಿಗಳು ಕೃತಾರ್ಥರಾದಿರಿ. ಶಿವನ ಬಳಿಗೆ ಈ ಮಹಾದೇವಿಯನ್ನು ಕ ಳುಹಿಕೊಡಿ ?” ಎಂದು ದೂರಸಂಬಂಧವನ್ನೆಲ್ಲ ತಿಳಿಸಿ, ಮುರಾದೆಯಿಂದ ಬೀಳ್ಕೊಂಡು ಹೊರಟು ಹೋದನು. ಸತಿಪತಿಗಳು ಪಾರತಿಯನ್ನು ಪ ರಾಶಕ್ತಿಯ ಪರಾವತಾರವೆಂದು ತಿಳಿದು, ಭಯಭಕ್ತಿಯಿಂದಾದರಿಸಿ, ಆ ಕೆಯ ಇಷ್ಟಾನುಸಾರವಾಗಿ ತಿವನಕ್ಕೆ ಕಳುಹಿಕೊಟ್ಟರು. ಗಿರಿಜೆ ಯು ತಾಯಿಯ ಪಾದಕ್ಕೆ ನಮಸ್ಕರಿಸಿ, ತಂದೆಯೊಡನೆ ಪುಷ್ಟ ವಿಮಾನಾ ರೂಢಳಾಗಿ, ಸಖಿಯರೊಡನೆ ಹೇಮಕೂಟತಕ್ಕೆ ಬಂದಳು. ಆ ಪ ರತವು ನಾನಾತರುಲತಾನಿಕುರುಂಒದಿಂದ ನಿಬಿಡವಾಗಿ, ಶಾಂತಗಳಾದ ಹುಲಿ ಕರಡಿ ಕಾಡೋಣ ಕವಿ ಕಡವೆ ಕಾಡಾನೆ ಮೊದಲಾದ ಮೃಗಗಳಿ೦ ದಲೂ, ಗಿ೪ ನವಿಲು, ಹಂಸ, ಕೋಗಿಲೆ, ಚಕ್ರ, ಚಕೋರ, ಗೌಜಿಗ ಮೊದಲಾದ ಪಕ್ಷಿಗಳ ಸಮೂಹದಿಂಲೂ ಕೂಡಿ ಮನೋಹರವಾಗಿದ್ದಿತು. ಆ ಬೆಟ್ಟದಮೇಲೆ ಕವಿದು ಚಿಗುರೆರಿ ಕೆಂಪಾದ ಮರಗಳೇ ಜಡೆಗಳಂತೆ ಯ, ಸೂಸ್ಯ ಚಂದ್ರಕಾಂತಶಿಲೆಗಳೆ ಕಣ್ಣುಗಳಂತೆಯೂ, ಕಾಳ್ ಪ್ಲೇ ಫಾಲನೇತ್ರದಂತೆಯೂ, ಕಂಠಪ್ರದೇಶದಲ್ಲಿರುವ ಕಗ್ಗಲ್ಲೇ ಕತ್ತಿನ ವಿಷದಂ ತೆಯೂ, ಮುಚ್ಚಿಕೊಂಡಿರುವ ಹಿಮವೇ ತೊಡೆದ ವಿಭೂತಿಯಂತೆಯೂ, ದೊಡ್ಡ ದೊಡ್ಡ ಗುಂಡುಗಳ ಸಾಲೆ ರುಂಡಮಾಲೆಯಂತೆಯೂ ಇರುತ್ತಿರ ಲು, ಹೇಮಕೂಟವು ಸಮಾನರೂಪದಿಂದ ಶಿವನಹಾಗೆ ಕಾಣುತ್ತಿದ್ದಿತು. ಅದರ ಸಾಂದಗ್ಗವನ್ನು ದೂರದಿಂದಲೂ ನೋಡುತ್ತು ತಾಳುಬೆಟ್ಟಕ್ಕೆ ಬರಲು, ನಾನಾಜಲಚರಗಳಿಂದಲೂ ತೆರೆನೊರೆಗಳಿಂದಲೂ ಕೂಡಿ ಮಂಗ ಇಮಯವಾಗಿ ಹರಿಯುತ್ತಿರುವ ತುಂಗಭದ್ರಾ ನದಿಯು ಕಾಣಿಸಿತು. ಅ ದರಲ್ಲಿರುವ ದೊಡ್ಡ ದೊಡ್ಡ ನೊರೆಗಳ ಗುಡ್ಡೆಯೇ ಕೈಯ ಕಲಶದಂತೆಯೂ, ದುಂಡಾದ ಬಿಳಿದಾವರೆಹೂವುಗಳು ದರ್ಪಣಗಳಂತೆಯ, ನೀtನ ಹನಿಗ ಳು ಮುತ್ತಿನ ಅಕ್ಷತೆಯಂತೆಯ, ನೀರಿನ ಮೊರೆತವೇ ವಾದ್ಯಕ್ಷನಿಯಂತೆ ಯೂ, ಜಲಚರಗಳ ಪರಿಜನರಂತೆಯೂ, ಸುಳಿಗಳೇ ಆರತಿಯ ತಟ್ಟೆಗೆ ೪೦ತೆಯೂ ಕಾಣುತ್ತಿರಲು, ಶಿವನ ಪಟ್ಟದರಾಣಿಯು ತಾನಿರುವ ಬೆಟ್ಟಕ್ಕೆ ಬರುತ್ತಿರುವಳೆಂಬುದನ್ನು ಕೇಳಿ ಸಂತೋಷದಿಂದ ಸಕಲಮಂಗಳದ್ರವ್ಯ 24 ಟ