ಪುಟ:ಚೆನ್ನ ಬಸವೇಶವಿಜಯಂ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦]. +64 ಗಿರಿಜಾ ಕಲ್ಯಾಣವು ಳದ ಪಕ್ಷಗಳಲ್ಲಿ ಲಕ್ಷ್ಮಿ ಸರಸ್ವತಿ ಶಚಿ ಸಾಹೆ ಮೊದಲಾದ ದೇವಾಂಗ ನಾಮಣಿಯರುಗಳೂ, ಸಪ್ತಮಾತೃಕೆಯರೂ, ಋಪತ್ನಿಯರೂ, ಗಣ ವಧೂಟಗಳೂ ತಂಡತಂಡವಾಗಿ ಬರುತ್ತಿದ್ದರು. ಈ ಪರಿವಾರದಿಂದ ಕೂ ಡಿ ವೈಭವದೊಡನೆ ಬಂದ ಸರತಿಯು ವಿವಾಹಮಂಟಪದ ಬಾಗಿಲಲ್ಲಿ ಲಕ್ಷ್ಮಿ ಸರಸ್ವತಿಯರ ಕರಾವಲಂಬನದಿಂದ ಅಂದಳವನ್ನಿಳಿದು, ಒಳಹೊ ಕು, ಮಧ್ಯದಲ್ಲಿ ರಂಜಿಸುತ್ತಿದ್ದ ವಿವಾಹವೇದಿಕೆಯನ್ನು ಹತ್ತಿದಳು. ವಧೂವರರ ಮಧ್ಯದಲ್ಲಿ ಪಟ್ಟೆಯ ತೆರೆಯು ಹಿಡಿಯಲ್ಪಟ್ಟಿದ್ದಿತು. ಕೂಡ ಲೇ ಸರ್ವರೂ ಜಯಘೋಷವನ್ನು ಮಾಡಿದರು, ಸಕಲ ವಾದ್ಯಗಳೂ ಮೊಳಗಿದುವು. ಲಕ್ಷ್ಮಿ, ಸರಸ್ವತಿ, ಶಚಿ, ಅಹಿ, ಲೋಪಾಮುದ್ರೆ, ಗಾಯತ್ರಿ, ಸಾವಿತ್ರಿ, ಮೊದಲಾದ ದೇವ ಮುನಿ ಮಾನವ ಸ್ತ್ರೀಯರೆಲ್ಲ ಶೋಭನವನ್ನು ಹಾಡುತ್ತಿದ್ದರು. ಸುಮುಹೂರ್ತವು ಒದಗಲು, ಬೃಹ ಸ್ಪಾಟಾಗೃನ ಪ್ರಾರ್ಥನೆಯ ಮೇರೆ ವಧೂವರರು ಮೆಟ್ಟಕ್ಕಿಯ ಗೂಡೆ ಗಳನ್ನು ಮೆಟ್ಟ ದರು, ಪುರೋಹಿತನು ಮಂಗಳಾತ್ಮಕವನ್ನು ಪಠಿಸಿ ವೇದ ಮಂತ್ರೋದ್ಯೋಪದೊಡನೆ ಸತಿಪತಿ ಯರ ತಲೆಯಮೇಲೆ ಪರಸ್ಪರ ಗುಡಜೀ ರಕಾರೋಹಣವನ್ನು ಮಾಡಿಸಿದನು ಹರಿಬ್ರಹ್ಮಾದಿಗಳೆಲ್ಲರೂ ಜಯಘೋಷ ವನ್ನು ಮಾಡಿದರು. ಬಳಿಕ ತೆರೆಯು ತೆಗೆಯಲ್ಪಟ್ಟಿತು, ಪರಸ್ಪರ ನಿರೀಕ್ಷಣೆ ಯಾಯಿತು, ವಧೂವರರಹಸ್ತದಿಂದ ಮತ್ತೆ ಮುತ್ತಿನ ಅಕ್ಷತೆಯ ಆರೋಪಣ ನನ್ನ ಪರಸ್ಪರವಾಗಿ ಮಾಡಿಸಿದರು. ಗಿರಿರಾಜನು ಪತ್ನಿ ಸಮೇತನಾಗಿ ನಿಂ ತು, ಶಿವನಬಲಗೈಯಮೇಲೆ ಪಾರ್ವತಿಯ ಫಲಯುಕ್ತವಾದ ಅಂಜಲಿಯನ್ನಿ ಡಿಸಿ, ಹಿರಣ್ಣಸಮೇತವಾಗಿಯೂ ಬಿಲದಳಯುಕ್ತವಾಗಿಯೂ ಮೇನಕಿ ಯಿಂದ ಬಿಡಲ್ಪಟ್ಟ ಜಲಧಾರೆಯಿಂದ ಪರಶಿವನಿಗೆ ಸಾಲಂಕೃತಕನ್ಯಾದಾನವ ನ್ನು ದಕ್ಷಿಣಾಸಮೇತವಾಗಿ ಮಾಡಿದನು. ವಾದ್ಯಗಳು ಮೊಳಗುತ್ತಿದ್ದುವು. ಮನುಮುನಿಗಳು ಜಯಘೋಪವನ್ನು ಮಾಡುತ್ತಿದ್ದರು, ಗಣವರರುಗಳು ಮಂಗಳಾಷ್ಟ್ರಕವನ್ನು ಸಹಿಸುತ್ತಿದ್ದರು. ಬಳಿಕ ಸತಿಪತಿಯರ ಕೊರಲಿನಲ್ಲಿ ಪರಸ್ಪರವಾಗಿ ಪುಷ್ಪಮಾಲೆಯು ಅರ್ವಿಸಲ್ಪಟ್ಟಿತು, ಈರ್ವರೂ ರನ್ನದ ಹಸೆಮಣೆಯಮೇಲೆ ಕುಳಿತುಕೊಂಡರು.” ಪರಶಿವನು ತನ್ನ ಅಭಯ ಹಸ್ತದಿಂದ ಸರ್ವಮಂಗಳೆಯ ಕಂಠದಲ್ಲಿ ಮಾಂಗಲ್ಯಧಾರಣೆಯನ್ನು ಮಾ