ಚನ್ನಬಸವೇಶವಿಜಯಂ (ಕಾಂಡ 4) [ಅಧ್ಯಾಯ ಜ್ವಾಲೆಯು ಲೋಕತ್ರಯವನ್ನೂ ಬೇಗೆಗೊಳಿಸಿತು. ನಕ್ಷತ್ರಗಳು ಉದುರಿ ದುವು, ಭೂಮಿಯು ಬಿರಿದಿತು, ಸಮುದ್ರಗಳು ಕುದಿದುವು. ಮಹಾಪ್ರಳಯ ಸಮಯವೊದಗಿತೆಂದು ಜಗತ್ತೆಲ್ಲ ದಡಗುಟ್ಟಿತು. ಆಗ ಕುಮಾರಸ್ವಾಮಿಯು ಅಸ್ತ್ರವನ್ನಭಿಮಂತ್ರಿಸಿ, ಕೆಂಚಪರತದ ಗುಹೆಯಲ್ಲಿ ಅಡಗಿರುವ ತಾರ ಕನೇ ನಿನಗೆ ಗುರಿಯೆಂದು ಬೋಧಿಸಿ, ಮಹಾರಭಸದಿಂದ ಪ್ರಯೋಗಿಸಿದ ನು. ಅದು ಹೊರಟಶಬ್ದಕ್ಕೆ ಪ್ರಪಂಚವೆಲ್ಲ ಪ್ರತಿಧ ನಿಗೊಂಡಿತು. ಮು ಖದಿಂದುಗಿದ ಕಿಡಿಗಳು ಭೂಮ್ಯಂತರಿಕ್ಷವನ್ನು ತುಂಬಿದುವು, ವಾಯುವೇ ಗವನ್ನು ಮಾರಿ ಬಂದ ಮಹಾಸ್ತ್ರವು ಕೌಂಚಪರತವನ್ನೇ ನಟ್ಟು ಎರ ಡು ಹೋಳಾಡಿ ಉರುಳಿಸಿ, ಒಳಗಿದ್ದ ತಾರಕನ ದೇಹವನ್ನು ತುಣುತುಣು ಕಾಗಿ ಕತ್ತರಿಸಿಬಿಟ್ಟಿತು. ಇತ್ತ ರಣಾಂಗಣದಲ್ಲಿ ಆಕಾಶದಿಂದ ಹೂಮಳೆ ಯು ಸುರಿದಿತು. ದೇವದುಂದುಭಿಯು ಮೊಳಗಿತು. ದೇವತೆಗಳು ಜಯ ಘೋಪವನ್ನು ಮಾಡಿದರು. ಗಣವರರು ಉಫೆಯೆಂದರು. ನಂದಿಗಳು ಕು ಮಾರಸ್ವಾಮಿಯ ಬಿರುದಾವಳಿಗಳನ್ನು ದೊಪ್ಪಿಸಿದರು, ಹಬ್ರಹ್ಮರುಗಳೂ ಇಂದ್ರಾದಿದಿತ್ಸಾಲಕರೂ, ಕಿನ್ನರಕಿಂಪುರುಷವಿದ್ಯಾಧರಾದಿಗಳೂ ತಾರ ಕಾರಿಯನ್ನು ಕೊಂಡಾಡಿ ನಮಸ್ಕರಿಸಿದರು. ಎಲೆ ಸಿದ್ದರಾಮೇಶನೆ ಕೇಳುದುರ್ಜನರನ್ನು ಮೈ ಹಾಕಿಕೊಂಡರೆ ತನಗೂ ಕೇಡು ತಪ್ಪದು ಎಂಬ ನಿ? ತಿಯು ಸುಳ್ಳಾಗದು, ಲೋಕಕಂಟಕನಾದ ತಾರಕನನ್ನು ಮೈ ಹಾಕಿ ಕೊಂಡುದರಿಂದ ಕೌಂಚಪರತವೂ ಇಬ್ಬಾಗಗೊಳ್ಳಬೇಕಾಯಿತು. ಬಳಿಕ ವಿಜ್ಞಾಲಕರೆಲ್ಲರಿಗೂ ಮಹಾಸೇನಾನಿಯು ಅವರವರ ಪಟ್ಟಣಗ ಳನ್ನವರವರು ವಶಮಾಡಿಕೊಳ್ಳುವಂತೆ ಅಪ್ಪಣೆಮಾಡಿದನು, ಜಗತ್ತು ನಿ ಇಂಟಕವಾಯಿತು. ಸರರೂ ಹಾಲು ಅನ್ನವನ್ನುಂಡು ಸಂತೋವಿನಿಕು ಮಾರಸ್ವಾಮಿಯನ್ನು ಕೊಂಡಾಡಿದರು. ಅತ್ತ ತಾರಕನ ಮಕ್ಕಳುಗಳೂ ಕಳದುಳಿದ ಇತರರಾಕ್ಷಸರೂ ಓಡಿಹೋಗಿ ಬೆಟ್ಟಗುಡ್ಡಗಳನ್ನು ಸೇರಿ ಕೊಂಡರು, ಇತ್ತ ಶಿಖಿವಾಹನನು ಹರಜೇಂದ್ರಾದಿ ಸಕಲದೇವಸ್ರೋ ಮದೊಡನೆ ಕೂಡಿ, ವಿಜಯಪತಾಕೆಯನ್ನು ಹಿಡಿಸಿಕೊಂಡು, ಮಹಾವಾದ್ಯ ವೈಭವದೊಡನೆ ಕೈಲಾಸಕ್ಕೆ ಬಂದು, ಪಾರತೀಪರವರಿಗೆ ನಮಸ್ಕರಿಸಿ, ನ .ಡೆದ ಸಂಗತಿಯನ್ನೆಲ್ಲ ಬಿನ್ನೆ ಸಿದನು. ಸಕಲದೇವತೆಗಳೂ ದೀರ್ಘದಂ
ಪುಟ:ಚೆನ್ನ ಬಸವೇಶವಿಜಯಂ.djvu/೨೪೧
ಗೋಚರ