ಶಕುಪತಿ ಪಟ್ಟು ಸಿ ಡವಾಗಿ ನಮಸ್ಕರಿಸಿ, ಶಿವಾನುಗ್ರಹದಿಂದ ಬಾಳಿದೆವೆಂದು ಬಿನ್ನಿಸಿಕೊಂ ಡರು, ಸ್ವಾಮಿಯು ಕುಮಾರನನ್ನು ತೆಗೆದಾಲಿಂಗಿಸಿ, ತಲೆಸವರಿ ಮುದ್ದಾ ಡಿ, ದೇವತೆಗಳಿಗೆಲ್ಲ ಅವರವರ ಪಟ್ಟಣಕ್ಕೆ ಹೋಗುವಂತೆ ಅಪ್ಪಣೆಮಾಡಿ, ನಗಜಾತೆಯೊಡನೆ ನಂದನನ ಪರುಷವನ್ನು ಹೇಳಿಕೊಂಡು ಆನಂದಪಡು ತಿದ್ದನೆಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ಹದಿಮೂರನೆ ಅಧ್ಯಾ ಯದೊಡನೆ ಮೂರನೆ ಕಾಂಡವು ಮುಗಿದುದು. - **** - ೪ ನೆಯ ಕಾಂಡ. ೧ ನೆ ಅಧ್ಯಾಯವು. ಪ ಶು ಪ ತಿ ಪಟ್ಟ ವು - ಬಳಿಕ ಸಿದ್ದರಾಮೇಶನು ಚೆನ್ನಬಸವೇಶನನ್ನು ಕುರಿತು ಸ್ವಾಮಿ! ತಾರಕನ ಮಕ್ಕಳು ಮೊದಲಾದವರು ಗುಹಾಂತರಗಳನ್ನು ಸೇರಿದ ಬಳಿಕ ಕೊನೆಗೆ ಅವರವಸ್ಥೆಯೇನಾಯಿತು ? ಎಂದು ಬೆಸಗೊಳ್ಳಲು, ಚೆನ್ನಬಸ ವೇಶನು ಅಯ್ಯಾ, ತಾರಕನಾಶಾನಂತರ ಹರಿಬ್ರಹ್ಮಾದಿಗಳೆಲ್ಲರೂ ತಮ್ಮ ತಮ್ಮ ಪಟ್ಟಣಗಳನ್ನು ಗುಡಿತೋರಣಮೊದಲಾದುವುಗಳಿಂದಲಂಕರಿಸಿ ಪ್ರ ವೇಶಿಸಿ ಬಾಳಿಕೊಂಡಿರಲು, ಇತ್ತ ತಾರಕಾಕ್ಷ-ಕಮಲಾಕ್ಷ-ವಿದ್ಯುನ್ಮಾ ಲಿ-ಎಂಬ ತಾರಕನ ಮೂರು ಮಂದಿ ಮಕ್ಕಳೂ ಬೆಟ್ಟಗಳ ಗುಹೆಯಲ್ಲಿ ಇ ತರಗಕಸರೊಡನೆ ಗೂಢವಾಗಿ ವಾಸಮಾಡಿಕೊಂಡು ಹಲವುದಿಗಳ ನ್ನು ಕಳೆದರು. ಹೀಗಿರುತ್ತಿರಲು, ಶೂರರಾದ ಆ ರೈತರಿಗೆ ಹೇಡಿಗಳಂ. ತೆ ಅಜ್ಞಾತವಾಸದಿಂದ ಜೀವಿಸುವುದು ಸೊಗಸದೆ ಹೋಯಿತು, ಮೂವ ರೂ ಕೂಡಿ ಮುಂದೇನುಮಾಡಬೇಕೆಂದು ಆಲೋಚಿಸಿದರು ತಮ್ಮ ತಂ ದೆಯಂತೆಯೇ ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡಿ ಘನತರವಾದ ವರ ವನ್ನು ಪಡೆದು, ದೇವತೆಗಳನ್ನು ನಿರ್ನಾಮಗೊಳಿಸಬೇಕೆಂದು ನಿರ್ಧರಿಸಿ ದರು. ಮೂವರೂ ವನಾಂತರಕ್ಕೆ ಹೋಗಿ ತಪಸ್ಸಿಗೆ ಉಚಿತವಾದ ಸ್ಥಲವ
ಪುಟ:ಚೆನ್ನ ಬಸವೇಶವಿಜಯಂ.djvu/೨೪೨
ಗೋಚರ