ಪುಟ:ಚೆನ್ನ ಬಸವೇಶವಿಜಯಂ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܛܵܣ ಚನ್ನಬಸವೇಶವಿಜಯಂ (ಕಾಂಡ ೪) [ಅಧ್ಯಯ ನ್ನು ಗೊತ್ತು ಮಾಡಿ, ಸರೋವರದಲ್ಲಿ ಮುಳುಗಿ ನಾರುಡೆಯನ್ನುಟ್ಟು ಭಸಿ ತರುದ್ರಾಕ್ಷಗಳನ್ನು ಧರಿಸಿ, ಸೂರನಿಗಭಿವಂದಿಸಿ, ಕಾಲಿನ ಹೆಬ್ಬೆರಳನ್ನು ಮಾತ್ರ ಭೂಮಿಯಲ್ಲರಿ, ಮೂಗಿನ ತುದಿಯಮೇಲೆ ದೃಷ್ಟಿಯನ್ನಿಟ್ಟು, ಹೃದಯದಲ್ಲಿ ಬ್ರಹ್ಮನ ಮರಿಯನ್ನು ನೆಲೆಗೊಳಿಸಿ ಧ್ಯಾನಾರೂಢರಾದ ರು, ದೇಹಾಭಿಮಾನವು ಅಳಿದುಹೋಯಿತು. ಚಿತ್ರವು ಸ್ಥಿರತೆಯಿಂದ ಬಲಿದಿತು. ತಪಸ್ಸು ದಿನೇ ದಿನೆ ವೃದ್ಧಿಗೊಂಡಿತು. ಇವರ ಉಗ್ರ ತಪಸ್ಸಿನಿಂ ದ ಹೊರಟ ಜ್ವಾಲೆಯು ಭೂಮ್ಯಾಕಾಶಗಳಲ್ಲಿ ಹೊಗೆಯಡಿತು, ವನ ದ ಮೃಗ ಪಕ್ಷಿನಗಾದಿಗಳೆಲ್ಲ ಬೇಯಲಾರಂಭಿಸಿದುವು. ನದಿಗಳಲ್ಲಿ ನೀರು ಕಾದು ಕುತುಕುತನೆ ಕುದಿದಿತು. ಕೊನೆಕೊನೆಗೆ ಬ್ರಹ್ಮಾಂಡಕಟಾಹವನ್ನೆ ಲ್ಲ ವ್ಯಾಪಿಸಿತು. ಅಹ್ಮದಿಗ್ಗಜಗಳು ಪಾತಾಳದ ಸರ್ಪಗಳು ಆದಿಕೂರ ನುಸಹ ಈ ಬೇಗೆಯಿಂದ ಹೊರಳಾಡಿದುವು. ಭೂತಲವು ನಡುಗಿತು. ಈ ಅನಾಹುತಕ್ಕೆ ಕಾರಣವೇನೆಂಬುದನ್ನು ಬ್ರಹ್ಮನು ವಿಚಾರಮಾಡಿ, ಜ್ಞಾನದೃಷ್ಟಿಯಿಂದ ತಿಳಿದು, ಈ ಖಳದೈತ್ಯರಿಗೆ ನಾನು ಪ್ರಸನ್ನನಾ ದರೆ ಮುಂದೆ ಇವರಪ್ಪನಿಂದಾದ ಸ್ಥಿತಿಯೇ ಲೋಕಕ್ಕೆ ಉಂಟಾಗದೆ ತಪ್ಪು ವುದಿಲ್ಲ ; ಪ್ರತ್ಯಕ್ಷನಾಗದಿದ್ದರೆ ಇವರ ತಪೋಜ್ವಾಲೆಯ ಬೇಗೆಯು ಲೋ ಕವನ್ನು ಹಾಳ್ಳಾಡದೆ ಬಿಡುವುದಿಲ್ಲ ; ಇದಕ್ಕೇನುಮಾಡಬೇಕೆಂದು ಚಿಂ ತಾಕುಲನಾಗಿ, ಕಡೆಗೆ ಶಿವನ ಕರುಣವಿದ್ದಂತಾಗಲಿ ಯೆಂದು ನಿಶ್ಚಸಿ, ರಾ ಹೆಸರಿದ್ದ ಬಳಿಗೆ ಬಂದನು. ಎಲೆ ದೈತ್ಯರೆ, ನಿಮ್ಮ ತಪಸ್ಸಿಗೆ ಮೆಚ್ಚಿಗೆನು, ನಿಮ್ಮ ಇಷ್ಟಾರ್ಥವೇನು ? ಬೇಡಿರಿ, ಎಂದನು. ಅವರುಗಳು ಈ ಮಾತ ನ್ನು ಕೇಳಿ, ಕಣ್ಣನ್ನು ಬಿಟ್ಟು, ಬ್ರಹ್ಮನನ್ನು ಕಂಡು ನಮಸ್ಕರಿಸಿ, ನಾನಾ ವಿಧವಾಗಿ ಸ್ತುತಿಸಿ, ಎಲೆ ಸ್ವಾಮಿಯೆ, ನಮಗೆ ಯಾರಿಂದಲೂ ಮರಣವಾ ಗದಂತೆ ನಿತೃತ್ವವನ್ನು ಕೊಡಬೇಕೆಂದು ಬೇಡಿದರು. ಬ್ರಹ್ಮನಾದರೋನನಗೇ ನಿತ್ಯತೃವಿಲ್ಲ ; ನಿಮಗೆ ಆ ವರನ್ನು ಹೇಗೆ ಕೊಡಲಿ ? ಅದನ್ನು ಬಿಟ್ಟು ಬೇರೆ ವರವನ್ನು ಬೇಡಿರಿ; ಎನ್ನಲು, ದೈತ್ಯರು-ಹಾಗಾದರೆ ಸರ್ಗಮರ್ತ್ಯಪಾತಾಳದಲ್ಲಿರುವ ಯಾರಿಗೂ ಪ್ರವೇಶಿಸಲಶಕ್ಯವಾಗಿರು ವಂತೆ ಆಕಾಶದಲ್ಲಿ ಚಿನ್ನ ಬೆಳ್ಳಿ ಕಬ್ಬುನಗಳಿಂದ ಮೂರು ಪಟ್ಟಣಗಳನ್ನು ಕಟ್ಟಿಕೊಳ್ಳುವುದಕ್ಕೂ, ಇವು ಮೂರು ನಿಲ್ಲುವುದಕ್ಕೂ ಒಂದೇ ಕೀಲಿರು .