ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಶವಿಜಯಂ (Fಂಡ ೪) [ ಅಧ್ಯಾಯ ಡಿರುವ ಸವದ ಸಂಗತಿಯನ್ನೂ ಬಿತ್ಸೆಸಿದರು. “ ಆ ಸದ್ದ ಗಫಲ ಕಾಗಿ ಈತನನ್ನು ಒಂದು ರಾತ್ರಿಯ ವ .ಟ್ಟಿಗೆ ರಂಭೆಯೊಡನೆ ಸುಖಪಟ್ಟಿ ರುವುದಕ್ಕಾಗಿ ರ್ಗಲೋಕಕ್ಕೆ ಕಳುಹಿಕೊಟ್ಟು, ಮರುದಿನದಿಂದ ಇವ ನ ಪಾಪಗಳ ಫಲಾನುಭವಕ್ಕಾಗಿ ನರಕಗಳಲ್ಲಿ ಹಾಕಿರಿ ” ಎಂದು ತೀರಾ ನಿಸಿದನು. ದೂತರು ಶೈತನನ್ನು ರಂಭೆಯ ಬಳಿಗೆ ಕರೆದುಕೊಂಡು ಹೋ ಗಿ, ಆತನ ಚರಿತ್ರವನ್ನೂ ಯಮನಪ್ಪಣೆಯನ್ನೂ ತಿಳಿಸಿ, ಅವಳಲ್ಲಿ ಬಿಟ್ಟು, ಬೆಳಗ್ಗೆ ಇವನನ್ನು ನಮ್ಮ ವಶಕ್ಕೆ ಒಪ್ಪಿಸಬೇಕೆಂದು ಹೇಳಿಬಂದರು. ಅ ರಂಭೆಗೆ ಶೃತನನ್ನು ನೋಡಿ ಮನಸ್ಸಿನಲ್ಲಿ ವ್ಯಸನವು ತೋರಿತು. ತನ್ನಲ್ಲಿ ಸುಖಪಟ್ಟವನನ್ನು ಮರುದಿವಸ ನರಕಕ್ಕೆ ಕಳುಹಿ ಸಂಕಟಪಡಿಸುವುದು ಹೇಗೆಂದು ಪರಿತಪಿಸಿದಳು, ಅದಕ್ಕಾಗಿ ಆ ಹತಭಾಗ್ಯನನ್ನು ದುಃಖ ವಿಮುಕ್ತನನ್ನಾಗಿ ಮಾಡವುದಕ್ಕೆ ಬಂದ.ಪಾಯವನ್ನು ಯೋಚಿಸಿದ ಳು, ಶಿವ ಪೂಜೆಯಲ್ಲಿ ಅವನನ್ನು ತೊಡಗಿಸಿ ಯಮಬಾಧೆಗೆ ದೂರನನ್ನು ಮಾಡಬೇಕೆಂದು ನಿಶ್ಲೇನಿದಳು. ಬಳಿಕ ಶೈತನು ಕುಳಿತಿದ್ದ ಮಂಚದ ಬಳಿಗೆ ಹೋಗಿ ನಿಂತು, ಕರುಣಾದೃಷ್ಟಿಯಿಂದವನನ್ನು ನೋಡಿದಳು. ಅಗಲ್ಲಿ ಕಾಮಾಂಧನಾದ ರೈತನು ಆಕೆ ಯನ್ನು ಮೋಹಾತುರದಿಂದ ಆ ಲಿಂಗಿಸುವುದಕ್ಕೆ ಕೈನೀಡಿದನು. ಆಕೆಯು ಅವನ ಕಾಮಚೇಷ್ಮೆಯನ್ನು ನೋಡಿ ನಕ್ಕಳು. ದೊರೆಯಾದರೂ ರಂಭೆಯನ್ನು ಕುರಿತು ಎಲೆ ರಮಣಿ! ನನ್ನನ್ನು ನೋಡಿ ಅದೇಕೆ ನಗುವೆ ? ನನ್ನಲ್ಲಿ ತಕ್ಕ ರೂಪ ಲಾವಣ್ಯ ವಿ ಭವಾದಿಗಳಿಲ್ಲವೆಂದು ಯೋಚಿಸಿದೆಯೊ ? ಕಾಮಕಲಾಪ್ರೌಢಿಮೆಯಿಲ್ಲ ವೆಂದು ಬಗೆದೆಯೊ ? ನಿನ್ನ ಸಂಗಕ್ಕೆ ತಕ್ಕವನಲ್ಲವೆಂದು ತಿಳಿದೆಯೋ ? ಹೇ ಗೆ ? ನನ್ನೊಡನೆ ನೀನು ಕೂಡಿ ನೋಡಿದರೆ ನನ್ನ ಯೋಗ್ಯತೆಯು ಗೊತ್ತಾ ಗುವುದು” ಎಂದು ಹೇಳಲು, ರಂಭೆಯು ಕಳೆಗುಂದಿದ ಮುಖದಿಂದ ತೆ ತನನ್ನು ಕುರಿತು ದೊರೆಯೆ ! ಕಟುಗನ ಕೈಯಲ್ಲಿರುವ ಕುರಿಯು ಉತ್ತ ರಕ್ಷಣದ ತನ್ನ ವಿಪತ್ತನ್ನರಿಯದೆ ಮಾರ್ಗದಲ್ಲಿ ಬಿದ್ದಿರುವ ಹುಲ್ಲುಕಡ್ಡಿಯ ನ್ನು ಕಂಡು, ಕತ್ತನ್ನು ಚಾಚಿ ನಾಲಿಗೆಯನ್ನು ನೀಡುತ್ತಿರುವಂತೆ, ನಾಳೆ ಬೆಳಗಾದ ಕೂಡಲೇ ನಿನಗೆ ಪ್ರಾಪ್ತವಾಗುವುದಕ್ಕಿರುವ ನರಕದುಃಖವ ನ್ನು ಯೋಚಿಸಿಕೊಳ್ಳದೆ ಈ ಕಾಮಕ್ರೀಡೆಗೆ ಆತುರಪಡುತ್ತಿರುವ ನಿನ್ನ