ಪುಟ:ಚೆನ್ನ ಬಸವೇಶವಿಜಯಂ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(AX ೧೧] ೧೧] ಸುಖಾವಹವಲೀಲೆ ಲೋಕವನ್ನು ಹೊಂದುತ್ತಾರೆಯೇ ಹೊರತು ವೈಕುಂಠವನ್ನು ಹೊಂದು ವುದಿಲ್ಲ. ಇದರಿಂದಲೇ ರಾಮಮಂತ್ರವು ತಾರಕಬ್ರಹ್ಮ ವಾಚಕವೆಂದು ಗೊತ್ತಾಗುತ್ತದೆ. ಕಾಶಿಯಲ್ಲಿ ವೇದವ್ಯಾಸನು ಕೈಯೆತ್ತಿ ಕೇಶವನೇ ದೊ ಡ್ಡವನೆಂದು ಸಾರಿದನೆಂಬದಾಗಿ ನೀನು ಹೇಳುತ್ತಿದೆ, ಅದರಿಂದ ಆ ವ್ಯಾ ಸನ ಅವಸ್ಥೆ ಯೇನಾಯ್ದೆಂಬುದನ್ನು ಮಾತ್ರ ಹೇಳದೆ ನೀನು ಮುಚ್ಚು ಯೆ, ನುಡಿಯಬಾರದ ಮಾತನ್ನು ಆತನು ನುಡಿದುದರಿಂದಲೇ ನಂದೀಶನಿಂ ದ ಆತನ ಭುಜಸ್ತಂಭನವಾಯಿತು. ಹರಿಯು ರಾವಣ ಭಸ್ಮಾಸುರ ಮೊದ ಲಾದ ರಾಕ್ಷಸರನ್ನು ಕೊಲ್ಲುವುದಕ್ಕೆ ಪರಶಿವನು ಅವನಿಗೆ ಕೊಟ್ಟಿದ್ದ ವರದ ಪ್ರಭಾವವೇ ಕಾರಣವಲ್ಲದೆ, ಅಂಥ ಮಹಾದನುಜರನ್ನು ಕೊಲ್ಲುವ ಶಕ್ತಿ ಯು ಹರಿಬ್ರಹ್ಮರಿಗೆಲ್ಲಿ ಬಂದಿತು ? ಇದಕ್ಕೆ ಹರಿಯ ಮಗ ಮನ್ಮಥನೂ, ಬ್ರಹ್ಮನ ತಲೆಯ, ಸಾಕ್ಷಿಗಳು, ಉಪಮನ್ನುವು ಶಿವಾನುಗ್ರಹದಿಂದ ಕ್ಷೀರಸಾಗರವನ್ನು ಪಾನಮಾಡುತ್ತಿರುವಾಗ, ಅದರೊಳಗಿದ್ದ ನಾರಾಯಣ ನು ಗಂಟಲಲ್ಲಿ ಸಿಕ್ಕಿಕೊಳ್ಳಲಾಗಿ, ಗವಿಕುಮಾರನು ಉಗುಳಲು, ಕೆ ಳಗೆ ಬಿದ್ದ ಹರಿಯು ಮತ್ತೆ ಎದ್ದು ಬಂದು, ಮಸಿಯನ್ನು ಸ್ತೋತ್ರಮಾ ಡಿ, ಬೇಡಿ, ಆತನಿಂದ ಶಿವದೀಕ್ಷೆಯನ್ನು ಪಡೆದುಕೊಂಡನು. ದಧೀಚಿಗೂ ಕುಪನಿಗೂ ಯುದ್ಧ ಸಂಭವಿಸಿದಾಗ, ತನ್ನ ಭಕ್ತನಾದ ಕುಪನಿಗೆ ಬೆಂಬ ಲನಾಗಿ ಹೋದ ಗೋವಿಂದನು ನಮ್ಮಿಯಮೇಲೆ ಚಕ್ರವನ್ನು ಬಿಟ್ಟು ಹಾ ೪ಾಡಿಕೊಂಡು ತಲೆಯನ್ನು ಕೆದರಿ ಓಡಿದನು. ಮತ್ತೂ “ಗಮನಿಯು ತನ್ನ ಪತ್ನಿಯನ್ನು ಕೊಂದ ಹರಿಯ ಎದೆಯಮೇಲೆ ರುಾಡಿಸಿ ಒದೆದುದ ರಿಂದ ಆ ಸ್ಥಲವು ಕಂದಿ ಕಲೆಯಾಗಲು, ಅದರಿಂದ ಅವನು ಶ್ರೀವತ್ಸಲಾಂ ಛನನೆನಿಸಿಕೊಳ್ಳುತ್ತಿರುವನು, ನಿನ್ನ ಮಾಧವನು ತಾರಕನೊಡನೆ ಕಾದು ಓಡಿ ಸಮುದ್ರವನ್ನು ಹೊಕ್ಕಿಕೊಂಡನು. ಜಲಂಧರನೊಡನೆ ಕಾದಲು, ಅವನು ಇವನನ್ನು ರಥಸಮೇತವಾಗಿ ತೆಗೆದು ಬುಗುರಿಯಂತೆ ಆಕಾಶಕ್ಕೆ ಟ್ಟನು, ಒ೪ಕ ಸೆರೆಯಲ್ಲಿಯೂ ಹಾಕಿಕೊಂಡನು. ಗಣಪತಿಯು ಹರಿಜ್ಯ ಸ್ಮರಿಗೆ ಕೊಟ್ಟ ಶಾಪದಿಂದ ಒಬ್ಬರಹೊಟ್ಟೆಯನ್ನೊಬ್ಬರು ಹೊಕ್ಕು, ಬ್ರಹ್ಮ ನುಹರಿಯ ನಾಭಿಕಮಲದಿಂದೀಚೆಗೆ ಬಂದುದರಿಂದ ಅವನಿಗೆ ಸರಸಿಜೋದ್ಧ ವನೆಂತಲೂ, ಬ್ರಹ್ಮನ ಗುದಸ್ಥಾನದಿಂದ ವಿಷ್ಣುವು ಜನಿಸಿದ ಕಾರಣ, ಅವ