ಪುಟ:ಚೆನ್ನ ಬಸವೇಶವಿಜಯಂ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳ ಚೆನ್ನಬಸವೇಕವಿಜಯಂ (ಕ॰ಶ ೪) ಅಭಿಯ ನು; ಅವನ ಹೆಣವನ್ನು ಸುಡಲಾಗಿ, ಅರೆಬೆಂದುಳಿದ ಮೋಟುಗಳನ್ನು ಜಗನ್ನಾಥದಲ್ಲಿಟ್ಟು ಈಗಳೂ ಪೂಜಿಸುತ್ತಿರುವರು. ೯-೧೦ನೆ ಅವತಾರ ಗಳಲ್ಲಿ ಬುದ್ಧ ಕಲ್ಕಿ ಯೆಂಬ ಹೆಸರನ್ನು ತಾಳಿ ಮೋಹಶಾಸ್ತ್ರವನ್ನು ಜಗ ತಿನಲ್ಲಿ ಹರಡುತ್ತಿರುವನು. ಇನ್ನು ಕೆಲಕಾಲದಮೇಲೆ ಸಾಯುವನು. ಹೀಗೆ ಎಷ್ಟೋ ಜನ್ಮಾಂತರಗಳನ್ನೆತ್ತಿ ಅಳಿದ ನಿಮ್ಮ ಹರಿಯನ್ನು ಪರಾತ್ಪ ರನೂ ನಿತ್ಯನೂ ಸರಜ ನ ಸರಮಯನೂ ಆದ ಮಹಾದೇವನೊಡನೆ ಸರಿಯೆಂದಾದರೂ ಹೇಳುವುದಕ್ಕೆ ನಿನ್ನ ಬಾಯಿ ಹೇಗೆ ಬರುವುದು ? ಹರಿ ಬ್ರಹೇಂದ್ರಾದಿಗಳೂ ಸಿದ್ದ ವಿದ್ಯಾಧರ ಕಿನ್ನರ ಕಿಂಪುರುಷಾದಿಗಳೂ ಇ ತರ ಮನುಮುನಿಗಳು ಸಹ 'ಶಿವನಿಂದಲೇ ಮುಕ್ತರಾಗುವುದಕ್ಕಾಗಿ ಅವರ ವರ ಹೆಸರಿನಮೇಲೆ ಲಿಂಗಪ್ರತಿಷ್ಟೆಗಳನ್ನು ಮಾಡಿ ಆರಾಧಿಸಿರುವುದು, ಕಾ ಶಿ ಮೊದಲಾದ ದಿವ್ಯಕ್ಷೇತ್ರಗಳಲ್ಲೆಲ್ಲ ಈಗಳೂ ಪ್ರತ್ಯಕ್ಷಪ್ರಮಾಣವಾಗಿರು ವುದು?” ಎಂದು ಮೊದಲಾಗಿ ಗೌತಮನು ನುಡಿದನು, ಆಗ ವೈಷ್ಟವನುಈ ಪುರಾಣದ ಕಥೆಗಳೆಲ್ಲ ಬೇಕಿಲ್ಲ; ಹರಿಯೇ ದೊಡ್ಡವನೆಂಬ ವಿಷಯವ ನ್ನು ಸಾಧಿಸುವುದಕ್ಕೆ ಪ್ರತ್ಯಕ್ಷಪ್ರಮಾಣವಾಗಿ ನಾನು ಹಣೆಯಲ್ಲಿ ಕಣ್ಣನ್ನು ತೋರಿಸುತ್ತೇನೆ ನೋಡು, ಎಂದು ತೋರಿಸಲು, ವಿಮಷ್ಟಿಯುಇದಾವ ಮಹಾಘನತೆಯು ? ಶಿವನೇ ಸರೋತ್ತಮನೆಂಬುದಕ್ಕೆ ಪ್ರತ್ಯಕ್ಷಪ್ರಮಾ ಣವಾಗಿ ಅಂಥ ಮೂರನೆ ಕಣ್ಣನ್ನು ನನ್ನ ಪಾದದಲ್ಲಿ ತೋರಿಸುತ್ತೇನೆ ನೋಡು, ಎಂದು ಕಾಲಿನಲ್ಲಿ ಕಣ್ಣನ್ನು ತೋರಿಸಲು, ಶಿವನು ಅವನ ದೃಢ ಭಕ್ತಿಯನ್ನು ಹರಿಬ್ರಹ್ಮರಿಗೆ ತೋರಿಸಿ, ತಾನು ಮೆಚ್ಚಿ, ತನ್ನ ಕಪಟವೇ ಪನನ್ನುಳಿದು, ನಿಜರೂಪನ್ನು ಧರಿಸಿದನು. ಆಗ ಋಷಿಯು ತನ್ನ ಉಮಾ ಸೃದೇವತೆಯನ್ನು ಕಂಡು, ಆನಂದಗೊಂಡು, ದೀರ್ಘದಂಡವಾಗಿ ಭಕ್ತಿ ಯಿಂದ ನಮಸ್ಕರಿಸಿ, ತಾನು ತಿಳಿಯದೆ ವಾಗ್ವಾದವಾಡಿದ ಅಪರಾಧವನ್ನು ಕ್ಷಮಿಸಂದು ಬೇಡಿದನು, ನಿನ್ನ ನಿಜಭಕ್ತಿಯ ಪರೀಕ್ಷಾರ್ಥವಾಗಿ ಇದು ನಾನು ಮಾಡಿದ ವಿನೋದವಾದುದರಿಂದ, ನಿನ್ನ ಮಾತು ನನಗೆ ಎಷ್ಟೋ ಮೆಚ್ಚಿಗೆಯನ್ನುಂಟುಮಾಡಿತೆಂದು ಶಿವನು ಹೇಳಿ, ತಲೆದಡವಿ, ಎತ್ತಿ, ನಿನ್ನಿ ಏಾರ್ಥವೇನೆಂದು ಕೇಳಲು, ( ಶಿವನೇ ! ಮಳೆಯಾಗದಿದ್ದರೂ ಬಿತ್ತಿದ ಭೂಮಿಯಲ್ಲಿ ಬೆಳಸು ಚೆನ್ನಾಗಿ ಆಗುವಂತೆ ವರವನ್ನು ಕೊಡಬೇಕು ?