ಪುಟ:ಚೆನ್ನ ಬಸವೇಶವಿಜಯಂ.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರರ ಕಭಗಳು '{{d ಲ್ಲಿ, ರಕ್ತದಿಂದ ಜಡೆಕಟ್ಟಿದ್ದ ಮುಡಿಯ ತಲೆಯೊಂದನ್ನು ಕಂಡು, ಅದು ಜಂಗಮನ ಶಿರಸ್ಸೆಂದು ತಿಳಿದು, ಅದನ್ನು ಕತ್ತರಿಸಿದ ಅಪರಾಧಕ್ಕಾಗಿ ತನ್ನ ತಲೆಯನ್ನೇ ಕಡಿದು ಶಿವನ ಮೆಚ್ಚಿಗೆಯಿಂದ ಕೈಲಾಸವನ್ನು ಪಡೆದನು. ವೀರಪಾಂಡ್ಯನು, ಶಿವನಿಗೆ ಪರತರಾಜನು ತನ್ನ ಮಗಳನ್ನು ಕೋ ಟ್ಟನೆಂಬ ಸುದ್ದಿಯನ್ನು ಕೇಳಿ, ತಪಸ್ಸಿನಿಂದ ತನ್ನ ಹೆಂಡತಿಯ ಗರ್ಭದಲ್ಲಿ ಪಾರತಿಯನ್ನು ಮಗಳಾಗಿ ಪಡೆದು, ಈಶ್ವರನಿಗೆ ಮದುವೆಮಾಡಿಕೊಟ್ಟು, ತನ್ನ ರಾಜ್ಯಕೋಶವನ್ನೆಲ್ಲ ಶಿವಶರಣರಿಗೆ ದಾನ ಮಾಡಿ, ಕೈಲಾಸವನ್ನು ಸೇರಿದನು. ನೃಪಕುಲೋತ್ತುಂಗಚೋಳನು ತನ್ನ ಪಟ್ಟಣದಲ್ಲಿ ಒಬ್ಬ ರೋಗಿ ಯ ಇರದಂತೆ ಮಾಡಿರಬೇಕೆಂಬ ನಿಯಮದಿಂದಿರಲು, ಒಂದುದಿನ ಕು ಏರೋಗದ ಜಂಗಮನೊಬ್ಬನು ಬಂದುದನ್ನು ಕಂಡು, ತನ್ನ ವಶಕ್ಕೆ ಭಂಗವಾಯ್ದೆಂದು ಚಿಂತಿಸಿ, ತನ್ನ ತಲೆಯನ್ನೇ ಕತ್ತರಿಸಿಕೊಂಡು ಶಿವಾ ನುಗ್ರಹದಿಂದ ಶಿವಲೋಕವನ್ನು ಪಡೆದನು. ಕಾಳಿಯೆಂಬ ಪಟ್ಟಣದಲ್ಲಿ ಜನಿಸಿದ್ದ ತಿರುಜ್ಞಾನಸಂಬಂಧಿಗಳು ಉತ್ತುಂಗಕೋಳರಾಜನಿಗೆ ಗುರುವಾಗಿದ್ದರು. ಈ ಚೋಳನ ಮಗಳಾದ ಮಂಗಾಯಕರನಿಯು ಜೈನಮತದವನಾದ ಮಧುರೆಯ ಕೋನಸಾಂದ್ಬನಿಗೆ ಹೆಂಡತಿಯಾಗಿರಲು, ಒಂದಾನೊಂದುವೇಳೆ ಆಕೆಯು ತನ್ನ ತವರುಮನೆಯ ಗುರುವಾದ ತಿರುಜ್ಞಾನಸಂಬಂಧಿಗಳನ್ನು ತನ್ನ ಗಂಡನ ಪಟ್ಟಣಕ್ಕೆ ಬರ ಮಾಡಲು, ಈ ಗುರುವು ಅಲ್ಲಿನ ಜೈನರನ್ನೆಲ್ಲ ಸಭೆಯಲ್ಲಿ ವಾದದಿಂದ ಜೈಸಿ ದನು. ವಿಧೇಯರಾದವರಿಗೆಲ್ಲ ಶಿವದೀಕ್ಷೆಯನ್ನು ಮಾಡಿದನು, ಪ್ರತಿಭಟನೆ ದವರನ್ನೆಲ್ಲ ದೊರೆಯ ಮಂತ್ರಿಯಾದ ಕುಲಚ್ಚರಿಯರು ಶೂಲಕ್ಕೆತ್ತಿಸಿದನು. ರಾಜನೂ ತಿವದೀಕ್ಷೆಗೊಂಡನು. ದೊರೆಯ ಕನಾಗಿದ್ದ ಬೆನ್ನು ಗುರುವಿನ ಅನುಗ್ರಹದಿಂದ ನೆಟ್ಟಗಾಯಿತು. ಬಳಿಕ ಪಾಂಡ್ಯನು ತನ್ನ ಹೆಂಡತಿಯ ಹೊಟ್ಟೆಯಲ್ಲಿ ಮಗಳನ್ನು ಪಡೆದು ಅವಳನ್ನು ಶಿವನಿಗೆ ಸಮರ್ಪಿಸಿ, ತಿರು ಜ್ಞಾನಸಂಬಂಧಿಗಳೂ ತಾನೂ ತನ್ನ ಹೆಂಡತಿಯು ಸಹ ಕೈಲಾಸವನ್ನು ಹೊಂದಿದರು. ತಿರುವಾವಲೂರಿನಲ್ಲಿದ್ದ ತಿರುವಲಿನಾಚಿಯೆಂಬ ಧಕ್ಕೆಯು, ತನ್ನ ತ