4) ಸುನಂದಗರತನ ಚರಿತವು ೩೬೫ ನಿಂತಲ್ಲಿಯೇ ನಿಂತು, ಹಲ್ಲನ್ನು ಕಡಿದುಕೊಳ್ಳುತ್ತಿದ್ದರು. ನಾರಕಿಗಳೆಲ್ಲರೂ ಚಿತ್ರಗುಪ್ತರನ್ನು ಪರಿಪರಿಯಾಗಿ ಹಂಗಿಸಿ ಬೈದುತ್ತ, ಸಾನಂದಗಣೇ ಶನನ್ನು ಸ್ತುತಿಸುತ್ತಲೂ ಇದ್ದ ರು. ಯಮರಾಜ ನು ಬೆರಗಾಗಿ ನಿಂತನು. ಸಾನಂದಗಣೇಶನು ಸರರನೂ ವಿಮಾನದಲ್ಲಿ ಕುಳ್ಳಿರಿಸಿ, ಕೈಲಾಸ ಕೈ ಸಾಗಿಸಿದನು. ಇತ್ತ ಯಮಧರನು ನರಕಗಳೆಲ್ಲ ಬರಿದಾದುದನ್ನು ಕಂ ಡು, ಖಿನ್ನನಾಗಿ ಮಲಗಿರಲು, ಚಿತ್ರಗುಪ್ತರು ತಮ್ಮ ಸ್ವಾಮಿಯಬಳಿಗೆ ಹೋಗಿ, “ ಜೀಯಾ ! ಇದಕ್ಕಾಗಿ ತಾವು ವ್ಯಸನಪಡುವುದೇಕೆ ? ತನು ಗೆ ಅಧಿಕಾರವನ್ನು ಕೊಟ್ಟಿದ್ದ ಪರಶಿವನ ಬಳಿಗೆ ಹೋಗಿ ಈ ಸಂಗತಿಯ ನೆಲ್ಲ ಬಿಸಿ, ಆ ಸಾನಂದನಿಗೆ ತಕ್ಕ ಪ್ರತಿಕ್ರಿಯೆಯನ್ನು ಮಾಡಿಸಿದರಾ ಯಿತು ” ಎಂದು ಹೇಳಿ, ಸಮಾಧಾನಪಡಿಸಿದರು. ಯಮನು ಅದೇ ಸರಿ ಯೆಂದು ಯೋಚಿಸಿ, ಆಪ್ತ ಜನರನ್ನು ಕೂಡಿಕೊಂಡು ಕೈಲಾಸಕ್ಕೆ ಬಂದ ನು, ಯಮನು ರೋದಿಸುತ್ತ ಶಿವನ ಮುಂಗಡೆಗೆ ಹೋಗಿ, ನರಕಲೋಕದ ಬೀಗದಕೈಗಳ ಜೊಂಪೆಯನ್ನೆಲ್ಲ ಮುಂದಿಟ್ಟು, ನಮಸ್ಕರಿಸಿ, ಪ್ರಭು ವೇ ! ಸಾನಂದಮುನಿಯು ನಮ್ಮ ಪುರಕ್ಕೆ ಬಂದು, ನಾರಕಿಗಳನ್ನೆಲ್ಲ ಕರೆ ದುಕೊಂಡು ಹೋಗಿ, ನನ್ನ ಪುರವನ್ನು ಹಾಳೆಡಹಿದನು; ಇನ್ನು ನನಗೆ ನ ರಕಲೋಕಾಧಿಕಾರವೇತಕ್ಕೆ ? ಎಂದು ದುಗುಡದಿಂದ ಬಿನ್ನೆನಿದನು. ಅದ ನ್ನು ಕೇಳಿ ಮಹಾದೇವನು ನಸುನಕ್ಕು- “ ಸಾನಂದನು ಮುಂದಾಲೋ। ಚನೆಯನ್ನು ಮಾಡದೆ ಅಚಾತುರದಿಂದ ಮಾಡಿರಬಹುದು; ಮುಂದೆ ಹಾಗೆ ಮಾಡದಂತೆ ನಾನು ಆತನಿಗೆ ಬೆಸಸುತ್ತೇನೆ; ಇದಕ್ಕಾಗಿ ನೀನು ಮನಸ್ಸಿ ನಲ್ಲಿ ಚಿಂತೆಪಡಬೇಡ; ಎಂದಿನಂತೆ ಸಾವಿಗಳನ್ನು ಶಿಕ್ಷಿಸುವ ಕೆಲಸವನ್ನು ಮಾಡಿಕೊಂಡಿರು, ಹೋಗು ” ಎಂದು ಹೇಳಿ, ಸಮಾಧಾನಪಡಿಸಿ, ಬೀಗ ದಕೆಗಳನ್ನೆಲ್ಲ ಅವನೊಡನೆಯೆ ಹೊರಿಸಿ ಕಳುಹಿಕೊಟ್ಟನು. ಇತ್ತ ಸಾನಂ ದನನ್ನು ತೆಗೆದಪ್ಪಿ ಸಂತೈಸಿ, ಗಣಪದವಿಯಿತ್ತು, ನರಕವನ್ನು ಬಿಟ್ಟು ಅವ ನೊಡನೆ ಬಂದಿದ್ದವರಿಗೆಲ್ಲ ಸಾಲೋಕ್ಯವನ್ನು ಅನುಗ್ರಹಿಸಿದನು; ಎಂದು ಚೆನ್ನಬಸವೇಶನು ನಿರೂಪಿಸಿದನೆಂಬಿಲ್ಲಿಗೆ ಮೂರನೆ ಅಧ್ಯಾಯವು ಸಂಪೂರ್ಣ೦.
ಪುಟ:ಚೆನ್ನ ಬಸವೇಶವಿಜಯಂ.djvu/೩೭೪
ಗೋಚರ