{4} ಚನ್ನಬಸವೇಕವಿಜಯಂ (ಕಾಂಡ ೫) [ಅಧ್ಯಾಯ ಡಿ ಜನರೊಡನೆ ವಾದಮಾಡಿಸುವಲ್ಲಿ, ಘಟದಲ್ಲಿ ಮುಜ್ಞೆ ತಂದಿದ್ದ ಸರ್ಪವನ್ನು ಚಂದ್ರಕಾಂತದ ಲಿಂಗವನ್ನಾಗಿ ಗುರುವು ಮಾಡಲು, ಜಿನರಾಜನು ಬೆರ ಗಾಗಿ ಶಿವದೀಕ್ಷೆಯನ್ನು ಪಡೆದುಕೊಂಡನು, ಮಶಾಪದಿಂದ ಕರಡಿಯಾ ಗಿದ್ದ ಗಂಧರನನ್ನು ತೆಲುಂಗುಜೂಮ್ಮ ಯನು ಕೊಂದು ಮುಕ್ತನನ್ನು ಮಾಡಿದನು, ಮತ್ತೂ ಪುರಾಣಿಕ ಬ್ರಾಹ್ಮಣನೊಬ್ಬನು ಶಿವನಿಂದೆಯನ್ನು ಮಾಡುತ್ತಿರಲು, ಅವನ ಎದೆಗೆ ಶೂಲವನ್ನು ನಟ್ಟು ಕೊಂದನು. ಅದೇತ ಕೈ ಕೊಂದೆಯೆಂದು ರಾಜನು ವಿಚಾರಿಸಲು, ಅವನು ಪಾಪಿಯೆಂದು ನುಡಿ ದು, ಅವನ ದೇಹವನ್ನೆಲ್ಲ ಹಳುಗಳ ರಾಶಿಯನ್ನು ಮಾಡಿ ತೋರಿಸಿದನು, ಹೆಂಡದ ಮಾರಯ್ಯನು ತನ್ನ ಕೈಯನ್ನೇ ಕಡಿದುಕೊಂಡೂ, ಕೋಲಶಾಂ ತಯ್ಯನು ಜಂಗಮ ಘಾತಕನನ್ನು ಕೊಂದೂ, ಕಕ್ಕಯ್ಯನು ವಿಷ್ಣುಭಕ್ತ ಪುರಾಣಿಕನನ್ನು ಇರಿದೂ, ಸುಭಾತಯ್ಯನು ತನ್ನ ಮಗನ ಅಳವನ್ನು ನೋ ಡಿ ಸತ್ಯ ಕನೈಗೆ ಪ್ರಾಣವನ್ನು ಕೊಟ್ಟೂ, ತಮ್ಮ ವೀರವ್ರತವನ್ನು ಮೆರೆ ದರು, ಒಬ್ಬ ಸೂಳೆಯ ಮನೆಯು ಬೆಂಕಿಯಿಂದ ಬೇಯುತ್ತಿರುವಾಗ, ಅ ವಳ ವಿಟನಾದ ಜಂಗಮನು ತನ್ನ ಕಾಲತೆಯು ಬೆಂಕಿಯಲ್ಲಿ ಸುಟ್ಟು ಹೋ ಗುವಳೆಂದು ವ್ಯಥೆಪಡುತ್ತಿರಲು, ಉಾಗರಾಯಣ್ಣನೆಂಬುವನು ಕಂಡು, ಅ ಗ್ರಿಯ ಬಾಯಿಂದ ಆ ಸೂಳೆಯನ್ನು ಈಚೆಗೆ ಉಗುಳಸಿ ಬದುಕಿಸಿದನು. ಜೋದಮಾಯಣ್ಣನು ಬೇಡಿದ ಜಂಗಮನಿಗೆ ಗಜದಾನವನ್ನು ಮಾಡಿದನು. ರಕ್ಕಸಬ್ರಹ್ಮನು ತನ್ನ ಸಮಯಾಚಾರದ ಜಂಗಮರಿಯು ಅಳಿದುದ ರಿಂದ ತನ್ನ ತಲೆಯನ್ನು ಕತ್ತರಿಸಿ ಪ್ರಾಣಬಿಟ್ಟನು. ಕಣ್ಣಪ್ಪನೆಂಬ ಶರಣ ನು ಲಕ್ಷದತೊಂಭತ್ತಾರುಸಾವಿರ ಜಂಗಮರಿಗೆ ಸಲಿಸುವುದಕ್ಕಾಗಿ ಬಿನ್ನಹ ಮಾಡಿ, ಅವರು ಬರದಿರಲು, ಅವರ ಲಿಂಗಗಳನ್ನೆಲ್ಲ ಆಕರ್ಷಿಸಿಕೊಂಡನು. ರಕ್ಕಸಮಾರಣ್ಣನು ತನ್ನೆಡೆಯನ್ನು ಜಂಗಮನು ಉಣ್ಣಲಾಗಿ ಕತ್ತಿಯಿಂದ ಕತ್ತರಿಸಿ, ತನ್ನ ಪಾಲನ್ನು ತೆಗೆದುಕೊಂಡು, ಮರಳಿ ಜಂಗಮನಿಗೆ ಪ್ರಾಣ ವನ್ನು ಕೊಟ್ಟನು. ಮುಚೌಡಯ್ಯನು ಇಟ್ಟಯಹಣ್ಣನ್ನು ಇನಿವಣ್ಣ ಸ್ನಾಗಿ ಮಾಡಿ ಜಂಗಮನಿಗೆ ತಿನ್ನಿಸಿದನು. ಹೂಳಿದ್ದ ಬಸವನನ್ನು ಏಳಿಸಿ ದನು, ಸತ್ತಿದ್ದವಳಿಗೆ ಪ್ರಾಣವನ್ನು ಬರಮಾಡಿದನು, ಕೋಡೂರ ಬೊ ಮೈಯ್ಯನು ಜೈನರೊಡನೆ ವಾದಮಾಡುವಾಗ ಅವರು ಸುಟ್ಟ ಆಲದ ಮರ
ಪುಟ:ಚೆನ್ನ ಬಸವೇಶವಿಜಯಂ.djvu/೩೭೭
ಗೋಚರ