* ಚೆನ್ನ ಬಸವೇಕವಿಜಯಂ (ಕಾಂಡ ೫) (ಅಧ್ಯಾಯ ೬ನೆ ಅಧ್ಯಾಯವು. ಲಿ೦ ಗ ದೀ ಕಾ ಗು ರು ಲಿ೦ ಗ ಜ ೧ ಗ ಮ ಮಾ ಹಾ ತ್ಮ ವು ಬಳಿಕ ಸಿದ್ದರಾಮೇಶನು ಚೆನ್ನ ಬಸವೆಶನನ್ನು ಕುರಿತು.ಗುರುವ ರೇಣ್ಣನೆ ! ನನಗೆ ಮುಂದೇನುಗತಿ ? ಎಂದು ಕೇಳಿಕೊಳ್ಳಲು, ಶಿವಾಗ ಮಾರ್ಥವಿಜ್ಞಾನಿಗಳಾದವರ ಕರುಣದಿಂದ ಅಷ್ಟಾವರಣಲಕ್ಷಣವನ್ನು ತಿಳಿ ದು, ವೀರಶೈವತತೋಪದೇಶವನ್ನು ಪಡೆದು, ಜನ್ನಬಂಧವನ್ನು ಕಳೆದು ಕೊಳ್ಳೆಂದು ಚೆನ್ನಬಸವೇಶನ ನುಡಿಯಲು, ನೀನು ಹೊರತು ನನಗೆ ಬೇ ರೆ ಗುರುವಿಲ್ಲವಾದಕಾರಣ, ಅದನ್ನೆಲ್ಲ ನೀನೇ ಉಪದೇಶಿಸಬೇಕೆಂದು ಸಿದ್ದ ರಾಮನು ಬೇಡಿ, ಮತ್ತೆ ನಮಸ್ಕರಿಸಿದನು. ಆಗ ಚೆನ್ನಬಸವೇಶನುಗು ರುವಾದವನು ವೇದಾಗಮಪುರಾಣಾದಿಗಳ ಅರ್ಥವನ್ನು ತಿಳಿದು, ಪರ ಮತಾಂತನೂ, ಪರಿಶುದ್ಧನೂ, ಶಿವಾಚಾರಸಂಪನ್ನನೂ, ಅಂಗವೈಕಲ್ಯರಹಿ ತನೂ, ಜಿತೇಂದ್ರಿಯನೂ, ದುರ್ಗುಣರಹಿತನೂ, ಗುರುಸಂಪ್ರದಾಯಾಗತ ನೂ, ಸವಂಶ ಜಾತನೂ, ಶಿವಧ್ಯಾನಯುಕ್ನ ಆಗಿರಬೇಕು ಅಂಥನ ರಲ್ಲಿ ಹೋಗಿ ನಿನು ದಿಕೆಯನ್ನು ಪಡೆದು ಬಾರೆಂದು ಹೇಳಲು; 'ಗುರು ವೆ! ತಾವು ಅಪ್ಪಣೆ ಕೊಡಿಸಿದ ಗುಣಗಳೆಲ್ಲ ತಮ್ಮಲ್ಲಿ ಇರುವುವು ತಾವೇ ಶಿವನ ಚಿಳಾಸಸರ, ನಿನ್ನ ಈ ಬಸವೇಶರಾದಿ ಪ್ರಮಥಗಣರಿ ಗೆಲ್ಲ ಪ್ರಾಣಲಿಂಗೋಸ.ಶವನ್ನು ಮಾಡಿರುವಿರಿ. ಅದಕಾರಣ, ತಾನೇ? ನನ ಗೂ ಕರುಣದಿಂದ ಶಿರದಿ ಕೈಯನ್ನು ಮಾಡಿ ಭವಸಾಶದಿಂದ ಬಿಡಿಸಿ ಉದ್ಧರಿಸಬೇಕು?” ಎಂದು ಸಿದ್ಧರಾಮೇಶನ ಬೇಡಿದನು. ಅದಕ್ಯಾ ಚೆನ್ನ ಬಸವೇಶನು-ಎಲೆ ಸಿದ್ದರಾಮೇಶರೆ, ವೀರಶೈವಾಚರಣೆ ಯೆಂಬುದು ನಿ ನಗೆ ಸುಲಭವಲ್ಲ, ಅದು ಕತ್ತಿಯ ಬಾಯಲ್ಲಿರುವ ಜೇನುತುಪ್ಪದಂತೆಯೂ. ಸನ್ನರ ತಲೆಯಲ್ಲಿರುವ ರತ್ನ ದಂತೆ ಸಾಮಾನ್ಯರಿಗೆ ದುರ್ಲಭವಾಗಿರು ವುದು, ಮಲತ್ರಯಗಳನ್ನೂ ಪಂಚಸೂತಕಗಳನ್ನೂ ಕಳೆದು, ಅನ್ಯ ದೈವ ಭದ ಕಿಯನ್ನೂ ಭವಿಸಂಗವನ ಬಿಟ್ಟು, ರ್ಪಕಾಚಾರತತ್ಪರನಾಗಿದ್ದವ ನೇ ವೀರಶೈವನೆನಿಸಿಕೊಳ್ಳುವನು ಎನ್ನಲು, ಆ ಮಲತ್ರಯಾದಿಗಳ ವಿವರ ವನ್ನು ತಿಳಿಸಬೇಕೆಂದು ಸಿದ್ದರಾಮೇಶನು ಕೇಳಲಾಗಿ, ಹೇಳಿದನೆಂತೆಂ ದರೆ ನನ್ನ ತಾಯಿ ತಂದೆ ಮಕ್ಕಳು ಎಂಬ ಅಭಿಮಾನವು ಆಣವಮಲವು.
ಪುಟ:ಚೆನ್ನ ಬಸವೇಶವಿಜಯಂ.djvu/೪೦೧
ಗೋಚರ