ಪುಟ:ಚೆನ್ನ ಬಸವೇಶವಿಜಯಂ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'&# ಲಿಂಗದೀಕ್ಷಾ ಗುರು ಅಂಗ ಜಂಗಮಮಾಹಾತ್ಮ ವು ಕುಲಗೋತಾದಿಗಳ ಅಭಿಮಾನವು ಮಾಯಾವುವು, ಧನಾಭಿಮಾನ ವು ಕಾಗ್ನಿ ಕಮಲವು. ಇವನ್ನೆಲ್ಲ ಬಿಟ್ಟು, ಭಾರತೀಪರಮೇಶ್ವರರೇ ನನ್ನ ತಾಯ್ತಂದೆಗಳು, ಈಶ್ವರನ ಕುಲವೇ ನನ್ನ ಕುಲ, ಸಕಲ ಸಂಪತ್ತೂ ಶಿವನದೇ ಹೊರತು ನನ್ನದಲ್ಲ, ಎಂಬ ಭಾವವುಳ್ಳವನಿಗೆ ಮಲತ್ರಯಗಳು ಅಳಿದು ಹೋಗುವುವು, ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಫೂತಕ, ಉಜ್ಜಿಸ್ಮಸೂತಕ, ಇವೇ ಪಂಚಸೂತಕಗಳು, ಸ್ಥಾನ ರಾದಿ ಅನ್ಯಲಿಂಗಪೂಜೆ, ತೀರ್ಥಕ್ಷೇತ್ರಯಾತ್ರೆ, ಇತ್ಯಾದಿಗಳೇ ಅನ್ಯದೇ ವಾರ್ಚನೆಯು, ಲಿಂಗವಿಹೀನರಾದವರನ್ನು ತನ್ನ ತಾಯ್ತಂದೆ ಬಂಧುಗಳೆಂ ದು ಭಾವಿಸುವುದು ಭವಿಸಂಗವು. ಇವೆಲ್ಲವನ್ನೂ ಬಿಡಬೇಕು ಎನ್ನಲು, ( ಗುರುವೆ ! ನನ್ನ ಕಲ್ಪತರುವೆ ! ತಮ್ಮಪ್ಪಣೆಯಂತೆ ಅದೆಲ್ಲವನ್ನೂ ಬಿ ಟ್ವಿರುವೆನು ; ಇನ್ನೇನನ್ನು ಬಿಡಬೇಕೋ ಅದನ್ನೂ ಅಪ್ಪಣೆ ಕೊಡಿಸಿರಿ ; ನನ್ನನ್ನು ಶಿನದಿಕೆಯಿಂದ ಧನ್ಯನಂ ವಾಟರಿ ” ಎಂದು ಸಿದ್ದರಾಮೇಶನು ಕೇಳಿದನು. ಆಗ ಚೆನ್ನಬಸವೇಶನು ಕರುಣಾಕಟಾಕ್ಷದಿಂದ ಸಿದ್ದರಾಮೇ ಶನನ್ನು ನೋಡಿ, ಬಳಿಕ ಶಿವಶರಣರ ಕಡೆಗೆ ತಿರುಗಿ--ಈ ಸಿದ್ಧರಾಮ ಶನ ಪರಶಿವನ ಪ್ರತಿಬಿಂಬವು, ಹೇಗೆಂದರೆ- ದೂರದಲ್ಲಿ ಗಂಧದಂಪತಿಗಳಿಬ್ಬ ರು ಶಿವನ ಬಳಿಗೆ ಹೋಗುತ್ತ, ಅಲ್ಲಿದ್ದ ವೃಂಗೀಶ್ವರನನ್ನು ನೋಡಿ ನಕ್ಕೆ ರು, ಅದರಿಂದ ಭೈಂಗಿಯ ಕೆರಳಿ, " ನೀವು ಮಾನವಜನ್ಮದಲ್ಲಿ ಭವಿಗ ೪ಾಗಿ ಹುಟ್ಟರಿ ೨” ಎಂದು ಅವರಿಗೆ ಶಾಪವಿತ್ತನು. ಅವರು ಹದರ, ತಂದೆ ಯೆ, ನಾವು ಅಜ್ಞಾನದಿಂದ ನಕ್ಕೆವು, ಕರುಣದಿಂದ ಶಾಪವಿಮೋಚನವನ್ನು ಅನುಗ್ರಹಿಸಬೇಕೆಂದು ಬೇಡಲು, ನಿಮ್ಮ ಗರ್ಭದಲ್ಲಿ ಒಬ್ಬ ಶಿವಯೋಗಿಯು ಜನಿಸಿದಾಗ ವಿನೂತನವಾಗುವುದು ಎಂದು ಭೈಂಗಿ ಶನು ಹೇಳಿದನು. ಅಲ್ಲಿಂದ ಆಗಂಧವರು ಶಿವನಬಳಿಗೆ ಹೋಗಿ ತನಗಾದ ಸಂಕಟವನ್ನು ಹೆ ೪ಕೊಂಡು ಅತ್ತರು. ಆಗ ಶಂಕರನ- ನೀವು ಹೆದರಬೇಡಿರಿ, ನಿಮ್ಮ ಗ ರ್ಭದಲ್ಲಿ ನನ್ನ ಪ್ರತಿರೂಪನೇ ಅವತರಿಸಿ, ನಿಮಗೆ ಮುಕ್ತಿಗುಡುವಂತೆ ನಾ ಡುವೆನು, ಎಂದು ಅಭಯವನ್ನು ಕೊಟ್ಟನು. ಆ ದಂಪತಿಗಳು ಸೊನ್ನಲಿಗೆ (ಸೊಲ್ಲಾಪುರ) ಯೆಂಬ ಊರಿನಲ್ಲಿ ಕುಡಿಯೋಕ್ಕಲಿಗರಿಬ್ಬರ ಗರ್ಭದಲ್ಲಿ ಜ ನಿಸಿದರು, ಗಂಡನು ಮುದ್ದಗೌಡರಾದನು, ಹೆಂಡತಿಯು ಸುಗ್ತಾಯಿಯಾ 59