ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಕಾಲಜ್ಞಾನವು ೪ಂಗ ನಿ, ಒಂದು ಮಣವೂ ಮೂರು ಕಂಡುಗದ ತೂಕವಿದ್ದ ಅಪ್ಪು ಹಲ್ಲುಗಳ ನ್ಯೂ ಕಣಜದಲ್ಲಿ ತುಂಬಿಸುವನು. ಬಳಿಕ ಹೊಳೆಯಲ್ಲಿದ್ದ ವೀರೇಶನನ್ನು ತೆಗೆದು, ಬಾಳೆಯೆಲೆಯಮೇಲೆ ಅದನ್ನು ಮಲಗಿಸಿ, ಸಾಗಿಸಿತಂದು, ಹೊ ನ್ಯೂರಿನ ಬಳಿಯಲ್ಲಿ ಒಂದು ಗುಡಿಯನ್ನು ಕಟ್ಟಿಸಿ, ಪ್ರತಿಪ್ಪಿಸಿ, ತಾನೂ ಅಲ್ಲೇ ನೆಲಸಿ, ಉಳಿದಿರುವ ದುರ್ಜನರನ್ನು ಸಕ್ಕರಿಸಬೇಕೆಂದು ಯೋ ಚಿಸಿ, “ ಬಾಳೆಹಳ್ಳಿ ೨” ಯೆಂಬ ಊರನ್ನು ಅಲ್ಲೇ ಕಟ್ಟಿಸಿ, ಸಹ್ಮಾಸನಾ ಸೀನನಾಗಿದ್ದು, ಕೆಲಕಾಲಾನಂತರ, ಚರಪತಿಗಳಲ್ಲಿ ಯೋಗ್ಯನಾಗಿ ತೋ ರಿದವನೊಬ್ಬನನ್ನು ಕರೆದು, ಆತನಿಗೆ ಪಟ್ಟವನ್ನು ಕಟ್ಟಿ, ಶಿವಶರಣರನ್ನು ಪಾಲಿಸುವುದೂ, ಪರವಾದಿಗಳನ್ನು ಜೈಸುವುದೂ, ನಿನಗೆ ಮುಖ್ಯಕಾಸ್ತ್ರ ವಾಗಿರಬೇಕೆಂದು ಬೋಧಿಸಿ, ತಾನು ಶಿವಯೋಗಸಮಾಧಿಯಲ್ಲಿರುವನು. ದಿಗಂಬರಮುಕ್ತಿಮುನಿನಾಥನ ಅಪ್ಪಣೆಯಂತೆಯೇ ಆ ಸುಕುಮಾರ ಚೆನ್ನ ಬಸವೇಶನು ನಡೆಯುತ್ತಿರಲು, ಚರಪತಿಗಳಲ್ಲಿ ಒಬ್ಬನಾದ ಚಿಕ್ಕಸಿದ್ದೇ ಶರನು ಚರಸಮೂಹದೊಡನೆ ಸಂಚರಿಸಿಕೊಂಡು ಕಿವಗಂಗೆಗೆ ಹೋಗಿ, ಅಲ್ಲಿನ ಹೊನ್ನಾದೇವಿಯಿಂದ ಕಂಕಣವನ್ನು ಪಡೆಯುವನು. ಬಸವೇಶನು ಐಕ್ಯವಾದ ೬೦ ವರ್ಷಗಳನಂತರ ಅಳಿಯ ಬಿಜ್ಜಳನು ತುರುಕರೊಡನೆ ಕಾಯ್ತು ಸಾಯುವನು. ತುರುಕರು ಕಲ್ಯಾಣವನ್ನು ಕೆಡಿಸಿ, ತ್ರಿಪುರಾಂ ತಕ ದೇವಾಲಯದಲ್ಲಿ ಗೋವುಗಳನ್ನು ಕೊಂದು, ಧ್ವಜಸ್ತಂಭವನ್ನು ಮುರಿದು, ಅಲ್ಲಿ ಮಸೀದಿಯನ್ನು ಕಟ್ಟಿಸುವರು, ಕಲ್ಯಾಣದ ಪ್ರಜೆಗಳ ನೆಲ್ಲ-ಸುಲಿದು ಸೂರೆಮಾಡುವರು. ಅವರಲ್ಲಿ ಕೇವಲ ಶಿವವ್ರತತತ್ಪರರಾದ ಗುಮ್ಮಣ್ಣ ಪೆನ್ನಣ್ಣನೆಂಬಿಬ್ಬರು ತಪ್ಪಿಸಿಕೊಂಡು, ದಕ್ಷಿಣಕಾಶಿಯೆಂದು ಪ್ರಸಿದ್ದವಾದ ಶಿವಗಂಗೆಗೆ ಹೋಗಿ, ಅದರ ಬಳಿಯಲ್ಲಿ ಗುಮ್ಮಳಾಪುರವೆಂಬ ಹೆಸರಿನಿಂದ ಒಂದು ಪಟ್ಟಣವನ್ನು ಕಟ್ಟಿಸಿಕೊಂಡಿರುವರು. ಅದನ್ನು ಕಟ್ಟಿ ಸುವಾಗ ಅವರು ಹಸಿಯ ಮಣ್ಣಿನ ಗಡಿಗೆಯಲ್ಲಿ ಜಂಗಮಪಾದೋದಕವ ನ್ನು ತುಂಬಿ, ಹರಿವಾಣದಲ್ಲಿಟ್ಟು, ಹೊತ್ತುಕೊಂಡು ಆ ಪುರದ ಎಲ್ಲೆಗೆ ಸರಿ ಯಾಗಿ ತಿರುಗಿ ಬಂದು, ಮಧ್ಯದಲ್ಲಿ ಕಲಶವನ್ನು ನಿಕ್ಷೇಪಿಸಿ, ಲಿಂಗವಿಲ್ಲದ ಭವಿಯು ಈ ಮೂರನ್ನು ಪ್ರವೇಶಿಸಿದರೆ, ಕೂಡಲೇ ಸಾಯಲಿ” ಎಂದು ಆ ಜ್ಞಾಪಿಸುವರು, ಆ ಪಟ್ಟಣವು ಅತ್ಯಂತವೈಭವದಿಂದ ಮೆರೆಯುತ್ತಿರುವು