ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬) ಬ್ರಹ್ಮರಕ್ಷೆವೆನು +4 ಸುತ್ತಿರುವರು. ಅದರಿಂದಲೇ ನನಗೆ ಸುರಜೇಷ್ಠನೆಂಬ ಹೆಸರು ಬಂದಿ ರುವುದು, ಅದುಕಾರಣ ನಾನೇ ಪರಬ್ರಹ್ಮ, ನನಗಿಂತಲೂ ಪರವಾದ ದೈವವು ಬೇರೊಂದಿಲ್ಲವೆಂದು ತಿಳಿದುಕೊಳ್ಳಿರಿ, ಎಂದು ಹೇಳುತ್ತಿದ್ದ ನು, ಈ ವಾರೆಯನ್ನು ವಿಸ್ಸುವು ಕೇಳಿ, ಬ್ರಹ್ಮನ ಈ ಅಜ್ಞಾನವ ನ್ನು ತೊಲಗಿಸಬೇಕೆಂದು ಯೋಚಿಸಿ, ಬಂದು, ಮುಂದೆ ನಿಂತು, ಇದೇ ನಯ ಬ್ರಹ್ಮ ! ನಿನು ಮೇರೆದಪ್ಪಿ ಮಾತನಾಡಿದ ಬಳಿಕ ಇನ್ನು ಸ ಮಾಧಾನಪಡಿಸುವರಾರು ? ಇದೇಕೆ ನಿನಗಿಂತಹ ಹುಚ್ಚು ಹಿಡಿದಿತು ? ಇ ದೆಲ್ಲ ಶಿವನ ಮಾಯೆ ಯಲ್ಲದಿದ್ದರೆ ನೀನು ತಾನೇ ಹೀಗಾಡುತ್ತಿದ್ದೆಯಾ ? ಚೆನ್ನಾಯಿತು ! ! ನೀನು ಜಗತ್ಪಸ್ಮಿಕ; ನಾನು ಪಾಲನ ಕರ; ನ ವಿಬ್ಬರಿಗೂ ಶಿವನೇ ಸ್ವಾಮಿಯು; ಅವನೇ ಪರದೈವವು. ಸಕಲ ಲೋ ಕಾಧಾರನು, ನಾನು ನಿನು ಮೊದಲಾದ ಸಕಲರೂ ಅಸತಂತ್ರರು, ನಾವೆಲ್ಲರೂ ಆ ಪರಶಿವನ ಸೂತ್ರದ ಬೊಂಬೆಗಳು, ಹೀಗಿರುವಲ್ಲಿ ನೀನು ಅಹಂಕಾರದ ಮಾತನಾಡಬಹುದೆ ? ನನ್ನ ಮಾತಿನಲ್ಲಿ ನಿನಗೆ ನಂಬುಗೆಯಿ ಲ್ಲದಿದ್ದರೆ ವೇದಗಳನ್ನೇ ಕೇಳು ಎಂದನು, ಅಸ್ಟ್ರಲ್ಲಿ ಋಗ್ಯಜಿಸ್ಸಾಮಾ ಘರ ಗಳೆಂಬ ಚತುರೇದಗಳ ಸಾಕಾರವಾಗಿ ಬಂದು, ಮುಂದೆ ನಿಂ ತ.... ಎಲೆ ಬ್ರಹ್ಮನೆ: ! ಆ ಪರಶಿವನೊಬ್ಬನೇ ಅದ್ವಿತೀಯನು; ಅಭವನು, ಅತ್ಯತಿಷ್ಠದ್ದಶಾಂಗುಲನ, ಅವನೇ ಸರಲೋಕಾಧಾರನು. ನಿನಗೆ ಈ ಮ ರುಳುತನವು ಸಲ್ಲದು, ಬಿಡು, ಎಂದು ನುಡಿದುವು. ಬಳಿಕ ವೇದಮೂಲ ವಾದ ಪ್ರಣವ ಸಾಕಾಗವಾಗಿ ಬಂದು, ಎಲೆ ಬ್ರಹ್ಮನೇ ! ಶಿವನೊಬ್ಬ ನೇ ಅಜ, ಅಪ್ರಮೇಯ, ಅವ್ಯಯ, ತ್ರಿಜಗದಂದಿತ; ಸಾಕ್ಷಾತ್ಸರಬ ಹೈ; ನೀನು ದೇವೋತ್ತಮನೆಂದು ಹೇಳಿಕೊಳ್ಳುವ ಅಹಂಕಾರದ ಮಾ ತು-ಹಿಂದೆ ಯಾವನೋ ಒಬ್ಬನು “ ನನ್ನ ತಾಯಿ ಒಂಜೆ, ಇದು ಸತ್ಯ” ವೆಂದು ಸಾಧಿಸಿ ನುಡಿದ ಗಾಧೆಗೆ ಸಮನಾಗಿದೆ. ಸಾಕು; ನಿನ್ನ ಮರುಳ್ಳನ ವನ್ನು ಬಿತೆಂದು ಬೋಧಿಸಿ ಬಯಲಾಯಿತು. ಇದನ್ನೆಲ್ಲ ಬ್ರಹ್ಮನು ಕೇಳಿ, ಧಿಕ್ಕರಿಸಿ, ವಿಷ್ಣುವಿನ ಮುಖವನ್ನು ನೋಡಿ, ಏನಯ್ಯಾ ! ಹೆಂಡತಿಗೆ ಅರ್ಧದೇಹವನ್ನು ಕೊಟ್ಟು, ಚವನ್ನು ಹೊದೆದು, ಸ್ಮಶಾನದಲ್ಲಿ ಓಡಿ ಯಾಡುತ್ತ ಆಶುಚಿಯಾಗಿರುವ ಆ ತಿರಿಕನನ್ನು ದೇವೋತ್ತಮನೆಂದು